ETV Bharat / business

122 ಕೋಟಿ ರೂ. ತೆರಿಗೆ ವಂಚಿಸಿ GST ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಐವರು ಅಂದರ್ - ಜಿಎಸ್‌ಟಿ ವಂಚನೆ ಪ್ರಕರಣಗಳು

ಪಂಜಾಬ್ ರಾಜ್ಯ ಜಿಎಸ್​​ಟಿಯ ತನಿಖಾ ವಿಭಾಗವು ಪಂಜಾಬ್, ದೆಹಲಿ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಕಲಿ ಬಿಲ್ಲಿಂಗ್ ಜಾಲ ಸೃಷ್ಟಿಸಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ವಿವಿಧ ಸಂಸ್ಥೆಗಳಿಗೆ 122 ಕೋಟಿ ರೂ.ವಂಚಿಸಿದ್ದರು ಎಂದು ಹೇಳಿದ್ದಾರೆ.

GST
GST
author img

By

Published : Mar 13, 2021, 7:42 PM IST

ನವದೆಹಲಿ: ಜಿಎಸ್‌ಟಿ ಅಧಿಕಾರಿಗಳು ನಕಲಿ ದಾಖಲೆಗಳ ಮೇಲೆ ಕಾಲ್ಪನಿಕ ಸಂಸ್ಥೆ ಹುಟ್ಟುಹಾಕಿ 122 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚಿಸಿದ ಪ್ರಕರಣದಡಿ ಐವರನ್ನು ಬಂಧಿಸಲಾಗಿದೆ ಎಂದು ಪಂಜಾಬ್​ ಜಿಎಸ್​ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ರಾಜ್ಯ ಜಿಎಸ್​​ಟಿಯ ತನಿಖಾ ವಿಭಾಗವು ಪಂಜಾಬ್, ದೆಹಲಿ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಕಲಿ ಬಿಲ್ಲಿಂಗ್ ಜಾಲ ರಚಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ವಿವಿಧ ಸಂಸ್ಥೆಗಳಿಗೆ 122 ಕೋಟಿ ರೂ.ವಂಚಿಸಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀವು ಬದುಕಲು ಒದ್ದಾಡುತ್ತಿರುವಾಗ ಅದಾನಿ 12 ಲಕ್ಷ ಕೋಟಿ ರೂ. ಗಳಿಸಿದ್ದೇಗೆ?: ರಾಗಾ ಸವಾಲ್​

ಗುರುವಾರವಷ್ಟೇ ಜಿಎಸ್‌ಟಿ ಅಧಿಕಾರಿಗಳು ನಕಲಿ ದಾಖಲೆಗಳ ಮೇಲೆ ಕಾಲ್ಪನಿಕ ಸಂಸ್ಥೆ ಹುಟ್ಟುಹಾಕಿ 43 ಕೋಟಿ ರೂ. ಐಟಿಸಿ ವಂಚಿಸಿದ ಪ್ರಕರಣದಡಿ ಓರ್ವನನ್ನು ಬಂಧಿಸಲಾಗಿತ್ತು. ಹರಿಯಾಣದ ಜಿಎಸ್‌ಟಿ ಇಂಟೆಲಿಜೆನ್ಸ್‌ನ ನಿರ್ದೇಶನಾಲಯದ (ಡಿಜಿಎಂಐ) ಗುರುಗ್ರಾಮ್ ವಲಯ ಘಟಕ (ಜಿ ಝ್ಯಡ್​ಯು) ದೆಹಲಿಯ ನಿವಾಸಿ ರವೀಂದರ್ ಕುಮಾರ್ ಎಂಬುವವರನ್ನು ಬಂಧಿಸಿದೆ. ಸರಕು ಅಥವಾ ಸೇವೆಗಳ ನೈಜ ರಶೀದಿ ಮತ್ತು ಪೂರೈಕೆಯಿಲ್ಲದೇ ನಕಲಿ ಇನ್‌ವಾಯ್ಸ್‌ಗಳಲ್ಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಎಸಗಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.