ಲಂಡನ್: ಹಸಿರು ಮತ್ತು ಸುಸ್ಥಿರ ಜಾಗತಿಕ ಆರ್ಥಿಕ ಚೇತರಿಕೆಗಾಗಿ ಒಗ್ಗೂಡಿ ಶ್ರಮಿಸುವುದನ್ನು ಮುಂದುವರಿಸಲು ಮತ್ತು ಹವಾಮಾನ ಬದಲಾವಣೆ ನಿಭಾಯಿಸಲು ಆರ್ಥಿಕ ಮತ್ತು ಹಣಕಾಸು ನೀತಿಯಲ್ಲಿ ಆದ್ಯತೆ ನೀಡುವುದನ್ನು ಖಚಿತಪಡಿಸಬೇಕು ಎಂದು ಜಿ -7 ಹಣಕಾಸು ಮಂತ್ರಿಗಳು ಜಿ -7 ಹಣಕಾಸು ಮಂತ್ರಿಗಳಿಗೆ ಬ್ರಿಟನ್ ವಿತ್ತ ಸಚಿವ ರಿಷಿ ಸುನಕ್ ಕೋರಿದ್ದಾರೆ.
ಜಿ -7 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಜತೆ ವರ್ಚುಯಲ್ ಸಭೆ ನಡೆಸಿ ಮಾತನಾಡಿದ ಸುನಾಕ್, ಜಾಗತಿಕ ಹಣಕಾಸು ಮಾರುಕಟ್ಟೆಗಳು ನಿವ್ವಳ ಶೂನ್ಯಕ್ಕೆ ಪರಿವರ್ತನೆಗೊಳ್ಳುವಲ್ಲಿ ಸದಸ್ಯ ರಾಷ್ಟ್ರಗಳ ಪಾತ್ರ ಮಹತ್ವದಾಗಿದೆ. ಹವಾಮಾನ - ಸಂಬಂಧಿತ ಹಣಕಾಸು ಬಹಿರಂಗಪಡಿಸುವಿಕೆ ಹಾಗೂ ಅಂತಾರಾಷ್ಟ್ರೀಯ ಸುಸ್ಥಿರತೆ - ಸಂಬಂಧಿತ ಹಣಕಾಸು ವರದಿ ಮಾನದಂಡಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಜೂನ್ 4-5ರಂದು ಲಂಡನ್‌ನಲ್ಲಿ ನಡೆಯಲಿರುವ ಜಿ-7 ಹಣಕಾಸು ಮಂತ್ರಿಗಳ ಸಭೆಯ ಪೂರ್ವಭಾವಿಯಾಗಿ ಶುಕ್ರವಾರ ವರ್ಚುಯಲ್ ಸಭೆ ಆಯೋಜಿಸಲಾಯಿತು.
ಹವಾಮಾನ ಸಂಬಂಧಿತ ಹಣಕಾಸು ಪ್ರಕಟಣೆಗಳ ಕಾರ್ಯಪಡೆಯ (ಟಿಸಿಎಫ್‌ಡಿ) ಶಿಫಾರಸುಗಳಿಗೆ ಅನುಗುಣವಾಗಿ ಹವಾಮಾನ ವರದಿಗಾರಿಕೆ ಮಾಡುವ ಉದ್ದೇಶ ಘೋಷಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಯುಕೆ ಆಗಿದೆ.
ಹವಾಮಾನ ಬದಲಾವಣೆಯ ಅಪಾಯಗಳನ್ನು ಸಂಸ್ಥೆಗಳು ಹೇಗೆ ನಿರ್ವಹಿಸುತ್ತಿವೆ ಎಂಬ ತಿಳಿವಳಿಕೆಯನ್ನು ಇದು ಸುಧಾರಿಸುತ್ತದೆ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೂಡಿಕೆದಾರರು ಅದನ್ನು ಗಣನೆಗೆ ತೆಗೆದುಕೊಳ್ಳಬಹುದು.
ನಮ್ಮ ಮಹತ್ವಾಕಾಂಕ್ಷೆಯ ಹವಾಮಾನ ಕಾರ್ಯಸೂಚಿ ಪ್ರಗತಿಗಾಗಿ ನಾವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಂದು ನನ್ನ ಜಿ 7 ಸಹವರ್ತಿಗಳೊಂದಿಗೆ ಮಾತನಾಡುತ್ತಿದ್ದೇನೆ ಎಂದರು.
ಉದ್ಯೋಗಗಳನ್ನು ಬೆಂಬಲಿಸಲು ಮತ್ತು ಹಸಿರು ಮತ್ತು ಜಾಗತಿಕ ಆರ್ಥಿಕ ಚೇತರಿಕೆಗೆ ನಾವು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಮುಂದಿನ ವಾರದ ಸಭೆಗಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.