ಮುಂಬೈ: ಬ್ಯಾಂಕ್ಗಳಲ್ಲಿನ ಕುಂದು ಕೊರತೆ ನಿವಾರಿಸುವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಕೆಲವು ಮಾನದಂಡಗಳನ್ನು ಜಾರಿಗೆ ತಂದಿದೆ.
ಇದರ ಪ್ರಕಾರ, ಬ್ಯಾಂಕ್ಗಳು ಆರ್ಬಿಐಗೆ ದೂರನ್ನು ನೀಡಬಹುದಾಗಿದೆ. ಅಲ್ಲದೇ ಬ್ಯಾಂಕ್ನಿಂದ ನಿರ್ವಹಿಸಬಹುದಾದ ದೂರುಗಳ ಪರಿಹಾರದ ವೆಚ್ಚವನ್ನು ಮರು ಪಡೆಯಬಹುದಾಗಿದೆ. ಇನ್ನು ಬ್ಯಾಂಕಿಂಗ್ ಓಂಬುಡ್ಸ್ಮನ್ ಕಚೇರಿಗಳಲ್ಲಿ (ಒಬಿಒ) ಸ್ವೀಕರಿಸಿದ ದೂರುಗಳ ಸಂಖ್ಯೆ ಅವರ ಪೀರ್ ಗುಂಪಿನ ಸರಾಸರಿಗಿಂತ ಹೆಚ್ಚಾಗಿದೆ. ಈ ಹಿನ್ನೆಲೆ ಬ್ಯಾಂಕ್ಗಳ ಕುಂದುಕೊರತೆ ಪರಿಹರಿಸುವಲ್ಲಿ ಆರ್‌ಬಿಐ ತೀವ್ರ ವಿಮರ್ಶೆಗೆ ಕೂಡ ಒಳಗಾಗಿದೆ.
ಓದಿ:ಮೂರನೇ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ಗೆ 749.73 ಕೋಟಿ ಲಾಭ
ಬ್ಯಾಂಕ್ಗಳು ಸ್ವೀಕರಿಸಿದ ದೂರುಗಳ ಪ್ರಮಾಣ ಮತ್ತು ಸ್ವರೂಪದ ಬಗ್ಗೆ ಹೆಚ್ಚಿನ ಒಳನೋಟವನ್ನು ಹೊಂದುವುದು. ಪರಿಹಾರವನ್ನು ನೀಡುವುದರ ಜೊತೆಗೆ ಸರಿಯಾದ ಸಮಯಕ್ಕೆ ವಹಿವಾಟು ನಡೆಸುವುದು. ಗ್ರಾಹಕರಿಂದ ತೃಪ್ತಿದಾಯಕ ಫಲಿತಾಂಶ ಮತ್ತು ಅವರ ವಿಶ್ವಾಸವನ್ನು ಉತ್ತೇಜಿಸುವುದು. ಕುಂದುಕೊರತೆ ಪರಿಹಾರ ಕಾರ್ಯವಿಧಾನದಲ್ಲಿ ಬ್ಯಾಂಕ್ಗಳು ನಿರಂತರ ಸಮಸ್ಯೆಗಳನ್ನು ಹೊಂದಿರುವುದರಿಂದ ಆರ್ಬಿಐನ ಈ ಚೌಕಟ್ಟಿನ ಉದ್ದೇಶವಾಗಿದೆ.