ETV Bharat / business

'ಸಾವರಿನ್​ ಗೋಲ್ಡ್​ ಬಾಂಡ್​'ಗಳು ಈಗ ಆರ್​ಬಿಐನಲ್ಲೂ ಲಭ್ಯ.. ರಿಟೇಲ್​ ಡೈರೆಕ್ಟ್​ ಪೋರ್ಟಲ್​ ಚೆಕ್​ ಮಾಡಿ - ಸಾವರಿನ್​ ಗೋಲ್ಡ್​ ಬಾಂಡ್​ಗಳು ಈಗ ಆರ್​ಬಿಐನಲ್ಲೂ ಲಭ್ಯ

ಆರ್​ಬಿಐ ಇತ್ತೀಚೆಗೆ ಆರಂಭಿಸಿದ ರೀಟೆಲ್​ ಡೈರೆಕ್ಟ್​ ಪೋರ್ಟಲ್​ನಲ್ಲಿ 'ಸಾವರಿನ್​ ಗೋಲ್ಡ್​ ಬಾಂಡ್​'ಗಳ ಖರೀದಿಗೆ ಅವಕಾಶ ನೀಡಿದೆ. 2021-22ನೇ ಸಾಲಿನ 8ನೇ ಸರಣಿಯ ಸಾವರಿನ್​ ಗೋಲ್ಡ್ ಬಾಂಡ್​ಗಳನ್ನು ಆರ್​ಬಿಐ ಬಿಡುಗಡೆ ಮಾಡಿದೆ. ಡಿಸೆಂಬರ್ 3 ರವರೆಗೆ ಬಾಂಡ್​ಗಳ ನೋಂದಣಿಗೆ ಮುಕ್ತಗೊಳಿಸಲಾಗಿದೆ.

sovereign gold
ಸಾವರಿನ್​ ಗೋಲ್ಡ್​ ಬಾಂಡ್
author img

By

Published : Dec 2, 2021, 9:29 PM IST

ಮುಂಬೈ: ನೀವು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರಾಗಿದ್ದರೆ 'ಸಾವರಿನ್​ ಗೋಲ್ಡ್​ ಬಾಂಡ್​'ಗಳಲ್ಲಿ ಹಣ ಹೂಡಿಕೆ ಮಾಡಲು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ನಿಮಗೊಂದು ಸುವರ್ಣಾವಕಾಶ ಒದಗಿಸಿದೆ.

ಆರ್​ಬಿಐ ಇತ್ತೀಚೆಗೆ ಆರಂಭಿಸಿದ ರೀಟೆಲ್​ ಡೈರೆಕ್ಟ್​ ಪೋರ್ಟಲ್​ನಲ್ಲಿ 'ಸಾವರಿನ್​ ಗೋಲ್ಡ್​ ಬಾಂಡ್​'ಗಳ ಖರೀದಿಗೆ ಅವಕಾಶ ನೀಡಿದೆ. 2021-22ನೇ ಸಾಲಿನ 8ನೇ ಸರಣಿಯ ಸಾವರಿನ್​ ಗೋಲ್ಡ್ ಬಾಂಡ್​ಗಳನ್ನು ಆರ್​ಬಿಐ ಬಿಡುಗಡೆ ಮಾಡಿದೆ. ಡಿಸೆಂಬರ್ 3 ರವರೆಗೆ ಬಾಂಡ್​ಗಳ ನೋಂದಣಿ, ಖರೀದಿಗೆ ಮುಕ್ತಗೊಳಿಸಲಾಗಿದೆ.

ಇದು ಆರ್​ಬಿಐನ ರಿಟೇಲ್ ಡೈರೆಕ್ಟ್ ಪೋರ್ಟಲ್​ನಲ್ಲಿ(https://rbiretaildirect.org.in) ಲಭ್ಯವಿದ್ದು, ಹೂಡಿಕೆದಾರರು ಬಾಂಡ್​ಗಳನ್ನು ಖರೀದಿಸಿ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡಬಹುದು ಎಂದು ಕೇಂದ್ರ ಬ್ಯಾಂಕ್ ಗುರುವಾರ ತಿಳಿಸಿದೆ.

ಸಾವರಿನ್​ ಗೋಲ್ಡ್​ ಬಾಂಡ್​ ಎಂದರೇನು?

'ಸಾವರಿನ್​ ಗೋಲ್ಡ್​ ಬಾಂಡ್​' ಚಿನ್ನದ ಮೇಲೆ ಹೂಡಿಕೆ ಮಾಡುವ ಮೂಲವಾಗಿದೆ. ನಿಗದಿ ಮಾಡಿದ ದರಗಳ ಬಾಂಡ್​ಗಳನ್ನು ಖರೀದಿಸಿ ಅವುಗಳನ್ನು ಚಿನ್ನದ ಮೇಲೆ ಹೂಡಿಕೆ ಮಾಡಬಹುದಾಗಿದೆ.

ಇಲ್ಲಿಯವರೆಗೆ ಸಾವರಿನ್​ ಗೋಲ್ಡ್​ ಬಾಂಡ್‌ಗಳನ್ನು ನಿಗದಿತ ಬ್ಯಾಂಕ್​ಗಳು(ಸಣ್ಣ ಹಣಕಾಸು ಮತ್ತು ಪಾವತಿ ಬ್ಯಾಂಕ್​ ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(SHCIL), ನಿಗದಿತ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿತ್ತು.

ಇದನ್ನೂ ಓದಿ: 2022ರ ಜನವರಿಯಿಂದ ಮಾರುತಿ ಸುಜುಕಿ ಕಾರುಗಳ ದರದಲ್ಲಿ ಏರಿಕೆ

ಇದೀಗ ಆರ್​ಬಿಐ ರೀಟೆಲ್​ ಪೋರ್ಟಲ್​ ಅನ್ನು ಹೊಸದಾಗಿ ಆರಂಭಿಸಿದ್ದು, ಪೋರ್ಟಲ್‌ನಲ್ಲಿ 'ಸಾವರಿನ್​ ಗೋಲ್ಡ್​ ಬಾಂಡ್​'ಗಳ ಖರೀದಿ ಮತ್ತು ನೋಂದಣಿಗೆ ಅವಕಾಶ ನೀಡಿದೆ. ಕಳೆದ ತಿಂಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್‌ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್ ಅನ್ನು ಲೋಕಾರ್ಪಣೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.