ನವದೆಹಲಿ: ನಿನ್ನೆಯಷ್ಟೇ ತನ್ನ ಉತ್ಪನ್ನಗಳ ದರ ಏರಿಕೆ ಮಾಡುವುದಾಗಿ ಘೋಷಿಸಿದ್ದ ಮಾರುತಿ ಸುಜುಕಿ ಬಳಿಕ ನಿಸ್ಸಾನ್ ಇಂಡಿಯಾ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಸ್ಸಾನ್ ಮತ್ತು ದಟ್ಸನ್ನಲ್ಲಿ ಲಭ್ಯವಿರುವ ಎಲ್ಲಾ ಮಾಡಲ್ಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ.
ಆಟೋ ಕಾಂಪೊನೆಂಟ್ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬಂದಿದೆ. ಕಳೆದ ಕೆಲವು ತಿಂಗಳಿಂದ ನಾವು ಈ ಹೆಚ್ಚಳ ತೆಡೆಯಲು ಪ್ರಯತ್ನಿಸಿದ್ದೇವೆ. ಈಗ ನಾವು ಎಲ್ಲಾ ನಿಸ್ಸಾನ್ ಮತ್ತು ದಟ್ಸನ್ ಮಾದರಿಗಳಲ್ಲಿ ಬೆಲೆಗಳನ್ನು ಹೆಚ್ಚಿಸುತ್ತಿದ್ದೇವೆ. ಈ ಹೆಚ್ಚಳವು ಮಾಡಲ್ನಿಂದ ಮಾಡಲ್ಗಳಿಗೆ ಬದಲಾಗುತ್ತದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ್ ಹೇಳಿದರು.
ಇದನ್ನೂ ಓದಿ: ಕಾನೂನುಬದ್ಧ ಕುಡಿಯುವ ವಯೋಮಿತಿ 25 ರಿಂದ 21ಕ್ಕೆ ಇಳಿಸಿದ ಕೇಜ್ರಿವಾಲ್ ಸರ್ಕಾರ
ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಬೆಲೆ ಏರಿಕೆ ಘೋಷಣೆ ಮಾಡಿದ ಒಂದು ದಿನದ ನಂತರ ನಿಸ್ಸಾನ್ ತನ್ನ ನಿರ್ಧಾರ ಪ್ರಕಟಿಸಿದೆ. ಮಾರುತಿ ಈ ವರ್ಷ ತನ್ನ ಎರಡನೇ ಬಾರಿ ದರ ಏರಿಕೆ ಮಾಡುವುದಾಗಿ ಪ್ರಕಟಿಸಿದೆ. ಹೆಚ್ಚಿನ ಇನ್‌ಪುಟ್ ವೆಚ್ಚಗಳ ಪರಿಣಾಮವನ್ನು ಸರಿದೂಗಿಸಲು ಮುಂದಿನ ತಿಂಗಳಿನಿಂದ ತನ್ನ ಮಾದರಿ ವ್ಯಾಪ್ತಿಯಲ್ಲಿ ಬೆಲೆಗಳನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಈ ಹಿಂದೆ ಜನವರಿ 18ರಂದು ದರ ಪರಿಷ್ಕರಣೆ ಮಾಡಲಾಯಿತು.