ನವದೆಹಲಿ: ಕೋಟ್ಯಂತರ ಮೌಲ್ಯದ ಷೇರುಗಳು, ಲಕ್ಷಾಂತರ ಸಂಖ್ಯೆಯ ಹೂಡಿಕೆದಾರರು, ನೂರಾರು ರಾಷ್ಟ್ರಗಳಲ್ಲಿ ತನ್ನ ಶಾಖೆಗಳು, ಬಿಲಿಯನ್ ಡಾಲರ್ಗಟ್ಟಲ್ಲೇ ವಹಿವಾಟು ಸೇರಿದಂತೆ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಎಂಎನ್ಸಿ ಕಂಪನಿಗಳು ಜಗತ್ತಿನಾದ್ಯಂತ ಅವರಿಸಿವೆ. ವಿಶ್ವದ ಟಾಪ್ ಶಕ್ತಿಶಾಲಿ ಕಂಪನಿಗಳು ಸಂಕ್ಷಿಪ್ತ ಮಾಹಿತಿ ಇದು.
1. ಆ್ಯಪಲ್
ಅಮೆಜಾನ್ ವಿಶ್ವದ ಅತ್ಯಮೂಲ್ಯ ಬ್ರಾಂಡ್ ಆಗಿರಬಹುದು. ಆದರೆ, ಆ್ಯಪಲ್ ಅದಕ್ಕೂ ಹೆಚ್ಚಿನ ಪ್ರಭಾವ ಮತ್ತು ಪ್ರತಿಷ್ಠೆಯ ಬ್ರಾಂಡ್ ಮೌಲ್ಯ ಹೊಂದಿದೆ. ಬ್ರಾಂಡ್ ಫೈನಾನ್ಸ್ ಗ್ಲೋಬಲ್- 500, 2018ರಲ್ಲಿ 'ಎಎಎ' ಬ್ರಾಂಡ್ ರೇಟಿಂಗ್ ನೀಡಿದೆ. ಮ್ಯಾಕ್, ಐಫೋನ್ ಮತ್ತು ಐಪ್ಯಾಡ್ ಪರಿಚಯಿಸಿದ ಜಾಗತಿಕ ಟೆಕ್ ಕಂಪನಿಯ ಒಟ್ಟು ವಹಿವಾಟು 229.2 ಬಿಲಿಯನ್ ಡಾಲರ್ ಆದಾಯವಿದ್ದು, ಕಳೆದ ವರ್ಷ ವಿಶ್ವದ ಮೊದಲ ಟ್ರಿಲಿಯನ್ ಡಾಲರ್ ಕಂಪನಿಯಾಗಿದೆ.
2. ಅಮೆಜಾನ್
ವಿಶ್ವದಾದ್ಯಂತ ಶಾಪಿಂಗ್ ಮಾಡುವ ವಿಧಾನವನ್ನೇ ಪರಿವರ್ತಿಸಿದ ಆನ್‌ಲೈನ್ ಚಿಲ್ಲರೆ ಮಾರಾಟ ದೈತ್ಯ ಅಮೆಜಾನ್, ಕಳೆದ ಎರಡು ದಶಕಗಳಲ್ಲಿ ಅದ್ಭುತವಾದ ಬೆಳವಣಿಗೆ ಕಂಡಿದೆ. ವಿಶ್ವದಾದ್ಯಂತ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ ಅಮೆಜಾನ್. ಇತ್ತೀಚಿನ ಬ್ರಾಂಡ್ ಫೈನಾನ್ಸ್ ಗ್ಲೋಬಲ್- 500 ಪ್ರಕಾರ, ಅಮೆಜಾನ್ ವಿಶ್ವದ ಅಮೂಲ್ಯ ಬ್ರಾಂಡ್ ಆಗಿದೆ. ಕಳೆದ ವರ್ಷ ಸಿಯಾಟಲ್ ಮೂಲದ ಈ ಸಂಸ್ಥೆಯು 177.9 ಬಿಲಿಯನ್ ಡಾಲರ್ ಆದಾಯ ಗಳಿಸಿತ್ತು.
