ETV Bharat / business

ಸತತ 4ನೇ ವರ್ಷವೂ ಕಿಂಗ್​ ಕೊಹ್ಲಿ ಭಾರತದ ಅಗ್ರ ಸೆಲಿಬ್ರಿಟಿ: ರೋಹಿತ್​​ಗೆ ಯಾವ ಶ್ರೇಣಿ?

author img

By

Published : Feb 4, 2021, 3:09 PM IST

Updated : Feb 4, 2021, 3:18 PM IST

2020ರಲ್ಲಿ ಕೊಹ್ಲಿಯ ಬ್ರಾಂಡ್ ನಂಬರ್​ 1 ಸ್ಥಾನದಲ್ಲಿದ್ದು, ಅಗ್ರ 20 ಖ್ಯಾತನಾಮರು ತಮ್ಮ ಒಟ್ಟು ಮೌಲ್ಯದ ಶೇ 5ರಷ್ಟು ಹಣವಾದ 1 ಬಿಲಿಯನ್ ಡಾಲರ್‌ ಕಳೆದುಕೊಂಡಿದ್ದಾರೆ ಎಂದು ಜಾಗತಿಕ ಸಲಹಾ ಸಂಸ್ಥೆ ಡಫ್ & ಫೆಲ್ಪ್ಸ್ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

Virat Kohli
Virat Kohli

ನವದೆಹಲಿ: ಜಾಗತಿಕ ಕ್ರಿಕೆಟ್​ನಲ್ಲಿ ಹಲವು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ, ಸತತ ನಾಲ್ಕನೇ ವರ್ಷವೂ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ.

237.7 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಅತ್ಯಮೂಲ್ಯ ಸೆಲೆಬ್ರಿಟಿ ಸ್ಥಾನ ಪಡೆದಿದ್ದಾರೆ. ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಹಿಂದಿ ಚಲನಚಿತ್ರ ನಟರಾದ ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಇದ್ದಾರೆ ಎಂದು ಉದ್ಯಮ ಶ್ರೇಯಾಂಕ ತಿಳಿಸಿದೆ.

ಹೆಚ್ಚು ಮೌಲ್ಯಯುತವಾದ ಹತ್ತು ಪ್ರಮುಖ ಖ್ಯಾತನಾಮರಲ್ಲಿ ಕೊಹ್ಲಿ ಮಾತ್ರ ಚಿತ್ರರಂಗದ ಹೊರಗಿನವರು. ಒಂಬತ್ತು ಮಂದಿ ಚಲನಚಿತ್ರ ತಾರೆಯರಿದ್ದು, ಇಬ್ಬರು ಮಾತ್ರ ಮಹಿಳೆಯರಿದ್ದಾರೆ.

2020ರಲ್ಲಿ ಕೊಹ್ಲಿಯ ಬ್ರಾಂಡ್ ನಂಬರ್​ 1ನೇ ಸ್ಥಾನದಲ್ಲಿದ್ದು, ಅಗ್ರ 20 ಖ್ಯಾತನಾಮರು ತಮ್ಮ ಒಟ್ಟು ಮೌಲ್ಯದ ಶೇ 5ರಷ್ಟು ಹಣವಾದ 1 ಬಿಲಿಯನ್ ಡಾಲರ್‌ಗೆ ಕಳೆದುಕೊಂಡಿದ್ದಾರೆ ಎಂದು ಜಾಗತಿಕ ಸಲಹಾ ಸಂಸ್ಥೆ ಡಫ್ & ಫೆಲ್ಪ್ಸ್ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬಹುನಿರೀಕ್ಷಿತ ಹುವಾಯ್ ಫೋಲ್ಡೆಬಲ್​ ಎಕ್ಸ್​ ಫೋನ್ ಬಿಡುಗಡೆ ದಿನಾಂಕ ನಿಗದಿ

ಕೋವಿಡ್​-19 ಸಾಂಕ್ರಾಮಿಕ ರೋಗದ ಹೊರತಾಗಿಯೂ 2020ರಲ್ಲಿ 237.7 ಮಿಲಿಯನ್ ಯುಎಸ್ ಡಾಲರ್ ಸ್ಥಿರ ಬ್ರಾಂಡ್ ಮೌಲ್ಯದೊಂದಿಗೆ ಕೊಹ್ಲಿ ಸತತ ನಾಲ್ಕನೇ ವರ್ಷವೂ ಹೆಚ್ಚು ಮೌಲ್ಯಯುತ ಸೆಲೆಬ್ರಿಟಿಯಾಗಿ ಉಳಿದಿದ್ದಾರೆ. ಅಕ್ಷಯ್ ಕುಮಾರ್ 118.9 ಮಿಲಿಯನ್ ಡಾಲರ್​ನ ಶೇ 13.8ರಷ್ಟು ಜಿಗಿತದೊಂದಿಗೆ ಎರಡನೇ ಸ್ಥಾನ ಉಳಿಸಿಕೊಂಡಿಸಿದ್ದಾರೆ. ರಣವೀರ್ ಸಿಂಗ್ ಎರಡನೇ ವರ್ಷ ಮತ್ತೆ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅವರ ಬ್ರಾಂಡ್ ಮೌಲ್ಯ 102.9 ಮಿಲಿಯನ್ ಡಾಲರ್ ಆಗಿದೆ ಎಂದು ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ಆರನೇ ಅಧ್ಯಯನದಲ್ಲಿ ತಿಳಿಸಿದೆ.

ಎಸ್ಟಾಬ್ಲಿಶ್ಡ್​ ಸೆಲೆಬ್ರಿಟಿಗಳು ತಮ್ಮ ಶ್ರೇಯಾಂಕ ವೃದ್ಧಿಸಿಕೊಂಡಿದ್ದು, ಟೈಗರ್ ಶ್ರಾಫ್ ಮತ್ತು ರೋಹಿತ್ ಶರ್ಮಾ ಕ್ರಮವಾಗಿ 15 ಮತ್ತು 17ನೇ ಶ್ರೇಯಾಂಕಗಳ ಮೂಲಕ ಕೆಲವು ಸ್ಥಾನಗಳ ಏರಿಕೆ ಕಂಡಿದ್ದಾರೆ. ಕಾರ್ತಿಕ್ ಆರ್ಯನ್ 20ನೇ ಸ್ಥಾನದಲ್ಲಿದ್ದಾರೆ.

Last Updated : Feb 4, 2021, 3:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.