ETV Bharat / business

ಸೈಬರ್ ಸೆಕ್ಯೂರಿಟಿ ಇನ್ಸೂರೆನ್ಸ್; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್​...

author img

By

Published : Jul 8, 2020, 8:18 PM IST

ಕೋವಿಡ್​-19 ಪರಿಹಾರವಾಗಿ ಸರ್ಕಾರ ಹಣ ನೀಡುತ್ತಿದೆ ಎಂಬ ಸಂದೇಶವನ್ನು ಬಿತ್ತರಿಸಿ ಸುಮಾರು 2 ಮಿಲಿಯನ್ ಭಾರತೀಯ ಇಂಟರ್ನೆಟ್​ ಬಳಕೆದಾರರ ಮೇಲೆ ಫಿಶಿಂಗ್ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಜೂನ್ 19 ರಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಂ (Indian Computer Emergency Response Team -CERT-In) ಎಚ್ಚರಿಕೆ ನೀಡಿತ್ತು. ಗಲ್ವಾನ್ ಸಂಘರ್ಷದ ನಂತರ ಚೀನಾದ ಸೈಬರ್ ಖದೀಮರು ಭಾರತದ ಮೇಲೆ ತಮ್ಮ ಸೈಬರ್ ದಾಳಿಯನ್ನು ಶೇ 200 ರಷ್ಟು ಹೆಚ್ಚಿಸಿದ್ದಾರೆ.

cyber insurance policies
cyber insurance policies

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳೆಲ್ಲವೂ ದಿನನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ಅದರಲ್ಲೂ ಇಂಟರ್ನೆಟ್​ ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ! ಆದರೆ ಇಂಟರ್ನೆಟ್​ ಮೇಲೆ ನಮ್ಮ ಅವಲಂಬನೆ ಹೆಚ್ಚಾದಷ್ಟೂ ವೈಯಕ್ತಿಕ ಮಾಹಿತಿಗಳ ಸೋರಿಕೆಯ ಭಯ ಹೆಚ್ಚಾಗುತ್ತಿದೆ.

ಶಾಪಿಂಗ್, ಮನರಂಜನೆ, ಹಣಕಾಸು ವ್ಯವಹಾರ, ಡೇಟಾ ಸಂಗ್ರಹಣೆ, ಶಿಕ್ಷಣ ಮತ್ತು ಸಾಮಾಜಿಕ ಸಂಪರ್ಕಕ್ಕೆ ನಾವಿಂದು ಹಲವಾರು ಆ್ಯಪ್​ಗಳನ್ನು ಬಳಸುತ್ತಿದ್ದೇವೆ. ಇದರ ಜೊತೆಗೆ ವರ್ಕ್​ ಫ್ರಂ ಹೋಂ ಕೂಡ ಹೊಸ ನಾರ್ಮಲ್ ಆಗಿರುವುದರಿಂದ ಇಂಟರ್ನೆಟ್ ಬಳಕೆ ಮತ್ತೂ ಹೆಚ್ಚಾಗಿದೆ. ಹೀಗಾಗಿ ಸೈಬರ್ ದಾಳಿಯ ಸಾಧ್ಯತೆಯೂ ಹೆಚ್ಚಾಗಿದ್ದು, ಸೈಬರ್​ ಸುರಕ್ಷತೆಯ ವಿಷಯ ಈಗ ಮುನ್ನೆಲೆಗೆ ಬಂದಿದೆ. ಆದರೆ ಈಗ ಸೈಬರ್ ಸುರಕ್ಷತೆಗಾಗಿ ವಿಮಾ ಸೌಲಭ್ಯ ಬಂದಿರುವುದು ಇಂಟರ್ನೆಟ್​ ಬಳಕೆದಾರರಿಗೆ ನೆಮ್ಮದಿಯ ಸಂಗತಿಯಾಗಿದೆ.