3. ಗೂಗಲ್
ಗೂಗಲ್ ಸರ್ಚ್ ಎಂಜಿನ್ ದೈತ್ಯ ಜಗತ್ತನ್ನು ಗೆದ್ದು ಜನ-ಜೀವನಕ್ಕೆ ಹತ್ತಿರವಾದ ಹಲವು ಸೇವೆಗಳನ್ನು ಕಲ್ಪಿಸುತ್ತಿರವ ಬ್ರಾಂಡ್ ಎಂಬ ಹೆಗ್ಗಳಿಕೆ ಇದಕ್ಕಿದೆ. ಗೂಗಲ್ ಕ್ಲೌಡ್ನಿಂದ ಹಿಡಿದು ಸಾಮಾಜಿಕ ಮಾಧ್ಯಮಗಳವರೆಗೆ ಹಲವಾರು ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುತ್ತಿದೆ. ಯೂಟ್ಯೂಬ್ ಮತ್ತು ಜಿಗ್ಸಾದ (ಹಿಂದೆ ಗೂಗಲ್ ಐಡಿಯಾಸ್) ಗೂಗಲ್, ಮೂಲ ಕಂಪನಿ ಆಲ್ಫಾಬೆಟ್ ಇಂಕ್. ಕಳೆದ ವರ್ಷ ಇದು 110.9 ಬಿಲಿಯನ್ ಡಾಲರ್ ಆದಾಯ ನಡೆಸಿತ್ತು.
4. ಸ್ಯಾಮ್‌ಸಂಗ್
ಸ್ಯಾಮ್‌ಸಂಗ್ ಮಾಡದೆ ಇರುವುದು ಏನಾದರೂ ಇದೆಯೇ? ದಕ್ಷಿಣ ಕೊರಿಯಾದ ಮೂಲದ ಈ ಕಂಪನಿಯು ಎಲೆಕ್ಟ್ರಾನಿಕ್ಸ್, ಹಡಗು ಮತ್ತು ಕಾರುಗಳನ್ನು ತಯಾರಿಸುತ್ತದೆ. ಇದು ಥೀಮ್ ಪಾರ್ಕ್‌ಗಳನ್ನು ಸಹ ನಿರ್ಮಾಣ ಮಾಡುತ್ತಿದ್ದು, ವಿಮಾ ಸೇವೆಯನ್ನು ಒದಗಿಸುತ್ತಿದೆ. ತನ್ನದೇ ಆದ ಜಾಹೀರಾತು ಏಜೆನ್ಸಿಯನ್ನು ಸಹ ಹೊಂದಿದೆ. ಸ್ಯಾಮ್‌ಸಂಗ್ ಬ್ರ್ಯಾಂಡ್ ವಿಶ್ವಾದ್ಯಂತ ಗುರುತಿಸಲ್ಪಟ್ಟಿದ್ದು, ಕಳೆದ ವರ್ಷ ಸ್ಯಾಮ್‌ಸಂಗ್ ಗ್ರೂಪ್ 305 ಬಿಲಿಯನ್ ಡಾಲರ್ನಷ್ಟು ಆದಾಯ ಗಳಿಸಿದೆ ಎಂದು ಹೇಳಿಕೊಂಡಿದೆ.
5. ಫೇಸ್‌ಬುಕ್
ನಕಲಿ ಸುದ್ದಿ ಹರಡುವಿಕೆಯಿಂದ ಹಿಡಿದು ಕೇಂಬ್ರಿಡ್ಜ್ ಅನಾಲಿಟಿಕಾ ದತ್ತಾಂಶ ಹಗರಣದವರೆಗೆ ಫೇಸ್‌ಬುಕ್ ವಿವಾದಗಳಿಗೆ ಗುರಿಯಾಗಿದೆ. ಆದರೂ ತನ ದೀರ್ಘಾವಧಿಯ ಹೂಡಿಕೆಯಿಂದ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ತಾಣವಾಗಿದೆ. 2017ರ ನಾಲ್ಕನೇ ತ್ರೈಮಾಸಿಕದ ಹೊತ್ತಿಗೆ ಫೇಸ್‌ಬುಕ್ 2.2 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಇದರ ಒಟ್ಟು 40.7 ಬಿಲಿಯನ್ ಡಾಲರ್ ಆದಾಯ ಗಳಿಸಿದೆ.
6. ಮೈಕ್ರೋಸಾಫ್ಟ್
7. ವಾಲ್ಮಾರ್ಟ್
8. ಮರ್ಸಿಡಿಸ್ ಬೆಂಜ್
9. ಟೊಯೋಟಾ
10. ಬಿಎಂಡಬ್ಲ್ಯು