ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಾರ್ಷಿಕ ವರದಿ ಗುರುವಾರ ಬಿಡುಗಡೆಯಾಗಿದ್ದು, ವಿದೇಶಿ ವಿನಿಮಯ ಮಾರಾಟದ ಮೂಲಕ ಗಳಿಸಿದ ಹೆಚ್ಚಿನ ಆದಾಯವು ಕೇಂದ್ರೀಯ ಬ್ಯಾಂಕಿನಿಂದ ಕೇಂದ್ರಕ್ಕೆ ಹೆಚ್ಚಿನ ವರ್ಗಾವಣೆಗೆ ಕಾರಣವಾಗಿದೆ ಎಂಬುದು ತಿಳಿದು ಬಂದಿದೆ.
ಹಿಂದಿನ ವರ್ಷದಲ್ಲಿ 57,127.53 ಕೋಟಿ ರೂ.ಗಳಷ್ಟಿದ್ದ ಆರ್‌ಬಿಐಗೆ ಒಟ್ಟಾರೆ 99,122 ಕೋಟಿ ರೂ. ವಿದೇಶಿ ವಿನಿಮಯ ವಹಿವಾಟಿನ ಆದಾಯ ಗಳಿಸಿದ್ದು, ಕೇಂದ್ರ ಬ್ಯಾಂಕ್ಗೆ 2021ರ ಆರ್ಥಿಕ ವರ್ಷದಲ್ಲಿ ಶೇ 69ರಷ್ಟು ಏರಿಕೆ ದಾಖಲಿಸಿದೆ ಎಂದು ವರದಿಯಲ್ಲಿದೆ.
ಆರ್‌ಬಿಐನ ವಾರ್ಷಿಕ ವರದಿಯು 2020ರ ಜುಲೈರಿಂದ 2021ರ ಮಾರ್ಚ್ವರೆಗಿನ ಕೇವಲ ಒಂಬತ್ತು ತಿಂಗಳುಗಳಷ್ಟಿದೆ. ಇದು ಜುಲೈ-ಜೂನ್‌ನಿಂದ ಹಿಂದಿನ ಏಪ್ರಿಲ್-ಮಾರ್ಚ್ ಹಣಕಾಸು ವರ್ಷಕ್ಕೆ ಪರಿವರ್ತನೆಗೊಳ್ಳುವ ಹಂತದಲ್ಲಿದೆ.
ರಿಸರ್ವ್ ಬ್ಯಾಂಕಿನ ಲೆಕ್ಕಪರಿಶೋಧಕ ವರ್ಷವನ್ನು ಏಪ್ರಿಲ್ - ಮಾರ್ಚ್ಗೆ (ಜುಲೈ-ಜೂನ್ ಮೊದಲು) 2020-21ರ ವರ್ಷವು ಮಹತ್ವದ್ದಾಗಿದೆ. ಈ ಪರಿವರ್ತನೆಯಿಂದಾಗಿ 2020-21ರ ಲೆಕ್ಕಪತ್ರ ವರ್ಷವು ಕೇವಲ ಒಂಬತ್ತು ತಿಂಗಳು, ಅಂದರೆ 2020 ಜುಲೈ- 2021 ಮಾರ್ಚ್ ಎಂದು ಆರ್‌ಬಿಐ ವರದಿ ತಿಳಿಸಿದೆ.
ಈ ವರ್ಷವು ಒಟ್ಟಾರೆ 99,122 ಕೋಟಿ ರೂ. ಹೆಚ್ಚುವರಿ ಮೊತ್ತವಾಗಿದ್ದಪು, ಹಿಂದಿನ ವರ್ಷದಲ್ಲಿ 57,127.53 ಕೋಟಿ ರೂ.ಗಳಷ್ಟಿತ್ತು. ಇದು ಶೇ 73.51ರಷ್ಟು ಏರಿಕೆಯಾಗಿದೆ. 2021ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಆರ್‌ಬಿಐನ ಬ್ಯಾಲೆನ್ಸ್ ಶೀಟ್ (ಜುಲೈ-ಮಾರ್ಚ್) ಶೇ 6.99ರಷ್ಟು ಹೆಚ್ಚಾಗಿದೆ. ಇದು ದ್ರವ್ಯತೆ ಮತ್ತು ವಿದೇಶಿ ವಿನಿಮಯ ಕಾರ್ಯಾಚರಣೆಯನ್ನು ಪ್ರತಿಬಿಂಬಿಸುತ್ತದೆ.
ಬ್ಯಾಲೆನ್ಸ್ ಶೀಟ್ನ ಗಾತ್ರವು 3,72,876.43 ಕೋಟಿ ರೂ.ಗಳಿಂದ ಹೆಚ್ಚಾಗಿದೆ. 2020ರ ಜೂನ್ 30ರ ವೇಳೆಗೆ 53,34,792.70 ಕೋಟಿ ರೂ.ಗಳಿಂದ ಶೇ 6.99ರಷ್ಟು ಏರಿಕೆಯಾಗಿದೆ. 2021ರ ಮಾರ್ಚ್ 31ರ ವೇಳೆಗೆ 57,07,669.13 ಕೋಟಿ ರೂ.ಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಆಸ್ತಿ ಭಾಗದಲ್ಲಿನ ಹೆಚ್ಚಳವು ಮುಖ್ಯವಾಗಿ ವಿದೇಶಿ ಮತ್ತು ದೇಶೀಯ ಹೂಡಿಕೆಗಳ ಅನುಕ್ರಮವಾಗಿ ಶೇ 11.48ರಷ್ಟು ಮತ್ತು ಶೇ 13.75ರಷ್ಟು ಹೆಚ್ಚಳವಾಗಿದೆ. ಆದರೆ, ಹೊಣೆಗಾರಿಕೆಯ ಹೆಚ್ಚಳವು ಠೇವಣಿಗಳ ಹೆಚ್ಚಳದಿಂದಾಗಿ (ಶೇ 26.85ರಷ್ಟು), ನೋಟ್ಸ್ ವಿತರಣೆ (ಶೇ 7.26ರಷ್ಟು) ಮತ್ತು ಇತರವು (ಶೇ 43.05ರಷ್ಟು) ಆಗಿದೆ.
ವರ್ಷದ ಆದಾಯವು ಶೇ 10.96ರಷ್ಟು ಕಡಿಮೆಯಾಗಿದ್ದರೆ, ಖರ್ಚು ಶೇ 63.10ರಷ್ಟು ತಗ್ಗಿದೆ. 20,710.12 ಕೋಟಿ ರೂ. ಒದಗಿಸಿ ಕೇಂದ್ರದ ಆಕಸ್ಮಿಕ ನಿಧಿಗೆ (ಸಿಎಫ್) ವರ್ಗಾಯಿಸಲಾಯಿತು. ಇದು 2021ರಲ್ಲಿ ಒಟ್ಟು 34,146.75 ಕೋಟಿ ರೂ., 2020 ವಿತ್ತೀಯ ವರ್ಷದಲ್ಲಿ ಆರ್‌ಬಿಐನ ವೆಚ್ಚ 92,540.93 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಎಫ್‌ಗೆ ವರ್ಗಾವಣೆ 73,615 ಕೋಟಿ ರೂ. ಆಗಿದೆ ಎಂದು ವರದಿ ಉಲ್ಲೇಖಿಸಿದೆ.