ನವದೆಹಲಿ: ಟಿಸಿಎಸ್ ಸಂಸ್ಥಾಪಕ, ಹಾಗೂ ಟಿಸಿಎಸ್ನ ಮೊದಲ ಸಿಇಒ ಹಾಗೂ ಭಾರತ ಸಾಫ್ಟ್ವೇರ್ ಉದ್ಯಮದ ಪಿತಾಮಹ ಫಕೀರ್ಚಂದ್ ಕೊಹ್ಲಿ ತಮ್ಮ 96 ವಯಸ್ಸಿನಲ್ಲಿ ನಿಧನರಾಗಿದ್ದಾರೆ.
2002ರಲ್ಲಿ ಕೊಹ್ಲಿಗೆ ಭಾರತದ ಸಾಫ್ಟ್ವೇರ್ ಉದ್ಯಮಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮಭೂಷಣ ಪುರಸ್ಕಾರವನ್ನು ನೀಡಿದ್ದು, 100 ಬಿಲಿಯನ್ ಮೌಲ್ಯದ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ರೂಪಿಸಿ, ತಂತ್ರಜ್ಞಾನ ಕ್ರಾಂತಿ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಮಾರ್ಚ್ 19, 1924 ರಂದು ಪಾಕಿಸ್ತಾನ ಪೇಶಾವರದಲ್ಲಿ ಜನಿಸಿದ ಅವರು ಪಂಜಾಬ್ ವಿಶ್ವವಿದ್ಯಾಲಯದ ಲಾಹೋರ್‌ನ ಸರ್ಕಾರಿ ಕಾಲೇಜಿನ ಬಿ.ಎ ಮತ್ತು ಬಿ.ಎಸ್ಸಿ ಪದವಿ ಪಡೆದಿದ್ದರು. ನಂತರ ಕೆನಡಾದ ಕ್ವೀನ್ಸ್ ವಿಶ್ವವಿದ್ಯಾಲಯಕ್ಕೆ ತೆರಳಿ 1948ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ ಮುಗಿಸಿದರು. 1950ರಲ್ಲಿ ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಪದವಿ ಗಳಿಸಿದ್ದರು.
ಇದನ್ನೂ ಓದಿ: ಮುಂಬೈ ದಾಳಿ ನೆನೆದು ಭಾವನಾತ್ಮಕ ಟ್ವೀಟ್ ಮಾಡಿದ ರತನ್ ಟಾಟಾ!
1951ರಲ್ಲಿ ಭಾರತಕ್ಕೆ ಮರಳಿದ ಕೊಹ್ಲಿ ಮತ್ತು ಟಾಟಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು ಮತ್ತು 1970ರಲ್ಲಿ ಅದರ ನಿರ್ದೇಶಕರಾದರು. ಈ ಅಧಿಕಾರಾವಧಿಯಲ್ಲಿ ವಿದ್ಯುತ್ ವ್ಯವಸ್ಥೆ ವಿನ್ಯಾಸ ಮತ್ತು ನಿಯಂತ್ರಣಕ್ಕಾಗಿ ಡಿಜಿಟಲ್ ಕಂಪ್ಯೂಟರ್‌ಗಳ ಬಳಕೆಯನ್ನು ಇದೇ ವೇಳೆ ಅಳವಡಿಕೆ ತಂದರು.
ಸೆಪ್ಟೆಂಬರ್ 1969ರಲ್ಲಿ, ಕೊಹ್ಲಿ ಟಿಸಿಎಸ್ ಜನರಲ್ ಮ್ಯಾನೇಜರ್ ಆಗಿ 1994ರಲ್ಲಿ ಕಂಪನಿಯ ಉಪಾಧ್ಯಕ್ಷರಾಗಿದ್ದ ಅವರು ಐಬಿಎಂ ಅನ್ನು ಭಾರತಕ್ಕೆ ತಂದ ಕೀರ್ತಿ ಹೊಂದಿದ್ದಾರೆ.