ETV Bharat / sports

ಚೆನ್ನೈ ಟೆಸ್ಟ್​: ಭಾರತ ವಿರುದ್ದ ಹೊಸ ದಾಖಲೆ ಬರೆದ ಬಾಂಗ್ಲಾ ಯುವ ಬೌಲರ್​ ಹಸನ್​ ಮಹ್ಮೂದ್​​ - Hasan Mahmood New Record

author img

By ETV Bharat Sports Team

Published : 3 hours ago

ಭಾರತ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಯುವ ಬೌಲರ್​ ಹಸನ್​ ಮಹ್ಮೂದ್​ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅದೇನೆಂದು ಈ ಸುದ್ಧಿಯಲ್ಲಿ ತಿಳಿಯಿರಿ.​

ಹಸನ್​ ಮಹ್ಮೂದ್​​
ಹಸನ್​ ಮಹ್ಮೂದ್​​ (AP and AFP)

ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಯುವ ವೇಗದ ಬೌಲರ್ ಹಸನ್ ಮಹ್ಮೂದ್​ ದಾಖಲೆಯೊಂದನ್ನು ಬರೆದಿದ್ದಾರರೆ. ಮಹಮೂದ್ ಮೊದಲ ದಿನದಂದೇ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾದ ಅಗ್ರ ಕ್ರಮಾಂಕ ಬ್ಯಾಟರ್​ಗಳ ವಿಕೆಟ್​ ಪಡೆದು ಮಿಂಚುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಎರಡನೇ ದಿನವಾದ ಇಂದು ಹಸನ್ ಮಹ್ಮೂದ್ 5ನೇ ವಿಕೆಟ್ ಪಡೆಯುವ ಮೂಲಕ ಭಾರತದ ವಿರುದ್ಧ ಟೆಸ್ಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಬಾಂಗ್ಲಾ ಬೌಲರ್ ಎನಿಸಿಕೊಂಡರು. ಈ ಯುವ ವೇಗಿಯ ಬೌಲಿಂಗ್​ ದಾಳಿಯಿಂದ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾವನ್ನು 376 ರನ್‌ಗಳಿಗೆ ಆಲೌಟ್ ಮಾಡಿತು.

ಟಾಸ್​ ಸೋತು ಮೊದಲ ಬ್ಯಾಟ್​ಗಿಳಿದ್ದ ಭಾರತಕ್ಕೆ, ಮಹ್ಮೂದ್ ತಮ್ಮ ಮಾರಕ ಬೌಲಿಂಗ್​ನಿಂದ ಶಾಕ್​ ನೀಡಿದ್ದರು. 22.2 ಓವರ್‌ ಬೌಲಿಂಗ್​ ಮಾಡಿದ ಹಸನ್​ 5 ವಿಕೆಟ್ ಪಡೆದು ಮಿಂಚಿದ್ದರು. ಇದರೊಂದಿಗೆ 2007ರ ಬಳಿಕ ಅಂದರೇ 17 ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ವಿರುದ್ಧ 5 ವಿಕೆಟ್‌ಗಳನ್ನು ಪಡೆದ ಏಷ್ಯನ್ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಟ್ಟು 22.2 ಓವರ್​ ಬೌಲಿಂಗ್​ ಮಾಡಿದ ಮಹ್ಮೂದ್​ 83 ರನ್​ಗಳನ್ನು ನೀಡಿ 5 ವಿಕೆಟಗಗಳನ್ನು ಉರುಳಿಸಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್​ ಪಂತ್​, ಬುಮ್ರಾರ ವಿಕೆಟ್​ ಸೇರಿವೆ.

ಇದನ್ನೂ ಓದಿ: ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಟಾರ್​​ ಫುಟ್ಬಾಲರ್​ ಬಂಧನ; ₹6 ಕೋಟಿ ಮೌಲ್ಯದ ಮಾಲು ವಶ - Star Footballer Arrested

ETV Bharat Logo

Copyright © 2024 Ushodaya Enterprises Pvt. Ltd., All Rights Reserved.