ನವದೆಹಲಿ: ದಶಕದಿಂದ ಏರ್ ಇಂಡಿಯಾ ಸರ್ವರ್ ಮೇಲೆ ಸೈಬರ್ ದಾಳಿ ನಡೆದು, ಗ್ರಾಹಕರ ವೈಯಕ್ತಿಕ ಮಾಹಿತಿ ಸೇರಿದಂತೆ ಕ್ರೆಡಿಟ್ ವಿವರಣೆ ಸೋರಿಕೆ ಆಗಿದೆ ಎಂಬುದನ್ನು ಸಂಸ್ಥೆ ಬಹಿರಂಗ ಪಡಿಸಿದೆ. ಈ ಸಂಬಂಧ ಮಾಹಿತಿ ಹಂಚಿಕೊಳ್ಳಲು ಸಹಾಯವಾಣಿ ಸಹ ತೆರೆದಿದೆ.
ಏರ್ ಇಂಡಿಯಾದ ಡಾಟಾ ಪ್ರೊಸೆಸರ್ ಮೇಲೆ ಭಾರಿ ಸೈಬರ್ ದಾಳಿಯಲ್ಲಿ ಕ್ರೆಡಿಟ್ ಕಾರ್ಡ್‌ಗಳು, ಪಾಸ್‌ಪೋರ್ಟ್ ಮತ್ತು ಫೋನ್ ಸಂಖ್ಯೆಗಳು ಸೇರಿದಂತೆ ರಾಷ್ಟ್ರೀಯ ವಾಹಕದ ಗ್ರಾಹಕರ ಡೇಟಾ 10 ವರ್ಷಗಳಿಂದ ಸೋರಿಕೆ ಮಾಡಲಾಗಿದೆ.
ಏರ್ ಇಂಡಿಯಾದ ಪ್ರಯಾಣಿಕರ ಸೇವಾ ವ್ಯವಸ್ಥೆ ಒದಗಿಸುವವರು ಈ ವರ್ಷದ ಫೆಬ್ರವರಿಯಲ್ಲಿ ಬಹುದೊಡ್ಡ ಸೈಬರ್ ದಾಳಿ ಎದುರಿಸಿದ್ದಾರೆ. ಇದು 4.5 ದಶಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿಯ ಸೋರಿಕೆಗೆ ಕಾರಣವಾಯಿತಾ?. ಡೇಟಾ ಉಲ್ಲಂಘನೆಗೆ ಸಂಬಂಧಿಸಿದಂತೆ ಗ್ರಾಹಕರು ಹೆಚ್ಚಿನ ಮಾಹಿತಿ ಪಡೆಯಲು ಬಯಸಿದರೆ ಕಂಪನಿಯು ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆ ಒದಗಿಸಿದೆ.
ಇದನ್ನೂ ಓದಿ: ಆಗಸ್ಟ್ನಿಂದ ಸ್ಪುಟ್ನಿಕ್ ಲಸಿಕೆ ಉತ್ಪಾದನೆ: ಜಾಗತಿಕ ಪ್ರೊಡಕ್ಷನ್ ಪೈಕಿ ಶೇ 70ರಷ್ಟು ಭಾರತದಲ್ಲೇ ತಯಾರಿಕೆ!
ಗ್ರಾಹಕರಿಗೆ ಇಮೇಲ್ನಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಬಯಸಿದರೆ, ದೀಪಕ್ ಸಾಂಗ್ವಾನ್ ಅವರನ್ನು ಸಂಪರ್ಕಿಸಬಹುದು. ಅವರ ಇಮೇಲ್ ಐಡಿ aidata.helpdesk@airindia.in ದೂರವಾಣಿ ಸಂಖ್ಯೆ 01242641415ಗೆ ಕರೆ ಮಾಡಬಹುದು ಅಥವಾ http://www.airindia.in/images/pdf/Data-Breach-Notification.pdf ಲಿಂಕ್ನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಕರೆ ಮಾಡಬಹುದು ಎಂದು ಎಐ ಹೇಳಿದೆ.
ಈ ಸೈಬರ್ ದಾಳಿಯಿಂದಾಗಿ ವಿಶ್ವದ ಸುಮಾರು 4,500,000 ದತ್ತಾಂಶ ಕಂಟೆಂಟ್ಗಳ ಮೇಲೆ ಪರಿಣಾಮ ಬೀರಿದೆ. ಆಗಸ್ಟ್ 2011 ಮತ್ತು ಫೆಬ್ರವರಿ 2021ರ ನಡುವಿನ ಅವಧಿಯಲ್ಲಿ ಈ ಉಲ್ಲಂಘನೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಹೆಸರು, ಜನ್ಮ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾ ಆಗಾಗ್ಗೆ ಫ್ಲೈಯರ್ ಡೇಟಾ ಒಳಗೊಂಡಿರುವ ವಿವರಗಳೊಂದಿಗೆ 2011ರ 26 ಆಗಸ್ಟ್ ಮತ್ತು 2021ರ ಫೆಬ್ರವರಿ 3ರ ನಡುವೆ ನೋಂದಾಯಿತ ವೈಯಕ್ತಿಕ ಡೇಟಾ ಒಳಗೊಂಡಿತ್ತು (ಯಾವುದೇ ಪಾಸ್‌ವರ್ಡ್‌ಗಳ ಡೇಟಾ ಪರಿಣಾಮ ಬೀರಿಲ್ಲಿ) ಕ್ರೆಡಿಟ್ ಕಾರ್ಡ್‌ಗಳ ಡೇಟಾ ಕದಿಯಲಾಗಿದೆ ಏರ್ ಇಂಡಿಯಾ ಅಧಿಸೂಚನೆಯಲ್ಲಿ ತಿಳಿಸಿದೆ.