ETV Bharat / business

ಷೇರುಪೇಟೆ ಸೂಚ್ಯಂಕ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 150 ಅಂಕ ಕುಸಿತ..ಈಗ ಅಲ್ಪ ಚೇತರಿಕೆ

ಮುಂಬೈ ಷೇರು ಪೇಟೆಯಲ್ಲಿ ಪ್ರಸ್ತುತ ಸೆನ್ಸೆಕ್ಸ್ ಹಾಗೂ ನಿಫ್ಟಿ ಕ್ರಮವಾಗಿ 150 ಮತ್ತು 28.50 ಅಂಕಗಳ ಇಳಿಕೆ ಕಂಡಿದ್ದವು. ಆದರೆ ಅಪರಾಹ್ನದ ವೇಳೆಗೆ ಏರಿಕೆ ದಾಖಲಿಸಿ, ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ.

IT stocks
ಮುಂಬೈ ಷೇರು ಪೇಟೆ
author img

By

Published : Mar 15, 2022, 12:15 PM IST

ಮುಂಬೈ: ಷೇರುಪೇಟೆ ಕುಸಿತ ಕಾಣುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಇಳಿಕೆ ಕಂಡಿವೆ. ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 150 ಅಂಕಗಳ ಕುಸಿತದೊಂದಿಗೆ 56,333.72ಕ್ಕೆ ಮುಕ್ತಾಯವಾಯಿತು. ಅದೇ ಸಮಯದಲ್ಲಿ 28.50 ಅಂಕಗಳ ಕುಸಿತದೊಂದಿಗೆ ನಿಫ್ಟಿ 16,842.80ಕ್ಕೆ ವಹಿವಾಟು ಮುಂದುವರೆಸಿತ್ತು.

30-ಷೇರುಗಳ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ, ಟಾಟಾ ಸ್ಟೀಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ ಮತ್ತು ಟಿಸಿಎಸ್ ಮತ್ತು ವಿಪ್ರೋ ಅತೀ ಹೆಚ್ಚು ನಷ್ಟ ಅನುಭವಿಸಿದವು. ಮತ್ತೊಂದೆಡೆ, ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್ ಮತ್ತು ಹೆಚ್‌ಡಿಎಫ್‌ಸಿ ಲಾಭದ ಹಾದಿಯಲ್ಲಿವೆ.

ಹಿಂದಿನ ವಹಿವಾಟಿನಲ್ಲಿ, ಸೆನ್ಸೆಕ್ಸ್ 935.72 ಅಂಕಗಳು ಅಥವಾ ಶೇ. 1.68ಕ್ಕೆ ಜಿಗಿದು 56,486.02ಕ್ಕೆ ಮುಕ್ತಾಯವಾಗಿತು. ಅಂತೆಯೇ, ನಿಫ್ಟಿ 240.85 ಅಂಕಗಳು ಅಥವಾ ಶೇ.1.45 ರಷ್ಟು ಏರಿಕೆಯಾಗಿ 16,871.30ಕ್ಕೆ ಮುಕ್ತಾಯವಾಗಿತ್ತು.

ಈ ಮಧ್ಯೆ ಅಂತಾರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ.3.73 ಕ್ಕೆ ಇಳಿಕೆ ಕಂಡಿದೆ. ಹಣದುಬ್ಬರವು ಫೆಬ್ರವರಿಯಲ್ಲಿ ಎಂಟು ತಿಂಗಳ ಗರಿಷ್ಠ ಮಟ್ಟ ಅಂದರೆ ಶೇ. 6.07 ತಲುಪಿದೆ. ಅಪರಾಹ್ನದ ವೇಳೆಗೆ ಷೇರು ಪೇಟೆ ಅಲ್ಪ ಏರಿಕೆ ಕಂಡಿದ್ದು, ಹೂಡಿಕೆದಾರರು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

ಇದನ್ನೂ ಓದಿ: ಪಂಚ ರಾಜ್ಯಗಳ ಫಲಿತಾಂಶ ಎಫೆಕ್ಟ್‌: ಸೆನ್ಸೆಕ್ಸ್‌ 1,595 ಅಂಕಗಳ ಭಾರಿ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.