ETV Bharat / business

ಚೀನಾದಿಂದ ಭಾರತಕ್ಕೆ ಬರಲಿವೆ ಅಮೆರಿಕದ 200 ಕಂಪನಿಗಳು..! - ಭಾರತ- ಚೀನಾ

ಅಮೆರಿಕಕ್ಕೆ ಭೇಟಿ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ನಡೆದ ಹೂಡಿಕೆದಾರರ ಸಂವಾದಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕ- ಭಾರತ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ವಹಿವಾಟು ಸಂಬಂಧಗಳನ್ನು ಉತ್ತೇಜಿಸುವ ಸಂಘಟನೆ, ಭಾರತದಲ್ಲಿ ಹೇಗೆ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಆಸಕ್ತ ಕಂಪನಿಗಳಿಂದ ವಿವರಣೆಗಳನ್ನು ಸ್ವೀಕರಿಸಿದೆ. ಆ ಎಲ್ಲ ಕಂಪನಿಗಳು ಭಾರತಕ್ಕೆ 21 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ತರುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
author img

By

Published : Sep 4, 2019, 2:50 PM IST

ನ್ಯೂಯಾರ್ಕ್​: ಚೀನಾದಲ್ಲಿರುವ ಅಮೆರಿಕ ಮೂಲದ ಸುಮಾರು 200 ಕಂಪನಿಗಳು ಭಾರತಕ್ಕೆ ಬಂದು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳುವ ಆಸಕ್ತಿ ಹೊಂದಿವೆ ಎಂದು ಅಮೆರಿಕ- ಭಾರತ ಕಾರ್ಯತಂತ್ರ ಮತ್ತು ಪಾಲುದಾರಿಕೆ ವೇದಿಕೆಯ (ಯುಎಸ್​ಐಎಸ್​ಪಿಎಫ್​) ಅಧ್ಯಕ್ಷ ಮುಖೇಶ್​ ಅಘಿ ಹೇಳಿದ್ದಾರೆ.

ಅಮೆರಿಕಕ್ಕೆ ಭೇಟಿ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ನಡೆದ ಹೂಡಿಕೆದಾರರ ಸಂವಾದಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕ- ಭಾರತ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ವಹಿವಾಟು ಸಂಬಂಧಗಳನ್ನು ಉತ್ತೇಜಿಸುವ ಸಂಘಟನೆ, ಭಾರತದಲ್ಲಿ ಹೇಗೆ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಆಸಕ್ತ ಕಂಪನಿಗಳಿಂದ ವಿವರಣೆಗಳನ್ನು ಸ್ವೀಕರಿಸಿದೆ. ಆ ಎಲ್ಲ ಕಂಪನಿಗಳು ಭಾರತಕ್ಕೆ 21 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ತರುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.

ಭಾರತೀಯ ದೂತವಾಸದ ಜನರಲ್ ಸಂದೀಪ್ ಚಕ್ರವರ್ತಿ ಮಾತನಾಡಿ, ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಳ್ಳಲು ಅಮೆರಿಕದ ಕಂಪನಿಗಳು ಸಾಕಷ್ಟು ಆಸಕ್ತಿ ಹೊಂದಿವೆ. ಅವುಗಳಿಗೆ ತಮಿಳುನಾಡು ಸರ್ಕಾರ ರೆಡ್ ಕೆಂಪು ಹಾಸಿನ ಸ್ವಾಗತ ನೀಡಲಿದೆ ಎಂದರು.

ಚೀನಾ- ಅಮೆರಿಕ ನಡುವಿನ ವಾಣಿಜ್ಯ ಸಮರದಿಂದಾಗಿ ಪರಸ್ಪರರು ಸುಂಕ ದರಗಳನ್ನು ಹೆಚ್ಚಿಸಿದ್ದಾರೆ. ಚೀನಾದಲ್ಲಿನ ಅಮೆರಿಕ ಮೂಲದ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಮತ್ತು ವ್ಯಾಪಾರಗಳ ಮೇಲಿನ ನಿರ್ಬಂಧಗಳನ್ನು ತೊಡೆದುಹಾಕಿಕೊಳ್ಳಲು ಯತ್ನಿಸುತ್ತಿವೆ. ಉದ್ಯಮ ವಹಿವಾಟಿನ ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಭಾರತದ ಮಾರುಕಟ್ಟೆ ಅವುಗಳಿಗೆ ಆಸಕ್ತಿದಾಯಕವಾಗಿ ತೋರುತ್ತಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.