ನವದೆಹಲಿ: ಸಾಂಕ್ರಾಮಿಕ ಕೋವಿಡ್ ಹೊರತಾಗಿಯೂ ದೇಶದಲ್ಲಿ ಉದ್ಯೋಗಿಗಳು ತಮ್ಮ ಕೆಲಸದ ಭವಿಷ್ಯದ ಬಗ್ಗೆ ಆಶಾವಾದಿಗಳಾಗಿದ್ದು, ಬಹುತೇಕ ವೃತ್ತಿಪರರು ತಮ್ಮ ಉದ್ಯೋಗ ಬದಲಾಯಿಸಲು ಯೋಚಿಸುತ್ತಿದ್ದಾರೆಂದು ವರದಿಯೊಂದು ತಿಳಿಸಿದೆ.
ಪ್ರಮುಖ ಆನ್‌ಲೈನ್ ವೃತ್ತಿಪರ ನೆಟ್‌ವರ್ಕ್ ಲಿಂಕ್ಡ್‌ಇನ್ ಹೊಸ ಉದ್ಯೋಗಾಕಾಂಕ್ಷಿಗಳ ಸಂಶೋಧನೆಯನ್ನು ಪ್ರಾರಂಭಿಸಿದ್ದು, ದೇಶದಲ್ಲಿ ಶೇ.82ರಷ್ಟು ವೃತ್ತಿಪರರು 2022ರಲ್ಲಿ ಉದ್ಯೋಗ ಬದಲಾವಣೆ ಮಾಡುವ ಯೋಚನೆಯಲ್ಲಿದ್ದಾರೆಂಬ ಮಾಹಿತಿಯನ್ನು ಬಹಿರಂಗಪಡಿಸಿದೆ.
ದೇಶದಲ್ಲಿ 1,111 ವೃತ್ತಿಪರರ ಪ್ರತಿಕ್ರಿಯೆಗಳ ಆಧಾರದ ಮೇಲೆ ಕಳಪೆ ಕೆಲಸ-ಜೀವನ ಸಮತೋಲನ, ಹೆಚ್ಚಿನ ವೇತನ ಅಥವಾ ಹೆಚ್ಚಿನ ವೃತ್ತಿ ಮಹತ್ವಾಕಾಂಕ್ಷೆಗಳ ಕಾರಣದಿಂದಾಗಿ ವೃತ್ತಿಪರರು ತಮ್ಮ ಪ್ರಸ್ತುತ ಉದ್ಯೋಗಗಳನ್ನು ತೊರೆಯುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಕೋವಿಡ್ ಸಂಕಷ್ಟದಿಂದ ಜನರು ತಮ್ಮ ವೃತ್ತಿಜೀವನವನ್ನು ಪುನರ್ ಪರಿಶೀಲಿಸುತ್ತಿದ್ದು, ಆದ್ಯತೆಗಳನ್ನು ಪೂರೈಸಲು ಹೊಸ ಉದ್ಯೋಗಾವಕಾಶಗಳನ್ನು ಹುಡುಕಲು ಪ್ರೇರೇಪಿಸಿದೆ. ಪ್ರತಿಭೆಯು ಇದೀಗ ಚಾಲಕನ ಸೀಟಿನಲ್ಲಿದೆ ಎಂದು ಲಿಂಕ್ಡ್‌ಇನ್ ನ್ಯೂಸ್ ಇಂಡಿಯಾದ ಮ್ಯಾನೇಜಿಂಗ್ ಎಡಿಟರ್ ಅಂಕಿತ್ ವೆಂಗುರ್ಲೇಕರ್ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಭೀತಿ : ಗೇಟ್ ಪರೀಕ್ಷೆ ಮುಂದೂಡಲು 23 ಸಾವಿರ ಅಭ್ಯರ್ಥಿಗಳಿಂದ ಅರ್ಜಿ