ETV Bharat / business

ಚೀನಿ ವಸ್ತುಗಳು ಬಹಿಷ್ಕಾರ.. ತಮ್ಮ ದೇಶದಿಂದ ಅಂತರ ಕಾಯ್ದುಕೊಳ್ಳಲು ಡ್ರ್ಯಾಗನ್‌ ಕಂಪನಿಗಳ ಯತ್ನ!!

ಚೀನಾ ವಿರೋಧಿ ಭಾವನೆಗಳ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಮಾರಾಟವಾಗುವ ಶೇ.99ರಷ್ಟು ಫೋನ್‌ಗಳು ಭಾರತದಲ್ಲಿ ಜೋಡಿಸಲ್ಪಟ್ಟಿವೆ. ಆದ್ದರಿಂದ ಇದು ಗ್ರಾಹಕರ ಗ್ರಹಿಕೆಗೆ ಸಂಬಂಧಿಸಿದೆ. ಭಾರತ ಮತ್ತು ಚೀನಾ ನಡುವೆ ಜಗಳ ಆರಂಭವಾದಾಗಿನಿಂದ ಚೀನಾದ ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ತಾಯ್ನಾಡಿನಿಂದ ದೂರವಿರಲು ಪ್ರಯತ್ನಿಸುತ್ತಿವೆ..

Samsung
ಸ್ಯಾಮ್​ಸಂಗ್
author img

By

Published : Jun 23, 2020, 10:20 PM IST

ಹೈದರಾಬಾದ್ : ದೇಶಿ ಮಾರುಕಟ್ಟೆಯಲ್ಲಿ ಚೀನಾದ ಮೂಲದ ಸ್ಮಾರ್ಟ್‌ಫೋನ್‌ಗಳನ್ನ ಬಹಿಷ್ಕರಿಸುವುದರಿಂದ ಸ್ಯಾಮ್‌ಸಂಗ್‌ನಂತಹ ಪ್ರತಿಸ್ಪರ್ಧಿ ಬ್ರಾಂಡ್‌ಗಳಿಗೆ ಲಾಭವಾಗಲಿದೆ.

ಸ್ಮಾರ್ಟ್​ಫೋನ್ ಉದ್ಯಮದಲ್ಲಿ ಚೀನಿ ಬ್ರ್ಯಾಂಡ್‌ಗಳ ನುಗ್ಗುವಿಕೆ ಹೆಚ್ಚಿದೆ. ಕೆಲವೇ ಕೆಲವು ಬ್ರ್ಯಾಂಡ್‌ಗಳು ಮಾತ್ರ ಇದಕ್ಕೆ ಹೊಂದಿಕೆ ಆಗುತ್ತವೆ. ಗ್ರಾಹಕರ ಖರೀದಿಗೆ ಹೆಚ್ಚಿನ ಆಯ್ಕೆಗಳಿಲ್ಲ. ದರ ಸ್ಪರ್ಧೆ ಮೂಲಕ ಚೀನಿ ಬ್ರ್ಯಾಂಡ್‌ಗಳು ಮಾರುಕಟ್ಟೆಯ ಲೀಡರ್ ಆಗಿ ಹೊರಹೊಮ್ಮಿವೆ. ಬಜೆಟ್‌ ವಿಭಾಗದಲ್ಲಿ ಶಿಯೋಮಿ ಮತ್ತು ರಿಯಲ್​ಮಿ ಸ್ಥಾನ ಪಡೆದಿವೆ. ಮಧ್ಯ ಬಜೆಟ್​ನಲ್ಲಿ ಒಪ್ಪೊ, ವಿವೋ ಇವೆ.

ಭಾರತವು ಬೆಲೆ ಆಧಾರಿತ ಸೂಕ್ಷ್ಮ ಮಾರುಕಟ್ಟೆಯಾಗಿದೆ. ಬಹುತೇಕ ಜನರು ಯಾವಾಗಲೂ ಉತ್ಪನ್ನಗಳ ಮೌಲ್ಯದತ್ತ ದೃಷ್ಟಿ ಹಾಯಿಸಿರುತ್ತಾರೆ. ಚೀನಾ ಮೊಬೈಲ್​ ಬದಲಿಗೆ ನಾವು ನೋಡುವ ಏಕೈಕ ಬ್ರ್ಯಾಂಡ್ ಅಂದರೇ ಸ್ಯಾಮ್‌ಸಂಗ್ ಆಗಿದೆ ಎಂದು ಕೌಂಟರ್​ಪಾಯಿಂಟ್ ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ಹಿರಿಯ ವಿಶ್ಲೇಷಕ ಪ್ರಚೀರ್ ಸಿಂಗ್ ಹೇಳಿದರು.

