ETV Bharat / business

ರಿಲಯನ್ಸ್ ರೀಟೇಲ್ ವೆಂಚರ್ಸ್‌ನಲ್ಲಿ ಟಿಪಿಜಿಯಿಂದ 1,837.5 ಕೋಟಿ ರೂ. ಹೂಡಿಕೆ - RELIANCE RETAIL VENTURES

ಈ ವರ್ಷ ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗೆ ಟಿಪಿಜಿಯ ಎರಡನೇ ಹೂಡಿಕೆ. ಟಿಪಿಜಿ 1,837.5 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಆರ್​ಆರ್​ವಿಎಲ್ ಘೋಷಿಸಿದೆ.

mukhesh ambani
ಮುಖೇಶ್ ಅಂಬಾನಿ
author img

By

Published : Oct 4, 2020, 2:59 AM IST

ಮುಂಬಯಿ: ಜಾಗತಿಕ ಹೂಡಿಕೆ ಸಂಸ್ಥೆ ಟಿಪಿಜಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಆರ್‌ಆರ್‌ವಿಎಲ್‌ನಲ್ಲಿ 1,837.5 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಘೋಷಿಸಿವೆ. ಈ ಹೂಡಿಕೆಯಿಂದ ರಿಲಯನ್ಸ್ ರೀಟೇಲ್‌ನ ಪ್ರೀ-ಮನಿ ಈಕ್ವಿಟಿ ಮೌಲ್ಯವು 4.285 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಈ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಆರ್​ಆರ್‌ವಿಎಲ್‍ನಲ್ಲಿ ಟಿಪಿಜಿಯ ಶೇ.0.41 ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಈ ವರ್ಷಾರಂಭದಲ್ಲಿ ಘೋಷಿಸಲಾದ 4,546.8 ಕೋಟಿ ರೂ. ಹೂಡಿಕೆಯ ನಂತರ, ಇದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯೊಂದರಲ್ಲಿ ಟಿಪಿಜಿಯ ಎರಡನೇ ಹೂಡಿಕೆಯಾಗಲಿದೆ.

ಆರ್‌ಆರ್‌ವಿಎಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ಲಿಮಿಟೆಡ್, ದೇಶದಾದ್ಯಂತ ತನ್ನ 12,000 ಮಳಿಗೆಗಳಲ್ಲಿ ಸೇವೆ ಒದಗಿಸುತ್ತಿರುವ ಭಾರತದ ಅತಿದೊಡ್ಡ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಹೆಚ್ಚು ಲಾಭದಾಯಕವಾದ ರೀಟೇಲ್ ವ್ಯವಹಾರವನ್ನು ನಿರ್ವಹಿಸುತ್ತಿದೆ.

1992ರಲ್ಲಿ ಸ್ಥಾಪನೆಯಾದ ಟಿಪಿಜಿ ಪ್ರಮುಖ ಜಾಗತಿಕ ಪರ್ಯಾಯ ಆಸ್ತಿ ಸಂಸ್ಥೆಯಾಗಿದ್ದು, ಪ್ರೈವೇಟ್ ಈಕ್ವಿಟಿ, ಗ್ರೋಥ್ ಈಕ್ವಿಟಿ, ರಿಯಲ್ ಎಸ್ಟೇಟ್ ಹಾಗೂ ಪಬ್ಲಿಕ್ ಈಕ್ವಿಟಿ ಸೇರಿದಂತೆ ವಿವಿಧ ಆಸ್ತಿ ವರ್ಗಗಳಲ್ಲಿ 83 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ನಿರ್ವಹಿಸುತ್ತಿದೆ.

'ಭಾರತೀಯರೆಲ್ಲರ ಅನುಕೂಲಕ್ಕಾಗಿ ಭಾರತೀಯ ರೀಟೇಲ್ ವ್ಯವಸ್ಥೆಯನ್ನು ಬೆಳೆಸುವ ಮತ್ತು ಪರಿವರ್ತಿಸುವ ರಿಲಯನ್ಸ್ ರಿಟೇಲ್ ವೆಂಚರ್ಸ್‌ನ ಧ್ಯೇಯದಲ್ಲಿ ಟಿಪಿಜಿಯನ್ನು ಮೌಲ್ಯಯುತ ಹೂಡಿಕೆದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್ ಜೊತೆ ಸೇರಿ ರಿಟೇಲ್ ಉದ್ಯಮವನ್ನು ಬಲಿಷ್ಠಗೊಳಿಸುತ್ತೇವೆ ಎಂದು ಟಿಪಿಜಿಯ ಸಹ-ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಮ್ ಕೌಲ್ಟರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.