ETV Bharat / business

ಡ್ರೋನ್​ ಮೂಲಕ ಲಸಿಕೆ ಸಾಗಾಟಕ್ಕೆ ವಿಮಾನಯಾನ ಸಚಿವಾಲಯ ಅನುಮತಿ - ಕೋವಿಡ್ -19 ಲಸಿಕೆ

ಡ್ರೋನ್ ಬಳಕೆಯನ್ನು ಲಸಿಕೆ ವಿತರಣೆಯ ಅಗತ್ಯವಿರುವ ಪ್ರದೇಶಗಳ ಗುರುತಿಸಲು, ದಟ್ಟವಾದ ಭೌಗೋಳಿಕ ಪ್ರದೇಶ ತಲುಪಲು ಸಹಾಯ ಮಾಡುತ್ತವೆ. ಐಐಟಿ ಕಾನ್ಪುರದ ಸಹಯೋಗದೊಂದಿಗೆ ಡ್ರೋನ್‌ಗಳನ್ನು ಬಳಸಿ ಕೋವಿಡ್ -19 ಲಸಿಕೆ ವಿತರಣೆಯ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಈ ತಿಂಗಳ ಆರಂಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಇದೇ ರೀತಿಯ ಅನುಮತಿ ನೀಡಲಾಯಿತು.

drones
drones
author img

By

Published : Apr 30, 2021, 5:55 PM IST

ನವದೆಹಲಿ: ತೆಲಂಗಾಣ ಸರ್ಕಾರಕ್ಕೆ ಡ್ರೋನ್ ಮೂಲಕ ಲಸಿಕೆ ಸಾಗಾಟಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಷರತ್ತುಬದ್ಧ ವಿನಾಯಿತಿ ನೀಡಿ ಅನುಮತಿಸಿದೆ.

ವಿಷುಯಲ್ ಲೈನ್ ಆಫ್ ಸೈಟ್ (ವಿಎಲ್ಒಎಸ್) ವ್ಯಾಪ್ತಿಯಲ್ಲಿ ಕೋವಿಡ್ -19 ಲಸಿಕೆಗಳ ಪ್ರಾಯೋಗಿಕ ವಿತರಣೆ ನಡೆಸಲು ಡ್ರೋನ್ ಬಳಕೆಯ ಅನುಮತಿ ನೀಡಲಾಗಿದೆ. ಅನುಮತಿಯ ವಿನಾಯಿತಿ ಒಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ಮಾನ್ಯವಾಗಿರುತ್ತದೆ. ಆಯಾ ಘಟಕಗಳಿಗೆ ಹೇಳಿರುವ ಎಲ್ಲಾ ಷರತ್ತುಗಳು ಮತ್ತು ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಈ ವಿನಾಯಿತಿಗಳು ಜಾರಿಯಲ್ಲಿ ಇರುತ್ತದೆ ಎಂದು ಎಚ್ಚರಿಕೆ ನೀಡಿದೆ.

ಡ್ರೋನ್ ಬಳಕೆಯನ್ನು ಲಸಿಕೆ ವಿತರಣೆಯ ಅಗತ್ಯವಿರುವ ಪ್ರದೇಶಗಳ ಗುರುತಿಸಲು, ದಟ್ಟವಾದ ಭೌಗೋಳಿಕ ಪ್ರದೇಶ ತಲುಪಲು ಸಹಾಯ ಮಾಡುತ್ತವೆ. ಐಐಟಿ ಕಾನ್ಪುರದ ಸಹಯೋಗದೊಂದಿಗೆ ಡ್ರೋನ್‌ಗಳನ್ನು ಬಳಸಿ ಕೋವಿಡ್ -19 ಲಸಿಕೆ ವಿತರಣೆಯ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಈ ತಿಂಗಳ ಆರಂಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಇದೇ ರೀತಿಯ ಅನುಮತಿ ನೀಡಲಾಯಿತು.

ಈ ಅನುಮತಿ ವೇಗವಾಗಿ ಲಸಿಕೆ ವಿತರಣೆಯ ಉದ್ದೇಶ ಸಾಧನೆ ಹೊಂದಿದೆ. ವೈಮಾನಿಕ ವಿತರಣೆಯ ಮೂಲಕ ಕೋವಿಡ್ ದಟ್ಟಣೆ ಅಥವಾ ಕೋವಿಡ್​ ಪೀಡಿತ ಪ್ರದೇಶಗಳಿಗೆ ಜನ ಸಂಚಾರ ಸೀಮಿತಗೊಳಿಸುವ ಇಚ್ಛೆ ಸಹ ಇದೆ. ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಪ್ರವೇಶ ಖಾತ್ರಿಪಡಿಸುವುದು. ವೈದ್ಯಕೀಯ ಸರಬರಾಜು ಸರಪಳಿ ಸುಧಾರಣೆಯಂತಹ ಉದ್ದೇಶ ಇರಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.