ನವದೆಹಲಿ: ಕೊರೊನಾ ವೈರಸ್ ಪ್ರಕರಣಗಳ ತೀವ್ರ ಏರಿಕೆಯ ಹಿನ್ನಲೆಯಲ್ಲಿ ಕಾಂಗ್ರೆಸ್ನ ವರಿಷ್ಠರು ವರ್ಚುಯಲ್ ಸಭೆ ನಡೆಸಿ ದೇಶದ ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳು, ಇತರ ಖಾಯಂ ಆಹ್ವಾನಿತರು ಮತ್ತು ಪಕ್ಷದ ಉಸ್ತುವಾರಿಗಳು ಭಾಗವಹಿಸಿದ್ದರು.
ಈ ಬಳಿಕ ಮಾತನಾಡಿದ ಸೋನಿಯಾ, ಮಾಸಿಕ ಆದಾಯ ಬೆಂಬಲ ಒದಗಿಸಲು ಅರ್ಹ ಪ್ರತಿಯೊಬ್ಬ ನಾಗರಿಕರ ಖಾತೆಗೆ 6,000 ರೂ. ನೀಡಬೇಕು. ನಾವು ಈ ಹಿಂದೆಯೇ ಸರ್ಕಾರಕ್ಕೆ ವಿನಂತಿ ಮಾಡಿದ್ದೆವು ಎಂದು.
ಮುಖ್ಯಮಂತ್ರಿಗಳು ಪ್ರಾಥಮಿಕ ಕ್ರಮವಾಗಿ ಕೋವಿಡ್ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲ ಉಪಕರಣಗಳು, ಔಷಧಗಳು ಮತ್ತು ಬೆಂಬಲವನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಜೀವ ರಕ್ಷಕ ಔಷಧಗಳಾದ ರೆಮ್‌ಡೆಸಿವಿರ್ ಇತ್ಯಾದಿ ಔಷಧ, ವೈದ್ಯಕೀಯ ಆಮ್ಲಜನಕ ಮತ್ತು ಇತರ ಮೂಲ ಪೂರಕಗಳನ್ನು ಜಿಎಸ್‌ಟಿ ಶೇ 12ರಷ್ಟು ಸ್ಲ್ಯಾಬ್ ಇದೆ ಎಂಬುದು ಬಹಳ ಕಳವಳಕಾರಿ ಸಂಗತಿಯಾಗಿದೆ. ಆಕ್ಸಿಮೀಟರ್ ಮತ್ತು ವೆಂಟಿಲೇಟರ್‌ಗಳಂತಹ ಮೂಲ ಸಾಧನಗಳನ್ನು ಸಹ ಶೇ 20ರಷ್ಟು ಜಿಎಸ್‌ಟಿ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.