ETV Bharat / business

ಫೋನ್​ ಪೇ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ ಘೋಷಿಸಿದ ಅಫಲ್​ ಸಂಸ್ಥೆ - ಇಂಡಸ್​​ ಆ್ಯಪ್ ಬಜಾರ್

ಫೋನ್‌ ಪೇಗೆ ಷೇರು ಮಾರಾಟಕ್ಕೆ ಇಂಡಸ್​​ ಓಎಸ್ ಅಂಗೀಕರಿಸಿದ ನಿರ್ಣಯದ ವಿರುದ್ಧ ಎಜಿಪಿಎಲ್ ತಡೆಯಾಜ್ಞೆ ಮೊಕದ್ದಮೆ ಹೂಡಿದ್ದು, ಇದನ್ನು ಸಿಂಗಪೂರ್ ನ್ಯಾಯಾಲಯದಲ್ಲಿ ಫಿನ್‌ಟೆಕ್ ಸಂಸ್ಥೆ ಪ್ರಶ್ನಿಸಿದೆ. ಎಜಿಪಿಎಲ್ ಮತ್ತು ಇಂಡಸ್​​​ ಓಎಸ್ ಎರಡೂ ಸಿಂಗಪೂರ್​​ನಲ್ಲಿ ನೋಂದಣಿಯಾಗಿರುವ ಸಂಸ್ಥೆಯಾಗಿವೆ.

affle-claims-victory-in-indus-os-stake-sale-lawsuit
ಫೋನ್​ ಪೇ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ ಘೋಷಿಸಿದ ಅಫಲ್​
author img

By

Published : Jun 26, 2021, 9:01 PM IST

ನವದೆಹಲಿ: ಇಂಡಸ್​ ಓಎಸ್ ಷೇರು ಮಾರಾಟ ಪ್ರಕರಣದಲ್ಲಿ ವಾಲ್​ಮಾರ್ಟ್​​ ಒಡೆತನದ ಫೋನ್​​ ಪೇ ವಿರುದ್ಧ ಆರಂಭಿಕ ಕಾನೂನು ಹೋರಾಟದಲ್ಲಿ ಅಫಲ್ ಸಂಸ್ಥೆ ಜಯಗಳಿಸಿರುವುದಾಗಿ ತಿಳಿಸಿದೆ. ಷೇರು ಮಾರಾಟ ಪ್ರಕ್ರಿಯೆಯ ಕುರಿತ ವಿಚಾರ ಸಂಬಂಧ ಸಿಂಗಪೂರ್ ಕೋರ್ಟ್​ನಲ್ಲಿ ಡಿಜಿಟಲ್ ಜಾಹೀರಾತು ಸಂಸ್ಥೆ ಅಫಲ್ ಫೋನ್​ ಪೇ ವಿರುದ್ಧದ ಪ್ರಕರಣ ಜಯಿಸಿರುವುದಾಗಿ ತಿಳಿಸಿದೆ.

ಇಂಡಸ್​​​ ಓಎಸ್​​​​​ನಲ್ಲಿ ಶೇ.92ರಷ್ಟು ಪಾಲನ್ನು 60 ಮಿಲಿಯನ್ ಯುಎಸ್ ಡಾಲರ್ ನೀಡಿ ಸ್ವಾಧೀನಪಡಿಸಿಕೊಳ್ಳಲು ಫೋನ್ ​​ಪೇ ಬಿಡ್ ಸಲ್ಲಿಸಿತ್ತು. ಆದರೆ, ಈ ಸಂಸ್ಥೆಯಲ್ಲಿ ಅತೀ ಹೆಚ್ಚು ಷೇರು ಹೊಂದಿರುವ ಅಫಲ್​ ಗ್ಲೋಬಲ್ ಪ್ರೈವೆಟ್​​​ ಲಿಮಿಟೆಡ್​​​ (ಎಜಿಪಿಎಲ್) ಈ ಒಪ್ಪಂದವನ್ನು ವಿರೋಧಿಸಿತ್ತು.

