ದೆಹಲಿ : ಶೇರ್‌ಚಾಟ್ ಬಳಕೆದಾರರು ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ವಾಟ್ಸ್ಆ್ಯಪ್ನಲ್ಲೂ ಪ್ಲೇ ಮಾಡಬಹುದಾಗಿದೆ. ಈ ಹೊಸ ಫೀಚರ್ ಶೀಘ್ರದಲ್ಲೇ ವಾಟ್ಸ್ಆ್ಯಪ್ನಲ್ಲಿ ಬರಲಿದೆ.
ಭಾರತದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಶೇರ್‌ಚಾಟ್, ದೇಶಾದ್ಯಂತ 14 ಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹಿಂದಿ, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ, ತೆಲುಗು, ತಮಿಳು, ಬಂಗಾಳಿ, ಒಡಿಯಾ, ಕನ್ನಡ, ಅಸ್ಸಾಮಿ ಹರಿಯಾನ್ವಿ, ರಾಜಸ್ಥಾನಿ, ಭೋಜ್‌ಪುರಿ ಹಾಗೂ ಉರ್ದು ಸೇರಿ 15 ಭಾಷೆಗಳಲ್ಲಿ ಲಭ್ಯವಿದೆ.
ಈಗ ಇನ್ನೊಂದು ಶುಭಸುದ್ದಿ ಎಂದರೆ, ಶೇರ್‌ಚಾಟ್ ವಿಡಿಯೋ ಸೇವೆಯು ಇನ್ಮುಂದೆ ವಾಟ್ಸ್‌ಆ್ಯಪ್ ಬೀಟಾದಲ್ಲಿ ಲಭ್ಯವಿರಲಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಾಗಲಿದೆ. ಈ ಹೊಸ ಅಪ್ಡೇಟ್ ಪ್ರಕಾರ, ಶೇರ್‌ಚಾಟ್‌ನಲ್ಲಿ ಶೇರ್ ಮಾಡಲಾದ ವಿಡಿಯೋಗಳು ವಾಟ್ಸ್ಆ್ಯಪ್ನಲ್ಲೂ ಪ್ಲೇ ಆಗಲಿದೆ.
-
From building the app in 30 hours to becoming #1 in 6 days.
— Ankush Sachdeva (@AnkushSach) July 7, 2020 " class="align-text-top noRightClick twitterSection" data="
A battle-hardened team gunning for a massive opportunity!
Game on. 🔥🔥#AaoMojKare pic.twitter.com/8TeeOP2Xmf
">From building the app in 30 hours to becoming #1 in 6 days.
— Ankush Sachdeva (@AnkushSach) July 7, 2020
A battle-hardened team gunning for a massive opportunity!
Game on. 🔥🔥#AaoMojKare pic.twitter.com/8TeeOP2XmfFrom building the app in 30 hours to becoming #1 in 6 days.
— Ankush Sachdeva (@AnkushSach) July 7, 2020
A battle-hardened team gunning for a massive opportunity!
Game on. 🔥🔥#AaoMojKare pic.twitter.com/8TeeOP2Xmf
ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್, ಶೇರ್‌ಚಾಟ್ ಬಳಕೆದಾರರಿಗೆ ಪಿಕ್ಚರ್-ಇನ್-ಪಿಕ್ಚರ್ (ಪಿಐಪಿ) ಮೋಡ್ ಮೂಲಕ ವಿಡಿಯೋಗಳನ್ನು ಪ್ಲೇ ಮಾಡುವ ಹೊಸ ಫೀಚರ್ ಶೀಘ್ರದಲ್ಲೇ ಪರಿಚಯಿಸಲಿದೆ.