ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಲಿಮಿಟೆಡ್‌ಗೆ ಹಣಕಾಸಿನ ಬಿಡ್ ಆಹ್ವಾನಿಸುವ ಸನಿಹದಲ್ಲಿದೆ. ತೆರಿಗೆದಾರರ ಹಣದಲ್ಲಿ ಉಳಿದಿರುವ ವಿಮಾನಯಾನ ಸಂಸ್ಥೆ ಮಾರಾಟದತ್ತ ಸಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ವಿನಂತಿಯ ದಿನಾಂಕದಿಂದ ಬಿಡ್ದಾರರು ತಮ್ಮ ಹಣಕಾಸಿನ ಪ್ರಸ್ತಾಪ ಸಲ್ಲಿಸಲು 90 ದಿನಗಳ ಕಾಲಾವಕಾಶ ಇರುತ್ತದೆ.
ಭಾರತದ ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಅವರು ಸಂಸ್ಥೆಗೆ ಬರುವ ಬಿಡ್‌ಗಳನ್ನು ಶಾರ್ಟ್ ಲಿಸ್ಟ್ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಒಂದು ದಶಕದಲ್ಲಿ ಸರ್ಕಾರವು ಅನೇಕ ಬಾರಿ ರಕ್ಷಿಸಿದ ಉದ್ಯಮವನ್ನು ಮಾರಾಟ ಮಾಡಲು ಮುಂದಾಗಿದೆ. ಹಣಕಾಸಿನ ಬಿಡ್ಗಳ ಆಹ್ವಾನಗಳು ಈಗಾಗಲೇ ಪ್ರಗತಿಯಲ್ಲಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ, ಕೆಂಪೇಗೌಡ ಏರ್ಪೋರ್ಟ್ ಸೇರಿ ಹಲವು ಯೋಜನೆಗೆ ₹ 14,889 ಕೋಟಿ ಜಪಾನ್ ಸಾಲ
ಜೂನ್ ತಿಂಗಳಲ್ಲಿ ವಹಿವಾಟು ನಿರ್ಧರಿಸಲು ಸರ್ಕಾರ ಉದ್ದೇಶಿಸಿದೆ. ಆ ತಿಂಗಳ ಮೊದಲ ವಾರದೊಳಗೆ ಹಣಕಾಸಿನ ಬಿಡ್‌ಗಳನ್ನು ನಿಗದಿಪಡಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭವಿಷ್ಯದ ಮಾಲೀಕರನ್ನು ಏರ್ ಇಂಡಿಯಾಕ್ಕೆ ಮೇ ಅಂತ್ಯದೊಳಗೆ ಆಯ್ಕೆ ಮಾಡುವ ನಿರ್ಧಾರವನ್ನು ಕೇಂದ್ರ ತೆಗೆದುಕೊಂಡಿದೆ.
ಮಾರ್ಚ್ 25ರಂದು ನಡೆದ ಸಭೆಯಲ್ಲಿ ಸರ್ಕಾರವು 64 ದಿನಗಳೊಳಗೆ ಹಣಕಾಸಿನ ಬಿಡ್‌ಗಳನ್ನು ಸ್ಥಗಿತಗೊಳಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಅಂತಿಮ ಪ್ರಕಟಣೆ ಮಾಡಲಾಗುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಹಣಕಾಸಿನ ಬಿಡ್‌ಗಳನ್ನು ಆಹ್ವಾನಿಸುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಏರ್ ಇಂಡಿಯಾದ ಹೂಡಿಕೆ ಪ್ರಕ್ರಿಯೆ ಮುಗಿಸುವುದು ಕೇಂದ್ರದ ಗುರಿಯಾಗಿದೆ.