ಕೋವಿಡ್​-19 ಪರಿಹಾರವಾಗಿ ಸರ್ಕಾರ ಹಣ ನೀಡುತ್ತಿದೆ ಎಂಬ ಸಂದೇಶವನ್ನು ಬಿತ್ತರಿಸಿ ಸುಮಾರು 2 ಮಿಲಿಯನ್ ಭಾರತೀಯ ಇಂಟರ್ನೆಟ್​ ಬಳಕೆದಾರರ ಮೇಲೆ ಫಿಶಿಂಗ್ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಜೂನ್ 19 ರಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಂ (Indian Computer Emergency Response Team -CERT-In) ಎಚ್ಚರಿಕೆ ನೀಡಿತ್ತು. ಗಲ್ವಾನ್ ಸಂಘರ್ಷದ ನಂತರ ಚೀನಾದ ಸೈಬರ್ ಖದೀಮರು ಭಾರತದ ಮೇಲೆ ತಮ್ಮ ಸೈಬರ್ ದಾಳಿಯನ್ನು ಶೇ 200 ರಷ್ಟು ಹೆಚ್ಚಿಸಿದ್ದಾರೆ.

ಇಂಥ ಸಮಯದಲ್ಲಿ ತಾವು ಕಷ್ಟಪಟ್ಟು ಗಳಿಸಿದ ಹಣ, ಸಂಪತ್ತು, ಸಾಮಾಜಿಕ ಘನತೆ, ಆರೋಗ್ಯ, ಮಾನಸಿಕ ಆರೋಗ್ಯಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ. ಇದಕ್ಕಾಗಿ ಸೈಬರ್ ಸೆಕ್ಯೂರಿಟಿ ವಿಮೆ ನಿಮಗೆ ಸಹಾಯ ಮಾಡಬಲ್ಲದು.

ವೈಯಕ್ತಿಕ ಸೈಬರ್ ಇನ್ಸೂರೆನ್ಸ್​ ಪಾಲಿಸಿ ಎಂದರೇನು?

18 ವರ್ಷ ಮೇಲ್ಪಟ್ಟವರು ವೈಯಕ್ತಿಕ ಇನ್ಸೂರೆನ್ಸ್​ ಪಾಲಿಸಿ ಪಡೆಯಬಹುದು. ಸೈಬರ್ ದಾಳಿಯಾದಾಗ ನಿಮಗೆ ವೈಯಕ್ತಿಕವಾಗಿ ಆಗುವ ನಷ್ಟಗಳನ್ನು ಸರಿದೂಗಿಸಲು ಸೈಬರ್ ಇನ್ಸೂರೆನ್ಸ್ ಪಾಲಿಸಿ ಸಹಾಯ ಮಾಡುತ್ತದೆ.

ಯಾರಿಗೆಲ್ಲ ಅವಶ್ಯ ಸೈಬರ್ ಇನ್ಸೂರೆನ್ಸ್​ ಪಾಲಿಸಿ?

ಯಾವುದೇ ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಹಣಕಾಸು ವ್ಯವಹಾರ ನಡೆಸುವವರು, ಪೇಮೆಂಟ್ ಗೇಟ್​ವೇ ಬಳಸುವವರು, ಕ್ಲೌಡ್ ಸರ್ವಿಸ್ ಬಳಕೆದಾರರು, ಹೋಂ ಅಸಿಸ್ಟನ್ಸ್​ ಬಳಕೆದಾರರು ಅಥವಾ ಅದಕ್ಕೆ ಜೋಡಿಸಿದ ಸಾಧನಗಳನ್ನು ಬಳಸುವವರು ಸೇರಿದಂತೆ ಇನ್ನೂ ಕೆಲ ರೀತಿಯಲ್ಲಿ ಇಂಟರ್​ನೆಟ್ ಬಳಸುವವರಿಗೆ ಸೈಬರ್ ಇನ್ಸೂರೆನ್ಸ್​ ಪಾಲಿಸಿ ಅಗತ್ಯವಾಗಿದೆ.

