ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಟ್ರೆಂಡ್ನ ಪರಿಣಾಮ ಮುಂಬೈ ಷೇರುಪೇಟೆಯಲ್ಲಿ ಬುಧವಾರ ಆರಂಭಿಕ ವಹಿವಾಟಿನಲ್ಲಿ ಈಕ್ವಿಟಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ 100 ಅಂಕಗಳ ಹೆಚ್ಚಳ ಕಂಡಿದೆ. ಶೇರು ಸೂಚ್ಯಂಕದ ಪ್ರಮುಖ ಪಾಲುದಾರರಾದ ಹೆಚ್ಡಿಎಫ್ಸಿ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಆ್ಯಕ್ಸಿಕ್ ಬ್ಯಾಂಕ್ ಹೆಚ್ಚಿನ ಲಾಭ ಪಡೆಯಿತು.
30 ಷೇರು ಸೂಚ್ಯಂಕವು 149.24 ಪಾಯಿಂಟ್‌ಗಳು ಅಥವಾ ಶೇ. 0.27 ಹೆಚ್ಚಳದೊಂದಿಗೆ 54,703.90 ಅಂಕಗಳ ವಹಿವಾಟು ನಡೆಸಿದೆ. ಎನ್ಎಸ್ಸಿ ನಿಫ್ಟಿ 46.95 ಪಾಯಿಂಟ್‌ಗಳು ಅಥವಾ ಶೇ. 0.29 ರೊಂದಿಗೆ 16,327.05 ಕ್ಕೆ ಏರಿಕೆಯಾಗಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟಾಟಾ ಸ್ಟೀಲ್ ಮುಂಚೂಣಿಯಲ್ಲಿದ್ದು, ಶೇ. 2 ರಷ್ಟು ಏರಿಕೆ ಕಂಡಿದೆ. ನಂತರ ಎನ್ಟಿಪಿಸಿ, ಎಸ್ಬಿಐ, ಆ್ಯಕ್ಸಿಕ್ ಬ್ಯಾಂಕ್, ಹೆಚ್ಡಿಎಫ್ಸಿ ಬ್ಯಾಂಕ್ ಮತ್ತು ಪವರ್ ಗ್ರಿಡ್ ಇದೆ. ಮತ್ತೊಂದೆಡೆ, ಟೆಕ್ ಮಹೀಂದ್ರಾ, ಡಾ. ರೆಡ್ಡೀಸ್, ಸನ್ ಫಾರ್ಮಾ ಮತ್ತು ಬಜಾಜ್ ಫೈನಾನ್ಸ್ ಹಿಂದೆ ಬಿದ್ದಿವೆ.
ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 151.81 ಪಾಯಿಂಟ್ ಅಥವಾ 0.28 ಶೇ. ಹೆಚ್ಚಳವಾಗಿ ಗರಿಷ್ಠ ಮಟ್ಟ 54,554.66 ಕ್ಕೆ ತಲುಪಿತ್ತು. ನಿಫ್ಟಿ 21.85 ಪಾಯಿಂಟ್ ಅಥವಾ ಶೇ. 0.13 ರೊಂದಿಗೆ 16,280.10 ಕ್ಕೆ ಆಗಿತ್ತು.