ನವದೆಹಲಿ: ಬೆಳೆಯುತ್ತಿರುವ ಉಡುಪು ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಬಲಪಡಿಸಲು ಮತ್ತು ಐಷಾರಾಮಿ ವಿಭಾಗದಲ್ಲಿ ಹಿಡಿತ ಸಾಧಿಸಲು ಡಿಸೈನರ್ ಬ್ರಾಂಡ್ ಸಬಿಯಾಸಾಚಿಯಲ್ಲಿ ಶೇ. 51ರಷ್ಟು ಪಾಲು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್ ಲಿಮಿಟೆಡ್ ತಿಳಿಸಿದೆ.
ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್ ಲಿಮಿಟೆಡ್ (ಎಬಿಎಫ್ಆರ್ಎಲ್) ಸಬಿಯಾಸಾಚಿ ಬ್ರಾಂಡ್‌ನಲ್ಲಿ ಶೇ. 51ರಷ್ಟು ಪಾಲು ಖರೀಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಒಟ್ಟಾರೆ ಮೊತ್ತ 398 ಕೋಟಿ ರೂಪಾಯಿಯಷ್ಟಿದೆ.
ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯು ಈ ಸ್ವಾಧೀನ ಪ್ರಕ್ರಿಯೆಯನ್ನು 30 ರಿಂದ 45 ದಿನಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಅಭಿವೃದ್ಧಿಯ ಅಲೆ ಅರಾಜಕತೆಯ ಪಿತೂರಿಯಿಂದ ನಿಲ್ಲುವುದಿಲ್ಲ: ನಖ್ವಿ ಆಕ್ರೋಶ
ಸಬಿಯಾಸಾಚಿ ಬ್ರಾಂಡ್ ವಿನ್ಯಾಸ ಮತ್ತು ಕರಕುಶಲತೆಯ ಶ್ರೇಷ್ಠತೆಗೆ ಒತ್ತು ನೀಡುವ ಮೂಲಕ ಹೊಸ ಮಾನದಂಡಗಳನ್ನು ರೂಪಿಸಿದೆ. ಅತ್ಯಾಧುನಿಕ ಜಾಗತಿಕ ಭಾರತೀಯ ಗ್ರಾಹಕರ ಕಲ್ಪನೆಯನ್ನು ಸೆಳೆಯುತ್ತದೆ ಎಂದು ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ಚಿಲ್ಲರೆ ಲಿಮಿಟೆಡ್ (ಎಬಿಎಫ್ಆರ್ಎಲ್) ವ್ಯವಸ್ಥಾಪಕ ನಿರ್ದೇಶಕ ಆಶಿಶ್ ದೀಕ್ಷಿತ್ ಹೇಳಿದ್ದಾರೆ.
ಸಬಿಯಾಸಾಚಿ ಬ್ರಾಂಡ್ ಉಡುಪು, ಪರಿಕರ ಮತ್ತು ಆಭರಣಗಳಂತಹ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ದೇಶೀಯ ಮಾರುಕಟ್ಟೆಯ ಜೊತೆಗೆ ವಿದೇಶಿ ಮಾರುಕಟ್ಟೆಗಳಾದ ಅಮೆರಿಕ, ಇಂಗ್ಲೆಂಡ್ ಮತ್ತು ಮಧ್ಯಪ್ರಾಚ್ಯದಲ್ಲಿ ಫ್ರ್ಯಾಂಚೈಸಿ ಹೊಂದಿದೆ. 2019-20ನೇ ಹಣಕಾಸು ವರ್ಷದಲ್ಲಿ 274 ಕೋಟಿ ರೂ. ಆದಾಯ ಗಳಿಸಿದೆ.