ಯಾವೆಲ್ಲ ಕಂಪನಿಗಳು ಸೈಬರ್ ಇನ್ಸೂರೆನ್ಸ್​ ಪಾಲಿಸಿ ನೀಡುತ್ತಿವೆ?

ಭಾರತದ ಪ್ರಮುಖ ವಿಮಾ ಕಂಪನಿಗಳಾದ ಎಚ್​ಡಿಎಫ್​ಸಿ ಎರ್ಗೊ, ಬಜಾಜ್ ಅಲಿಯಾಂಜ್ ಜನರಲ್ ಇನ್ಸೂರೆನ್ಸ್​ ಮತ್ತು ಐಸಿಐಸಿಐ ಲೊಂಬಾರ್ಡ್​ ಜನರಲ್ ಇನ್ಸೂರೆನ್ಸ್​ ಕಂಪನಿಗಳು ವೈಯಕ್ತಿಕ ಸೈಬರ್ ಇನ್ಸೂರೆನ್ಸ್​ ಪಾಲಿಸಿ ನೀಡುತ್ತಿವೆ.

ಪಾಲಿಸಿಯಲ್ಲಿ ಯಾವುದಕ್ಕೆಲ್ಲ ಕವರೇಜ್ ಸಿಗುತ್ತೆ?

ವೈಯಕ್ತಿಕ ಮಾಹಿತಿ ಕಳವು (identity theft), ಸೈಬರ್ ಮೂಲಕ ಬೆದರಿಕೆ, ಸೈಬರ್ ಸುಲಿಗೆ, ಮಾಲ್ವೇರ್ ನುಸುಳುವಂತೆ ಮಾಡುವುದು, ಅನಧಿಕೃತವಾಗಿ ಅಥವಾ ವಂಚನೆಯ ಮೂಲಕ ಬ್ಯಾಂಕ್​ ಖಾತೆ, ಕ್ರೆಡಿಟ್ ಕಾರ್ಡ್​, ಮೊಬೈಲ್​ ವ್ಯಾಲೆಟ್​ಗಳನ್ನು ನಿರ್ವಹಿಸುವುದು ಇವಕ್ಕೆಲ್ಲ ವಿಮಾ ಕವರೇಜ್ ಇರುತ್ತದೆ. ಹಾಗೆಯೇ ಇಂಥ ಸೈಬರ್ ದಾಳಿಗಳಿಂದ ನಂತರ ಉದ್ಭವವಾಗುವ ಕೋರ್ಟು ಕಚೇರಿಯ ಶುಲ್ಕಗಳಿಗೆ ಸಹ ವಿಮಾ ಪಾಲಿಸಿ ಕವರೇಜ್ ನೀಡುತ್ತದೆ. ಯಾವುದಾದರೂ ಅಸಭ್ಯ, ಅಪಾಯಕಾರಿಯಾದ ಪೋಸ್ಟ್​ ಅನ್ನು ಇಂಟರ್ನೆಟ್​ನಿಂದ ತೆರವುಗೊಳಿಸಿ ಸಾಮಾಜಿಕ ಘನತೆಯನ್ನು ಮರುಸ್ಥಾಪಿಸುವ ಸಲುವಾಗಿ ಮಾಡಲಾದ ಖರ್ಚುಗಳು ಸಹ ಪಾಲಿಸಿ ಕವರ್​​ನಲ್ಲಿ ಅಡಕವಾಗಿವೆ.

ಯಾವುದಕ್ಕೆ ಕವರೇಜ್ ಸಿಗಲ್ಲ?

