ವಾಷಿಂಗ್ಟನ್ : ಈಜಿಪ್ಟ್‌ನ ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಬೃಹತ್ ಕಂಟೇನರ್ ಹಡಗು ಮೇಲೆತ್ತುವಲ್ಲಿನ ವಿಳಂಬವು ಜಾಗತಿಕ ವ್ಯಾಪಾರದಲ್ಲಿ ಇನ್ನೂ ಹೆಚ್ಚಿನ ಒತ್ತಡದ ಅಂಶಗಳು ಇವೆ ಎಂಬುದನ್ನು ಎತ್ತಿ ತೋರಿಸಿದೆ. ಸಾಂಕ್ರಾಮಿಕ ರೋಗದಿಂದ ಸರಬರಾಜು ಪೂರೈಕೆ ಸರಪಳಿಗೆ ಅಡ್ಡಿಯಾಗಿ ವರ್ಷ ಕಳೆದರೂ ಅದು ತಂದಿಟ್ಟ ಸವಾಲು ಜೀವಂತವಾಗಿವೆ ಎಂದು ವ್ಯಾಪಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ಮತ್ತು ಯುರೋಪ್ ನಡುವೆ ಸರಕು ಸಾಗಿಸುವ ಎವರ್ ಗಿವನ್ ಬೃಹತ್ ಹಡಗನ್ನು ರಕ್ಷಣೆ ಸಿಬ್ಬಂದಿ ಸೋಮವಾರ ಮುಂಜಾನೆ ಮರಳಿನ ರಾಶಿಯಿಂದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ಒಂದು ವಾರದಿಂದ ಕಾಲುವೆಯ ಸಂಚಾರವನ್ನೇ ಬಂದ್ ಮಾಡಿದ್ದ ಹಡಗನ್ನು ಸ್ಥಳಾಂತರಿಸಿದ ನಂತರ, ಕಾಲುವೆಯನ್ನು ಸಂಪೂರ್ಣವಾಗಿ ಮತ್ತೆ ತೆರೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ನಿರ್ಣಾಯಕ ಹಂತ ತಲುಪುವ ತನಕ ವ್ಯಾಪಾರ ಮಾರ್ಗದ ಸಂಚಾರ ನಿರ್ಬಂಧಿಸಲಾಗಿದೆ. ಇದಕ್ಕೂ ಮೊದಲು ಪನಾಮ ಗುರುತಿಸಿದ್ದ ಜಪಾನ್ ಒಡೆತನದ ಹಡಗು ವಾರಗಳವರೆಗೆ ಸಿಲುಕಿಕೊಳ್ಳಬಹುದೆಂಬ ಭಯವಿತ್ತು.
ಸೂಯೆಜ್ ಕಾಲುವೆಯಲ್ಲಿನ ಎವರ್ ಗಿವನ್ ಸಂಚಾರ ಅಡೆಚಣೆ, ಕೆಲವು ವಾರಗಳಿಗಿಂತ ಹೆಚ್ಚಿನ ಕಾಲ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರುವುದಿಲ್ಲ. ಹೆಚ್ಚಿನ ಜನರು ಕೋವಿಡ್-19 ಲಸಿಕೆ ಮತ್ತು ಆರ್ಥಿಕತೆಗಳು ಪುನರಾರಂಭದಿಂದ ಈ ವರ್ಷ ಜಾಗತಿಕ ಬೆಳವಣಿಗೆಯ ಹಳಿ ತಪ್ಪಿಸುವ ಸಾಧ್ಯತೆಯಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.
ಇದನ್ನೂ ಓದಿ: 6 ದಿನಗಳ ಬಳಿಕ ಮರಳು ರಾಶಿಯಿಂದ ಮೇಲೆದ್ದ ಸೂಯೆಜ್ ಕಾಲುವೆಯ ಬೃಹತ್ ಹಡಗು!
ತಮ್ಮ ವ್ಯವಹಾರವನ್ನು ಆರಂಭಿಸಿರುವ ಕಂಪನಿಗಳು ಸರಬರಾಜು ಸರಪಳಿಗಳನ್ನು ಅವಲಂಬಿಸಿದರೆ, ತಪ್ಪುಗಳಿಗೆ ಕಡಿಮೆಯಾದ ಸ್ಥಳಾವಕಾಶ ಇಲ್ಲ ಎಂದು ಮಿಲ್ಕೆನ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ವಿಲಿಯಂ ಲೀ ಹೇಳಿದರು.
