ನವದೆಹಲಿ: ಹಣಕಾಸಿನ ಒತ್ತಡಕ್ಕೊಳಗಾದ ಎಂಎಸ್‌ಎಂಇ ಘಟಕಗಳಿಗೆ 50,000 ಕೋಟಿ ರೂ.ಗಳ ಈಕ್ವಿಟಿ ಬೆಂಬಲ ಒದಗಿಸಲು, 20.97 ಲಕ್ಷ ಕೋಟಿ ರೂ. ಮೌಲ್ಯದ ಆತ್ಮನಿರ್ಭರ ಭಾರತ ಅಭಿಯಾನ ಪ್ಯಾಕೇಜ್‌ನ ಭಾಗವಾಗಿ ಘೋಷಿಸಲಾದ ನಿಧಿಯ ನಿಧಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನೀಶ್ ಕುಮಾರ್ ಅಭಯ ನೀಡಿದ್ದಾರೆ.
10,000 ಕೋಟಿ ರೂ. ನಿಧಿಯ ಯೋಜನೆಯ ಉದ್ದೇಶವು ಎಂಎಸ್‌ಎಂಇಗಳಿಗೆ ಈಕ್ವಿಟಿ ಮತ್ತು ಕಡಿಮೆ ಆದಾಯದ ತೀವ್ರ ಕೊರತೆಯಿಂದ ಪಾರಾಗಿ ಬೆಳವಣಿಗೆ ಹೊಂದಲು ನೆರವು ನೀಡಲಿದೆ.
ವಾಣಿಜ್ಯ ಒಕ್ಕೂಟ ಫಿಕ್ಕಿ ಆಯೋಜಿಸಿದ್ದ ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯವಹಾರಗಳಿಗೆ ತಮ್ಮ ದ್ರವ್ಯತೆಯನ್ನು ಸುಧಾರಿಸಲು ಬ್ಯಾಂಕ್ಗಳು ತುರ್ತು ಸಾಲ ಮಾರ್ಗವನ್ನು ಘೋಷಿಸಿವೆ. ಇದು ಕೋವಿಡ್-19 ಹೊಡೆತಕ್ಕೆ ಒಳಗಾದ ಉದ್ಯಮಿಗಳಿಗೆ ನೆರವಾಗಿದೆ. ಇತರ ದ್ರವ್ಯತೆ ಕ್ರಮವು ಅಧೀನ ಸಾಲದ ಮುಖೇನ ತೊಂದರೆಗೆ ಸಿಲುಕಿರುವ ಎಂಎಸ್‌ಎಂಇಗಳಿಗೆ ಸರ್ಕಾರ ಖಾತರಿ ನೀಡಿದೆ ಎಂದು ಹೇಳಿದರು.
ನಿಧಿಯ ನಿಧಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ನಾನು ಭಾವಿಸುತ್ತೇನೆ. ಇವು ಹಣಕಾಸಿನ ದೃಷ್ಟಿಯನ್ನು ನೋಡಿಕೊಳ್ಳುತ್ತವೆ ಎಂದು ತಿಳಿಸಿದರು.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮೇ ತಿಂಗಳಲ್ಲಿ ಫಂಡ್ಸ್ ಆಫ್ ಫಂಡ್ಸ್ (ಎಫ್‌ಒಎಫ್) ಈಕ್ವಿಟಿಯನ್ನು ಘೋಷಿಸಿದ್ದರು. ತೀವ್ರ ನಗದು ಕೊರತೆ ಎದುರಿಸುತ್ತಿರುವ ಹಾಗೂ ಬೆಳವಣಿಗೆಗೆಯಲ್ಲಿ ಹಿನ್ನೆಡೆ ಕಾಣುತ್ತಿರುವ ಎಂಎಸ್‌ಎಂಇಗಳಿಗೆ ಸಹಾಯ ಮಾಡಲು ಈ ಪ್ಯಾಕೇಜ್ ನೀಡಲಾಗಿದೆ ಎಂದಿದ್ದರು.