ETV Bharat / business

ರೈಲ್ವೆ ಖಾಸಗೀಕರಣ: ಟಿಕೆಟ್​​ ದರ ನಿರ್ಧಾರ ಖಾಸಗಿ ಸಂಸ್ಥೆಗಳ ತೆಕ್ಕೆಗೆ

author img

By

Published : Jul 7, 2020, 4:22 PM IST

ಖಾಸಗಿ ರೈಲ್ವೆ ನಿರ್ವಾಹಕರು ಒಟ್ಟು ಆದಾಯವನ್ನು ರೈಲ್ವೆಯೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಇದರಲ್ಲಿ ಆದ್ಯತೆಯ ಆಸನಗಳು, ಸಾಮಾನು ಸರಂಜಾಮು ಮತ್ತು ಜಾಹೀರಾತುಗಳಿಂದ ಬರುವ ಆದಾಯವೂ ಸೇರಿರುತ್ತದೆ. ಜೊತೆಗೆ ಟಿಕೆಟ್ ದರ ನಿಗದಿಯ ಹಕ್ಕನ್ನು ಖಾಸಗಿ ಕಂಪನಿಗಳಿಗೆ ನೀಡಲಾಗುತ್ತಿದೆ.

Railway
ರೈಲ್ವ

ನವದೆಹಲಿ: ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಪ್ರಯಾಣಿಕರಿಂದ ತಮ್ಮ 151 ರೈಲುಗಳಿಗೆ ಶುಲ್ಕ ವಿಧಿಸುವ ದರ ನಿರ್ಧಾರದ ಸ್ವಾತಂತ್ರ್ಯವನ್ನು ಖಾಸಗಿ ರೈಲ್ವೆ ಸಂಸ್ಥೆಗಳಿಗೆ ನೀಡಿದೆ.

ಖಾಸಗಿ ರೈಲ್ವೆ ನಿರ್ವಾಹಕರು ಒಟ್ಟು ಆದಾಯವನ್ನು ರೈಲ್ವೆಯೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಇದರಲ್ಲಿ ಆದ್ಯತೆಯ ಆಸನಗಳು, ಸಾಮಾನು-ಸರಂಜಾಮು ಮತ್ತು ಜಾಹೀರಾತುಗಳಿಂದ ಬರುವ ಆದಾಯವೂ ಸೇರಿರುತ್ತದೆ.

ಪ್ರಾಜೆಕ್ಟ್ ಇನ್ಫಾರ್ಮೇಷನ್ ಮೆಮೋರಾಂಡಮ್ ಡಾಕ್ಯುಮೆಂಟ್ ಪ್ರಕಾರ, ಈ ಕಂಪನಿಗಳು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನೇ ಬಳಸಬೇಕಾಗುತ್ತದೆ. ಗಳಿಸಿದ ಆದಾಯವನ್ನು ಎಸ್ಕ್ರೊ* ಖಾತೆಗೆ ವರ್ಗಾಯಿಸಲು ಯಾಂತ್ರಿಕ ವ್ಯವಸ್ಥೆ ರೂಪಿಸಲಾಗಿದೆ.

ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ರೈಲುಗಳ ಟಿಕೆಟ್‌ ಬೆಲೆಯ ಆತಂಕವನ್ನು ನಿವಾರಿಸಿ ಮಾರುಕಟ್ಟೆ ಚಾಲಿತ ಮತ್ತು ಸ್ಪರ್ಧಾತ್ಮಕ ಬೆಲೆಗಳ ಆಧಾರದ ಮೇಲೆ ನಡೆಯಲಿದೆ. ಆರ್ಥಿಕ ಕಾರ್ಯಸಾಧ್ಯತೆಗೆ ಖಾಸಗಿ ರೈಲು ನಿರ್ವಾಹಕರು ಟಿಕೆಟ್ ದರವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ರೈಲ್ವೆ ಇತ್ತೀಚೆಗೆ ಅರ್ಹತೆಗಾಗಿ ವಿನಂತಿಯನ್ನು (ಆರ್‌ಎಫ್‌ಕ್ಯೂ) ತೇಲಿಬಿಟ್ಟಿದೆ. ಖಾಸಗಿ ಸಂಸ್ಥೆಗಳನ್ನು ತನ್ನ ನೆಟ್‌ವರ್ಕ್‌ನಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಆಹ್ವಾನಿಸಿದೆ. ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ದಾಖಲೆಯಲ್ಲಿ, ಬಿಡ್​ದಾರರ ಕಿರುಪಟ್ಟಿ ಅವರ ಹಣಕಾಸಿನ ಸಾಮರ್ಥ್ಯವನ್ನು ಆಧರಿಸಿರುತ್ತದೆ ಮತ್ತು ಅವರು ಯೋಜನೆಯನ್ನು ಕೈಗೊಳ್ಳಲು ಪ್ರಸ್ತಾವನೆ (ಆರ್‌ಎಫ್‌ಪಿ) ಹಂತದ ಕೋರಿಕೆಯ ಮೇರೆಗೆ ಒಟ್ಟು ಆದಾಯದಲ್ಲಿ ಪಾಲನ್ನು ನೀಡಬೇಕಾಗುತ್ತದೆ.

ಎಸ್ಕ್ರೊ* ಖಾತೆಯೆಂದರೆ ಅದು ಮೂರನೇ ವ್ಯಕ್ತಿಯ ಧನಸಹಾಯದ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.