ಹೈದರಾಬಾದ್ : ಭಾರತೀಯ ಮಲ್ಟಿ-ಕಮೋಡಿಟಿ ಎಕ್ಸ್ಚೇಂಜ್ನ (ಎಂಸಿಎಕ್ಸ್) ಶುಕ್ರವಾರದ ವಹಿವಾಟಿನಂದು ದೇಶಿ ಚಿನ್ನ ಮತ್ತು ಬೆಳ್ಳಿ ದರಲ್ಲಿ ಏರಿಳಿತ ಕಂಡು ಬಂದಿದೆ.
ಎಂಸಿಎಕ್ಸ್ನ ಡಿಸೆಂಬರ್ ಒಪ್ಪಂದದ 10 ಗ್ರಾಂ. ಚಿನ್ನ ದರದಲ್ಲಿ ಶೇ 0.35ರಷ್ಟು ಇಳಿಕೆಯಾಗಿ 51,875 ರೂ.ಯಲ್ಲಿ ವಹಿವಾಟು ನಡೆಸುತ್ತಿದೆ. ಇದಕ್ಕೆ ವಿರುದ್ಧವಾಗಿ ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ ಶೇ 0.28ರಷ್ಟು ಹೆಚ್ಚಳವಾಗಿ 64,435 ರೂ.ಯಲ್ಲಿ ಖರೀದಿ ಆಗುತ್ತಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಜಾಗತಿಕ ಮಾರುಕಟ್ಟೆಯ ಎಲ್ಲ ವಿಭಾಗಗಳ ಮೇಲೂ ತನ್ನ ಪ್ರಭಾವ ಬೀರಿತ್ತು. ಇದಕ್ಕೆ ಚಿನ್ನಾಭರಣವೂ ಹೊರತಾಗಲಿಲ್ಲ. ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ನಂತರ ಚಿನ್ನ ಮತ್ತು ಬೆಳ್ಳಿ ದೃಢವಾದ ಬೆಲೆ ತೋರಿಸಬಹುದು ಎಂಬ ವಿಶ್ಲೇಷಕರ ಅಂದಾಜು ನಿಜವಾಗಿದೆ.
ಈ ಎರಡೂ ಲೋಹಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಕಾರಾತ್ಮಕವಾಗಿ ಬೆಲೆ ಏರಿಕೆ ಕಾಣುತ್ತಿದ್ದು, ಚಿನ್ನದ ದರದಲ್ಲಿ ಅಲ್ಪ ಇಳಿಕೆ ಕಂಡು ಬಂದಿದೆ. ಯುಎಸ್ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿ ದರಗಳನ್ನು ಈ ಹಿಂದಿನ ಶೇ. 0.25ರಷ್ಟರಲ್ಲಿ ಬದಲಾಯಿಸದೆ ಯಥಾವತ್ತಾಗಿ ಉಳಿಸಿಕೊಳ್ಳಲಿದೆ ಎಂದು ಭರವಸೆ ನೀಡಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶದ ಅನಿಶ್ಚಿತತೆಯ ಮಧ್ಯೆಯೂ ಹೂಡಿಕೆದಾರರ ಸುರಕ್ಷಿತ ಧಾಮ ಅಮೂಲ್ಯ ಲೋಹಗಳ ಬೇಡಿಕೆ ಮುಂದುವರಿದಿದೆ ಎಂದು ಪೃಥ್ವಿ ಫಿನ್‌ಮಾರ್ಟ್‌ನ ನಿರ್ದೇಶಕ (ಹೆಡ್-ಕಮೊಡಿಟಿ & ಕರೆನ್ಸಿ ರಿಸರ್ಚ್) ಮನೋಜ್ ಜೈನ್ ಮನಿಕಂಟ್ರೋಲ್‌ಗೆ ಅಭಿಪ್ರಾಯಪಟ್ಟಿದ್ದಾರೆ.