ನವದೆಹಲಿ: ಆಧುನಿಕ ಇಂಟರ್ನೆಟ್ ಯುಗದಲ್ಲಿ ಬಹುತೇಕರ ಹಣದ ವಹಿವಾಟಿನ ಕಾರ್ಯವಿಧಾನಗಳು ಬದಲಾಗಿವೆ. ಎಲೆಕ್ಟ್ರಾನಿಕ್ ಡಿವೈಸ್ಗಳ ಜಮಾನದಲ್ಲಿ ನಗದುರಹಿತ ವಹಿವಾಟಿಗಳಿಗೆ ಮುಗಿಬಿದ್ದು ಬಿಲ್ ಪಾವತಿ, ಹಣ ವರ್ಗಾವಣೆ, ಮೊಬೈಲ್ ಫೋನ್ ಖರೀದಿ, ಟಿವಿ ಇತರ ಸೇವೆಗಳಿಗೆ ಆನ್ಲೈನ್ ಮುಖ್ಯ ಭೂಮಿಕೆಯಾಗಿದೆ.
ಕೊರೊನಾ ವೈರಸ್ ಬಂದ ಮೇಲೆ ಇದರ ಸೇವೆ ಮತ್ತಷ್ಟು ಹೆಚ್ಚಿದೆ. ಇದರ ಜೊತೆಗೆ ಆನ್ಲೈನ್ ವಹಿವಾಟಿನ ಪ್ರಕರಣಗಳು ಸಹ ಕಡಿಮೆ ಆಗುತ್ತಿಲ್ಲ. ವಂಚನೆಯಿಂದ ರಕ್ಷಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಸಲಹೆಗಳನ್ನು ನೀಡಿದೆ. ಈ ಟಿಪ್ಸ್ಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಮುಂದೆ ನಡೆಯಬಹುದಾದ ಮೋಸಗಳಿಂದ ತಪ್ಪಿಸಿಕೊಳ್ಳಬಹುದು.
ಕೋವಿಡ್ ಮಾರ್ಗಸೂಚಿ ಹೊರಡಿಸಿದ ಕೇಂದ್ರ: ಗ್ರಾಹಕ, ವರ್ತಕರು ಏನು ಮಾಡ್ಬೇಕು, ಏನು ಮಾಡಬಾರ್ದು?
ಇಂಟರ್ನೆಟ್ ಸೇವೆಗಳ ನೆರವನಿಂದ ಜಗತ್ತಿನಲ್ಲಿ ಎಲ್ಲಿಯಾದರೂ ಎಲೆಕ್ಟ್ರಾನಿಕ್ ಬಳಸಬಹುದಾದರಿಂದ, ಕಳ್ಳರು ನಿಮ್ಮ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳ ವಿವರಗಳನ್ನು ಪಡೆದುಕೊಂಡ ನಿಮ್ಮ ಬ್ಯಾಂಕ್ ಖಾತೆಗಳಿಂದ ಹಣವನ್ನು ಸುಲಭವಾಗಿ ಕದಿಯಬಹುದು.
ಕಳ್ಳತನದಿಂದ ರಕ್ಷಿಸಲು ತಮ್ಮ ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಬೇರೆಯವರಿಗೆ ನೀಡಬಾರದು.
ಬ್ಯಾಂಕ್ ಕಾರ್ಡ್ ವಿವರಗಳನ್ನು ರಹಸ್ಯವಾಗಿ ಇಡಬೇಕು.
ವೈಫೈ ಕಾರ್ಡ್ ಬಳಸುತ್ತಿದ್ದವರು ಇನೊಬ್ಬರ ಕೈಗೆ ಕಾರ್ಡ್ ಸಿಗದಂತೆ ಜಾಗೃತಿ ವಹಿಸಬೇಕು. ಒಂದು ವೇಳೆ ಕಾರ್ಡ್ ಕಳೆದರೆ ತಕ್ಷಣವೇ ಅದನ್ನು ನಿಷ್ಕ್ರಿಯೆಗೊಳಿಸಬೇಕು.
ವೈಫೈ ಎನೆಬಲ್ ಕಾರ್ಡ್‌ಗಳನ್ನು ವಿಶೇಷ ಕವರ್‌ಗಳಲ್ಲಿ ಇಡಬೇಕು. ಅದಕ್ಕೆ ತಲುಪಲಿರುವ ಯಾವುದೇ ಸಂಕೇತವನ್ನು ನಿರ್ಬಂಧಿಸುತ್ತದೆ.
ಅನುಕೂಲಕರ ಆನ್ಲೈನ್ ಬ್ಯಾಂಕಿಂಗ್ ಪಡೆಯಲು ಬ್ಯಾಂಕ್ಗಳು ನೀಡುವ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಬೇಕು
ಯಾರಾದರೂ ನಿಮಗೆ ಇ-ಮೇಲ್ ಅಥವಾ ಸಂದೇಶಗಳ ಮೂಲಕ ಬ್ಯಾಂಕಿನ ಲಿಂಕ್ ಕಳುಹಿಸಿದ್ದರೆ, ಅದರ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಫೋನ್ ಅಥವಾ ಸಿಸ್ಟಮ್ ಅನ್ನು ಹ್ಯಾಕ್ ಮಾಡಬಹುದು.
ಬ್ಯಾಂಕ್ಗಳು ಗ್ರಾಹಕರಿಂದ ಫೋನ್, ಸಂದೇಶ ಅಥವಾ ಮೇಲ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ. ಒಂದು ವೇಳೆ ಅಂತಹ ಕರೆ ಬಂದರೇ ನೀವು ಅಂತಹ ಯಾವುದೇ ಮೇಲ್, ಸಂದೇಶ ಅಥವಾ ಫೋನ್ ಅನ್ನು ಸ್ವೀಕಸಿದರೂ ಉತ್ತರಿಸಬಾರದು.