ETV Bharat / business

ಜಿಯೋದಲ್ಲಿ ಮತ್ತೊಂದು ಸಂಸ್ಥೆಯಿಂದ ಹೂಡಿಕೆ: ಶೇ.0.15 ರಷ್ಟು ಷೇರು ಖರೀದಿಸಿದ ಕ್ವಾಲ್ಕಾಮ್ - Mukesh Ambani

ವೈರ್​​​ಲೆಸ್​​ ಟೆಕ್ನಾಲಜಿ ಲೀಡರ್​​​ ಕ್ವಾಲ್ಕಾಮ್​​​ ಕಂಪನಿಯು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 0.15 ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ಹೂಡಿಕೆ ಮಾಡಿದೆ.

Qualcomm invests Rs 730 cr in Jio for 0.15% stake
ಜಿಯೋದಲ್ಲಿ ಮತ್ತೊಂದು ಸಂಸ್ಥೆಯಿಂದ ಹೂಡಿಕೆ
author img

By

Published : Jul 13, 2020, 2:09 PM IST

Updated : Jul 13, 2020, 2:25 PM IST

ನವದೆಹಲಿ: ವೈರ್​​​ಲೆಸ್​​ ಟೆಕ್ನಾಲಜಿ ಲೀಡರ್​​​ ಕ್ವಾಲ್ಕಾಮ್​​​ ಕಂಪನಿಯು ಜಿಯೋದಲ್ಲಿ ಶೇ.0.15ರಷ್ಟು (₹ 730 ) ಪಾಲು ಖರೀದಿಸಲು ನಿರ್ಧರಿಸಿದೆ. ಈ ಮೂಲಕ ಏಪ್ರಿಲ್​​ನಿಂದ ಈವರೆಗೂ ಮುಖೇಶ್ ಅಂಬಾನಿಯ ರಿಲಯನ್ಸ್ ಕಂಪನಿಗೆ ₹ 1.18 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ.

ಭಾರತದಲ್ಲಿ ಸುಧಾರಿತ 5ಜಿ ತಂತ್ರಜ್ಞಾನ ಮೂಲಸೌಕರ್ಯಗಳ ಮತ್ತು ಸೇವೆಗಳ ಅಭಿವೃದ್ಧಿಗೆ ಈ ಹೂಡಿಕೆ ಮಾಡಲು ಜಿಯೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದೊಂದಿಗೆ, ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನಲ್ಲಿ ಶೇ 25.24ರಷ್ಟು ಪಾಲನ್ನು ಮಾರಾಟ ಮಾಡಿದೆ. ದೃಢ ಹೆಜ್ಜೆ ಇಟ್ಟಿರುವ ರಿಲಯನ್ಸ್ ಜಿಯೋ ಪಾಲು ಮಾರಾಟ ಮಾಡುವ ಮೂಲಕ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳುತ್ತಿದೆ.

ರಿಲಾಯನ್ಸ್ ಜಿಯೋದಲ್ಲಿ ಖರೀದಿ ಮಾಡುತ್ತಿರುವುದು ಇದು 10ನೇ ಸಂಸ್ಥೆ. ಫೇಸ್​ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ ಮತ್ತು ಈಗ ಅಬುಧಾಬಿ ಇನ್​ವೆಸ್ಟ್​ಮೆಂಟ್ ಅಥಾರಿಟಿ ಸಂಸ್ಥೆ ಈವರೆಗೆ ಜಿಯೋದಲ್ಲಿ ಹೂಡಿಕೆ ಮಾಡಿವೆ. ಈ 10 ಸಂಸ್ಥೆಗಳ ಒಪ್ಪಂದಗಳಿಂದ ರಿಲಯನ್ಸ್ ಜಿಯೋಗೆ ಒಟ್ಟು ₹ 1,18,318.45 ಕೋಟಿ ಬಂಡವಾಳ ಹರಿದು ಬಂದಿದೆ.

ಈವರೆಗೂ ಜಿಯೋದಲ್ಲಿ ಮಾಡಲಾಗಿರುವ ಹೂಡಿಕೆ

  • ಫೇಸ್​ಬುಕ್: 43,573 ಕೋಟಿ (ಶೇ.9.99)
  • ಸಿಲ್ವರ್ ಲೇಕ್ ಪಾರ್ಟ್ನರ್: ₹ 10,202.55 ಕೋಟಿ (ಶೇ.2.08)
  • ವಿಸ್ಟಾ ಈಕ್ವಿಟಿ ಪಾರ್ಟ್ನರ್: ₹ 11,367 ಕೋಟಿ (ಶೇ.2.32)
  • ಜನರಲ್ ಅಟ್ಲಾಂಟಿಕ್: ₹ 6,598.38 ಕೋಟಿ (ಶೇ.1.34)
  • ಕೆಕೆಆರ್: ₹ 11,367 ಕೋಟಿ (ಶೇ.2.32)
  • ಮುಬಾದಲ: ₹ 9,093.60 ಕೋಟಿ (ಶೇ.1.85 )
  • ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ: ₹ 17050.50 ಕೋಟಿ (ಶೇ.3.48)
  • ಟಿಪಿಜಿ: ₹ 4,546.80 ಕೋಟಿ (ಶೇ.0.93 )
  • ಎಲ್ ಕ್ಯಾಟರ್ಟನ್: ₹ 1,894.50 ಕೋಟಿ (ಶೇ.0.39)
  • ಕ್ವಾಲ್ಕಾಮ್​​​ ಕಂಪನಿ: ₹ 730 ಕೋಟಿ (ಶೇ.0.15)

Last Updated : Jul 13, 2020, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.