ನವದೆಹಲಿ: ಬಜೆಟ್ ಪ್ರಯಾಣಿಕ ಸಂಸ್ಥೆ ಇಂಡಿಗೊ ನಡೆಸಿದ ಸಮೀಕ್ಷೆ ಅನ್ವಯ, 68 ಪ್ರತಿಶತಕ್ಕೂ ಅಧಿಕ ಪ್ರಯಾಣಿಕರು ಕೊರೊನಾ ವೈರಸ್ ಸೋಂಕು ಹಬ್ಬುವುದನ್ನು ತಪ್ಪಿಸಲು ವಿಮಾನ ಪ್ರಯಾಣ ಸುರಕ್ಷಿತ ಸಾರಿಗೆ ವಿಧಾನ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂತರ ನಗರ ಪ್ರಯಾಣಕ್ಕೆ ವಾಯು ಸಾರಿಗೆ ಸುರಕ್ಷಿತ ಎಂದು ಶೇ 68ರಷ್ಟು ಪ್ರತಿಕ್ರಿಯಿಸಿದ್ದು, ರೈಲು ಪ್ರಯಾಣಕ್ಕೆ ಶೇ 8ರಷ್ಟು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಜನರು ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ಸುಮಾರು ಶೇ 65ರಷ್ಟು ಪ್ರಯಾಣಿಕರು ಇಂಡಿಗೊ ವಿಮಾನಯಾನ ಸಂಸ್ಥೆಯನ್ನು ಸ್ವಚ್ಛ ಮತ್ತು ಸುರಕ್ಷಿತ ಎಂದು ಹೇಳಿದ್ದಾರೆ.
ವಿಮಾನ ಪ್ರಯಾಣ ಮತ್ತು ಇಂಡಿಗೊದಲ್ಲಿ ಪ್ರಯಾಣಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲು ನಾವು ಹೊಸ ಸೇವೆಗಳನ್ನು ತಿಳಿಸಿದ್ದಾರೆ.