ETV Bharat / business

ಸೆ.10 ರಂದು ₹10,000 ಕೋಟಿ ಮೌಲ್ಯದ ಸರ್ಕಾರಿ ಭದ್ರತೆಗಳ ಖರೀದಿ-ಮಾರಾಟ: ಆರ್‌ಬಿಐ

author img

By

Published : Sep 7, 2020, 5:25 PM IST

ಎರಡು ಹಂತಗಳಲ್ಲಿ 10,000 ಕೋಟಿ ರೂ.ನಂತೆ ಒಟ್ಟು 20,000 ಕೋಟಿ ರೂ. ಮೌಲ್ಯದ ಸರ್ಕಾರಿ ಭದ್ರತೆಗಳ ಖರೀದಿ ಮತ್ತು ಮಾರಾಟ (ಹರಾಜು) ನಡೆಸುವುದಾಗಿ ಆರ್‌ಬಿಐ ಘೋಷಿಸಿದೆ. ಮೊದಲ ಹಂತದ ಪ್ರಕ್ರಿಯೆ ಸೆ.10 ರಂದು ನಡೆಯಲಿದೆ.

RBI
ಆರ್‌ಬಿಐ

ಮುಂಬೈ: ಸೆಪ್ಟೆಂಬರ್​ 10 ರಂದು ₹10,000 ಕೋಟಿ ಮೌಲ್ಯದ ಸರ್ಕಾರಿ ಭದ್ರತೆಗಳ ಖರೀದಿ ಮತ್ತು ಮಾರಾಟ ನಡೆಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಘೋಷಿಸಿದೆ.

ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (ಒಎಂಒ) ಅಡಿ ಏಕಕಾಲದಲ್ಲಿ ಸರ್ಕಾರಿ ಭದ್ರತೆಗಳ ಖರೀದಿ ಮತ್ತು ಮಾರಾಟ ನಡೆಸುವುದಾಗಿ ಆರ್‌ಬಿಐ ಆಗಸ್ಟ್​ 31ರಂದು ತಿಳಿಸಿತ್ತು. ಎರಡು ಹಂತಗಳಲ್ಲಿ 10,000 ಕೋಟಿ ರೂ.ನಂತೆ ಒಟ್ಟು 20,000 ಕೋಟಿ ರೂ. ಮೌಲ್ಯದ ಸರ್ಕಾರಿ ಭದ್ರತೆಗಳ ಖರೀದಿ ಮತ್ತು ಮಾರಾಟ (ಹರಾಜು) ಪ್ರಕ್ರಿಯೆ ನಡೆಯಲಿದೆ.

ಮೊದಲ ಹಂತದ ಪ್ರಕ್ರಿಯೆ ಸೆ.10 ರಂದು ನಡೆಯಲಿದ್ದು, ಸೆ.17 ರಂದು ಎರಡನೇ ಹಂತದ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ನಡೆಯಲಿದೆ. ಹರಾಜಿನ ಫಲಿತಾಂಶವನ್ನು ಅದೇ ದಿನ ಪ್ರಕಟಿಸಲಾಗುವುದು.

ಕೋವಿಡ್​ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಹಾಗೂ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಆರ್‌ಬಿಐ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.