ಬೇರೆ ದೃಷ್ಟಿಕೋನದಿಂದ ನೋಡಿದ್ರೆ ನೀವು ಉತ್ಪನ್ನವನ್ನು ಚೈನೀಸ್ ಅಥವಾ ಚೈನೀಸ್ ಅಲ್ಲದವರು ಎಂದು ಲೇಬಲ್ ಮಾಡಿ ಪ್ರತ್ಯೇಕಿಸಲು ಸಾಧ್ಯವಿಲ್ಲ. ಇದು ಜಾಗತೀಕೃತ ಜಗತ್ತು. ಫೋನ್‌ಗಳ ತಯಾರಿಕೆಯಲ್ಲಿ ಬಳಸುವ ಬಿಡಿ ಭಾಗಗಳು ಅನೇಕ ಪ್ರದೇಶಗಳಿಂದ ಬಂದಂತವು. ಚೀನಾ ವಿರೋಧಿ ಭಾವನೆಗಳ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಮಾರಾಟವಾಗುವ ಶೇ.99ರಷ್ಟು ಫೋನ್‌ಗಳು ಭಾರತದಲ್ಲಿ ಜೋಡಿಸಲ್ಪಟ್ಟಿವೆ. ಆದ್ದರಿಂದ ಇದು ಗ್ರಾಹಕರ ಗ್ರಹಿಕೆಗೆ ಸಂಬಂಧಿಸಿದೆ. ಭಾರತ ಮತ್ತು ಚೀನಾ ನಡುವೆ ಜಗಳ ಆರಂಭವಾದಾಗಿನಿಂದ ಚೀನಾದ ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ತಾಯ್ನಾಡಿನಿಂದ ದೂರವಿರಲು ಪ್ರಯತ್ನಿಸುತ್ತಿವೆ ಎಂದರು.

30 ಅಥವಾ 45 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಪರಿಸ್ಥಿತಿ ಉಲ್ಬಣಗೊಂಡ್ರೆ, ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗೆ ಬೃಹತ್ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಚಟುವಟಿಕೆಗಳ ಅಗತ್ಯವಿರುತ್ತದೆ. ಹೆಚ್ಚಿನ ಬ್ರಾಂಡ್‌ಗಳಿಗೆ ಯಾವುದೇ ಪುನರುತ್ಥಾನ ಕಾಣುವುದಿಲ್ಲ ಎಂದು ಪ್ರಚೀರ್ ಸಿಂಗ್ ವಿವರಿಸಿದ್ದಾರೆ. ಐಸಿಇಎ-ಇವೈ ಇತ್ತೀಚಿನ ವರದಿಯ ಪ್ರಕಾರ, ಮೊಬೈಲ್ ಉತ್ಪಾದನೆ ಉತ್ತೇಜಿಸಲು ದೇಶದಿಂದ ರಫ್ತು ಹೆಚ್ಚಿಸಲು ಭಾರತವು ಅಗತ್ಯವಿರುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂಬಂತೆ ತೋರುತ್ತದೆ.

ಆದರೂ ಪ್ರಮುಖ ಸಂಸ್ಥೆಗಳ ಆಕರ್ಷಣೆ, ಉತ್ಪಾದನೆ ಉತ್ತೇಜಿಸುವಂತಹ ನೀತಿಗಳ ಬೆಂಬಲ ಕಾಣೆಯಾಗಿದೆ. ಭಾರತವು ಹೆಚ್ಚಿನ ವಿದ್ಯುತ್ ವೆಚ್ಚ ಮತ್ತು ತೆರಿಗೆಯಂತಹ ನಾನಾ ವೈಕಲ್ಯಗಳಿಂದ ಬಳಲುತ್ತಿದೆ. ಇದು ಭಾರತವನ್ನು ವಿಯೆಟ್ನಾಂ ಮತ್ತು ಚೀನಾಕ್ಕಿಂತ ಶೇ.10 ಮತ್ತು ಶೇ.20ರಷ್ಟು ಕಡಿಮೆ ಸ್ಪರ್ಧಾತ್ಮಕತೆ ನೀಡುತ್ತಿದೆ ಎಂದು ವಿಶ್ಲೇಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.