ಇದು ನಮ್ಮ ಸರಬರಾಜು ಸರಪಳಿಗಳು ಎಷ್ಟು ದುರ್ಬಲವಾಗಿವೆ ಮತ್ತು ಕೇವಲ ಜನಪ್ರಿಯವಾದ ಈಗಿನ ದಾಸ್ತಾನು ತಂತ್ರಗಳನ್ನು ಹೇಗೆ ಮರುಪರಿಶೀಲಿಸಬೇಕು ಎಂಬುದರ ಒಂದು ಎಚ್ಚರಿಕೆ ಗಂಟೆಯಾಗಿದೆ. ಜಲ ಮಾರ್ಗಗಳನ್ನು ಅಡೆಚಣೆಗೆ ಕಾರಣವಾಗುವ ಕೊರತೆ ಮತ್ತು ಪೂರೈಕೆ ಸರಪಳಿಯ ಅಭಾವ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರು.
ಚೀನಾದಲ್ಲಿ ಹೊಸ ಕೊರೊನಾ ವೈರಸ್ ಏಕಾಏಕಿ ಹಬ್ಬಿಂದ ನಂತರ ಕಳೆದ ವರ್ಷ ವಾಣಿಜ್ಯವು ಊಹೆಗೆ ಸಿಲುಕದಂತೆ ಅಸ್ತವ್ಯಸ್ತಗೊಂಡಾಗ ಅನೇಕ ದೇಶಗಳು ಅದರ ಬಗ್ಗೆ ಕಠಿಣ ಪಾಠ ಕಲಿತವು.
ಅದು ಕಂಟೇನರ್‌ಗಳ ಆಗಮನ ನಿಧಾನಗೊಳಿಸುತ್ತದೆ. ಯಾವಾಗ ಅವುಗಳನ್ನು ಖಾಲಿ ಮಾಡಿ, ನಂತರ ಬೇರೆಡೆ ಸಾಗಿಸಿ ಇತರ ಸರಕುಗಳೊಂದಿಗೆ ಪುನಃ ತುಂಬಿಸವುದು. ಇದೆಲ್ಲವೂ ವೆಚ್ಚವನ್ನು ಹೆಚ್ಚಿಸುತ್ತದೆ. ಈ ಬೆಲೆ ಹೆಚ್ಚಳವು ಅಂತಿಮವಾಗಿ ಗ್ರಾಹಕರ ಮೇಲೆ ಹೋಗಿ ಹೊರೆ ಹೆಚ್ಚಿಸುತ್ತದೆ.
ಶಿಪ್ಪಿಂಗ್ ಬೆಲೆಗಳು ಏರಿಕೆಯಾಗಲಿವೆ ಎಂದು ಪೀಟರ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ಟ್ ಗ್ಯಾರಿ ಹಫ್ಬೌರ್ ಹೇಳಿದ್ದು, ಅದು ಪೂರೈಕೆ ಮಾರ್ಗಗಳನ್ನು ಕಠಿಣಗೊಳಿಸುತ್ತದೆ ಮತ್ತು ಗ್ರಾಹಕ ಮಟ್ಟದಲ್ಲಿ ಕೊರತೆಯನ್ನು ಅರ್ಥೈಸುತ್ತದೆ. ಇದು ತೈಲಕ್ಕೆ ಸ್ವಲ್ಪ ಹೆಚ್ಚಿನ ಬೆಲೆ ಏರಿಕೆಗೂ ಕಾರಣವಾಗಬಹುದು ಎಂದರು.
ಈ ಘಟನೆಯು ಏಷ್ಯಾದ ಹಡಗುಗಳ ಕೊರತೆ ಮತ್ತೊಂದು ಏರಿಳಿತವಾಗಿದೆ. ಇದರರ್ಥ ಚಿಲ್ಲರೆ ವ್ಯಾಪಾರಿಗಳು ಟಿವಿ, ಪೀಠೋಪಕರಣ, ಬಟ್ಟೆ, ಆಟೋ ಬಿಡಿ ಭಾಗಗಳು ಮತ್ತು ಕಂಟೈನರ್‌ಗಳ ಮೂಲಕ ರವಾನೆಯಾಗುವ ಅನೇಕ ಸರಕುಗಳನ್ನು ತಡವಾಗಿ ಪಡೆಯಬಹುದು.
ಜಾಗತಿಕ ವ್ಯಾಪಾರದ ಸುಮಾರು ಶೇ 12ರಷ್ಟು ಸೂಯೆಜ್ ಕಾಲುವೆಯ ಮೂಲಕ ಸಾಗುತ್ತದೆ. ಆದರೆ ಇದು ವಿಶ್ವದ ದೈನಂದಿನ ಶಿಪ್ಪಿಂಗ್ ಕಂಟೇನರ್ ಸರಕು ಸಾಗಣೆಯ ಶೇ 30ರಷ್ಟಿದೆ. ಯುರೋಪ್ ಮತ್ತು ಏಷ್ಯಾ ನಡುವಿನ ವ್ಯಾಪಾರದ ಪ್ರಮುಖ ಜಲ ಮಾರ್ಗವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಸುಮಾರು 19,000 ಹಡಗುಗಳು ಈ ಕಾಲುವೆಯ ಮೂಲಕ ಹಾದುಹೋದವು.