ನವದೆಹಲಿ : ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಗಳಲ್ಲಿ ರಷ್ಯಾದ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಜೂನ್ ಎರಡನೇ ವಾರದಿಂದ ಲಭ್ಯವಾಗಲಿದೆ. ಪ್ರತಿ ಡೋಸ್‌ಗೆ ಅಂದಾಜು 1,195 ರೂ. ಶುಲ್ಕಕ್ಕೆ ಲಭ್ಯವಾಗಲಿದೆ.
ನಾವು ಲಸಿಕೆಗೆ 995 ರೂ. ಮತ್ತು 200 ರೂ. ಆಡಳಿತ ಶುಲ್ಕ ವಿಧಿಸುತ್ತೇವೆ. ಅಪೊಲೊ ಆಸ್ಪತ್ರೆಗಳು ಜೂನ್ ಎರಡನೇ ವಾರದಿಂದ ಸ್ಪುಟ್ನಿಕ್ ವಿ ನೀಡಲು ಪ್ರಾರಂಭಿಸಲಿದೆ ಎಂದು ಅಪೊಲೊ ಸಮೂಹದ ಅಧಿಕಾರಿ ತಿಳಿಸಿದ್ದಾರೆ.
ನಮ್ಮ ಸಮೂಹದಡಿ ಭಾರತದ 80 ಸ್ಥಳಗಳಲ್ಲಿ ಹತ್ತು ಲಕ್ಷ ಲಸಿಕೆ ಪ್ರಮಾಣ ನೀಡುವುದನ್ನು ಪೂರ್ಣಗೊಳಿಸಿದೆ. ಮುಂಚೂಣಿ ಕಾರ್ಮಿಕರು, ಹೆಚ್ಚು ಅಪಾಯದ ಜನರಿಗೆ ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಆದ್ಯತೆ ನೀಡಲಿದೆ ಎಂದು ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶೋಬಾನಾ ಕಾಮಿನೇನಿ ಹೇಳಿದ್ದಾರೆ.
ಓದಿ: ಪತ್ನಿ ಬಳಿಯಿಂದ 100 ಕೋಟಿ ರೂ ಮೌಲ್ಯದ ಇನ್ಫೋಸಿಸ್ ಷೇರು ಖರೀದಿಸಿದ ಶಿಬುಲಾಲ್
ಜೂನ್‌ನಲ್ಲಿ ನಾವು ಪ್ರತಿ ವಾರ ಹತ್ತು ಲಕ್ಷ ಮತ್ತು ಜುಲೈನಲ್ಲಿ ದ್ವಿಗುಣಗೊಳಿಸುತ್ತೇವೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ 2 ಕೋಟಿ ಜಾಬ್‌ಗಳನ್ನು ಪೂರ್ಣಗೊಳಿಸುವ ಹಾದಿಯಲ್ಲಿದ್ದೇವೆ ಎಂದರು.
ಭಾರತ ಮತ್ತು ರಷ್ಯಾ ಪ್ರತಿ ತಿಂಗಳು ಆಗಸ್ಟ್ ಅಥವಾ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುವ ಸುಮಾರು 4 ಕೋಟಿ ಡೋಸ್‌ಗಳನ್ನು ತಯಾರಿಸಲು ಯೋಜಿಸುತ್ತಿವೆ.