ETV Bharat / business

ಪ್ರತಿಯೊಬ್ಬರನ್ನೂ ಸ್ವಾಗತಿಸುವ ರಾಷ್ಟ್ರ ಯಾವುದಿದೆ ತೋರಿಸಿ? ಸಿಎಎ ವಿರೋಧಿ ಟೀಕಾಕಾರರಿಗೆ ಜೈಶಂಕರ್ ಸವಾಲ್ - ಪೌರತ್ವ ತಿದ್ದುಪಡಿ ಕಾಯ್ದೆ

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು (ಯುಎನ್‌ಎಚ್‌ಆರ್‌ಸಿ) ಟೀಕಿಸಿದ್ದಕ್ಕಾಗಿ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Jaishankar
ಜೈಶಂಕರ್
author img

By

Published : Mar 7, 2020, 6:55 PM IST

ನವದೆಹಲಿ: ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂದು ವಿಶ್ವದ ಯಾವುದೇ ದೇಶ ಹೇಳುತ್ತಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಭಾರತದ ನಡೆಯನ್ನು ಟೀಕಿಸುವವರ ವಿರುದ್ಧ ಹರಿಹಾಯ್ದರು.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು (ಯುಎನ್‌ಎಚ್‌ಆರ್‌ಸಿ) ಟೀಕಿಸಿದ್ದಕ್ಕಾಗಿ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅದರ (ಯುಎನ್‌ಎಚ್‌ಆರ್‌ಸಿ) ನಿರ್ದೇಶಕರು ಈ ಹಿಂದೆ ಕೂಡ ತಪ್ಪು ಮಾಡಿದ್ದರು. ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ವಿಶ್ವಸಂಸ್ಥೆಯ ವಿಭಾಗ ಹಿಂದಿನ ದಾಖಲೆಯನ್ನೊಮ್ಮೆ ನೋಡಿಕೊಳ್ಳಬೇಕು ಎಂದು ಕಿವಿ ಹಿಂಡಿದರು.

ನಾವು ಈ ಕಾಯ್ದೆಯ ಮೂಲಕ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇವೆ. ಅದನ್ನು ಪ್ರಶಂಸಿಸಬೇಕು. ಅದನ್ನು ನಾವೇ ದೊಡ್ಡ ಸಮಸ್ಯೆ ಸೃಷ್ಟಿಸದ ರೀತಿಯಲ್ಲಿ ಮಾಡಿದ್ದೇವೆ ಎಂದು ದೆಹಲಿಯಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಸಿಎಎ ಬಗ್ಗೆ ಕೇಳಿದಾಗ ಅವರು ಉತ್ತರಿಸಿದರು.

ಪ್ರತಿಯೊಬ್ಬರೂ ಅವರವರ ಪೌರತ್ವವನ್ನು ನೋಡಿದಾಗ, ಒಂದೊಂದು ಸಂದರ್ಭವನ್ನು ಹೊಂದಿರುತ್ತಾರೆ. ಬೇರೆಯದೇ ಆದ ಮಾನದಂಡವನ್ನು ಸಹ ಹೊಂದಿರುತ್ತಾರೆ. ಪ್ರಪಂಚದ ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂದು ಹೇಳುವ ದೇಶವನ್ನು ನನಗೆ ತೋರಿಸಿ. ಯಾರೂ ಅದನ್ನು ಹೇಳುವುದಿಲ್ಲ ಎಂದು ಸಚಿವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.