ಇಂಡಸ್ ಓಎಸ್ ಎಂದು ಕರೆಯಲ್ಪುಡುವ ಓಎಸ್​​ ಲ್ಯಾಬ್ಸ್​ನಲ್ಲಿದ್ದ ಎಜಿಪಿಎಲ್​​​ನ ಷೇರಿನ ಮೌಲ್ಯ 90 ಮಿಲಿಯನ್ ಯುಸ್​​ ಡಾಲರ್ ಎನ್ನಲಾಗಿದ್ದು, ಶೇ.25ರಷ್ಟು ಕಡಿಮೆ ಮೌಲ್ಯಕ್ಕೆ ಮಾರಾಟ ಮಾಡಲು ಷೇರುದಾರ ಕಂಪನಿ ನಿರಾಕರಿಸಿತ್ತು. 4 ಲಕ್ಷಕ್ಕೂ ಅಧಿಕ ಆ್ಯಪ್​ ಹೊಂದಿರುವ ಇಂಡಸ್​​ ಓಎಸ್​​ನ ‘ಇಂಡಸ್​​ ಆ್ಯಪ್ ಬಜಾರ್’ನಲ್ಲಿ ಭಾರತದ ಹಿಂದಿ, ಮರಾಠಿ, ಕನ್ನಡ, ತಮಿಳು, ತೆಲುಗು, ಉರ್ದು, ಒಡಿಯಾ, ಪಂಜಾಬಿ, ಅಸ್ಸಾಮಿಸ್, ಬಂಗಾಳಿ ಭಾಷೆಯಲ್ಲಿ ಆ್ಯಪ್ ಬಳಕೆಯಲ್ಲಿತ್ತು.

ಫೋನ್‌ ಪೇಗೆ ಷೇರು ಮಾರಾಟಕ್ಕೆ ಇಂಡಸ್​​ ಓಎಸ್ ಅಂಗೀಕರಿಸಿದ ನಿರ್ಣಯದ ವಿರುದ್ಧ ಎಜಿಪಿಎಲ್ ತಡೆಯಾಜ್ಞೆ ಮೊಕದ್ದಮೆ ಹೂಡಿದ್ದು, ಇದನ್ನು ಸಿಂಗಪೂರ್ ನ್ಯಾಯಾಲಯದಲ್ಲಿ ಫಿನ್‌ಟೆಕ್ ಸಂಸ್ಥೆ ಪ್ರಶ್ನಿಸಿದೆ. ಎಜಿಪಿಎಲ್ ಮತ್ತು ಇಂಡಸ್​​​ ಓಎಸ್ ಎರಡೂ ಸಿಂಗಪೂರ್​​​ನಲ್ಲಿ ನೋಂದಣಿಯಾಗಿರುವ ಸಂಸ್ಥೆಯಾಗಿವೆ.

ಎಜಿಪಿಎಲ್ ಸಿಂಗಪೂರ್ ಕೋರ್ಟ್‌ನಲ್ಲಿ 2020 ಮೇ 19 ರಿಂದ 2021 ಜೂನ್ 18ರ ವರೆಗೆ 7ಕ್ಕೂ ಹೆಚ್ಚು ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಿದೆ. ಜೂನ್ 21, 2021ರ ಹೊತ್ತಿಗಾಗಲೇ ಫೋನ್​ ಪೇ ಕಾನೂನು ಹೋರಾಟದಲ್ಲಿ ಸೋಲೊಪ್ಪಿಕೊಂಡಿದೆ ಎಂದು ಎಜಿಪಿಎಲ್​ ತಿಳಿಸಿದೆ.

ಓದಿ: ರೈಲ್ವೆ ಟಿಕೆಟ್​​ ಬುಕ್ಕಿಂಗ್​.. ಏಜೆಂಟ್​ರಗಳಿಗೆ ಬ್ರೇಕ್​ ಹಾಕಲು ಆರ್​ಪಿಎಫ್​ ಹೊಸ ಪ್ಲಾನ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.