ಅಪ್ರಮಾಣಿಕ ಮತ್ತು ಅಸಂಬದ್ಧ ನಡವಳಿಕೆ, ಶರೀರಕ್ಕೆ ಗಾಯ ಅಥವಾ ಆಸ್ತಿ ಹಾನಿ, ಅನಪೇಕ್ಷಿತ ಸಂವಹನ, ಅನಧಿಕೃತ ಮಾಹಿತಿ ಸಂಗ್ರಹ, ಅನೈತಿಕ ಅಥವಾ ಅಶ್ಲೀಲ ಸೇವೆಗಳಿಗೆ ಸೈಬರ್ ವಿಮೆ ಅನ್ವಯವಾಗದು. ಪಾಲಿಸಿ ಆರಂಭಕ್ಕೂ ಮುನ್ನವೇ ಇದ್ದ ವಿಷಯಗಳಿಗೆ ಕವರೇಜ್ ಇರುವುದಿಲ್ಲ. ಸರ್ಕಾರದ ಯಾವುದಾದರೂ ಪ್ರಾಧಿಕಾರದ ಆದೇಶದ ಕಾರಣದಿಂದ ಹಾನಿ ಅಥವಾ ನಷ್ಟ ಸಂಭವಿಸಿದಲ್ಲಿ ಅದಕ್ಕೂ ವಿಮೆ ಸಿಗಲ್ಲ.

ವೈಯಕ್ತಿಕ ಸೈಬರ್ ಇನ್ಸೂರೆನ್ಸ್​ ಪಾಲಿಸಿಯ ದರ ಎಷ್ಟು?

* ವೈಯಕ್ತಿಕ ಸೈಬರ್ ಇನ್ಸೂರೆನ್ಸ್​ ಪಾಲಿಸಿಯ ದರಗಳು ಪ್ರತಿ 1 ಲಕ್ಷ ರೂ. ಸಮ್ ಅಶ್ಯೂರ್ಡ್​ಗೆ 600 ರೂಪಾಯಿಗಳಿಂದ ಆರಂಭವಾಗುತ್ತವೆ.

* HDFC ERGO E@Secure ವಿಮಾ ಪಾಲಿಸಿಯು 50,000 ರೂ.ಗಳಿಂದ 1 ಕೋಟಿ ರೂ.ಗಳವರೆಗೆ ವಿಮಾ ಸುರಕ್ಷತೆ ನೀಡುತ್ತಿದ್ದು, ವರ್ಷಕ್ಕೆ 1,500 ರೂ. ಪ್ರೀಮಿಯಂನಿಂದ ಪಾಲಿಸಿಗಳು ಆರಂಭವಾಗುತ್ತವೆ.

* ಬಜಾಜ್ ಅಲಿಯಾಂಜ್ ಜನರಲ್ ಇನ್ಸೂರೆನ್ಸ್​ನಲ್ಲಿ ವರ್ಷಕ್ಕೆ 700 ರೂ.ಗಳಿಂದ 9,000 ರೂ.ಗಳವರೆಗೆ ಪ್ರೀಮಿಯಂ ದರವಿದ್ದು, 1 ಲಕ್ಷದಿಂದ 1 ಕೋಟಿ ರೂ. ವರೆಗೆ ವಿಮಾ ಸುರಕ್ಷತೆ ಪಡೆಯಬಹುದು.

* 50,000 ರೂ.ಗಳಿಂದ 1 ಕೋಟಿ ರೂ. ವಿಮಾ ಸುರಕ್ಷತೆಗೆ ಐಸಿಐಸಿಐ ಲೊಂಬಾರ್ಡ್​ ದಿನಕ್ಕೆ 6.5 ರೂ.ಗಳಿಂದ 65 ರೂ.ಗಳವರೆಗೆ ಚಾರ್ಜ್ ಮಾಡುತ್ತದೆ.

* ವಿಮಾ ಕಂಪನಿಗಳ ಅಧಿಕೃತ ವೆಬ್​ಸೈಟ್​ಗಳ ಮೂಲಕ ಪಾಲಿಸಿಗಳನ್ನು ಖರೀದಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.