ETV Bharat / business

ಪುದುಚೇರಿಯಲ್ಲಿ ಮತ ಸೆಳೆಯಲು ಭರವಸೆಗಳು ಬುತ್ತಿ: 2016 & 2021ರ ಬಿಜೆಪಿ ಪ್ರಣಾಳಿಕೆಗಳು ಹೀಗಿವೆ.. - Tamil Nadu Assembly polls

ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆದ ನಂತರ ಪ್ರಣಾಳಿಕೆ ಅಂತಿಮಗೊಳಿಸಲಾಗಿದೆ. ಈ ಪ್ರಣಾಳಿಕೆ ಜನರ ಆಕಾಂಕ್ಷೆಗಳನ್ನು ಪೂರೈಸುವ ಭರವಸೆಯಾಗಿದೆ. ಇದರ ಸಿದ್ಧತೆಗೂ ಮುನ್ನ ಪುದುಚೇರಿಯ ಸುಮಾರು 50,000 ಜನರಿಂದ ಪಕ್ಷ ಅಭಿಪ್ರಾಯ ಸಂಗ್ರಹಿಸಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪ್ರಣಾಳಿಕೆ ಬಿಡುಗಡೆ ಮಾಡಿ ಹೇಳಿದರು.

Puducherry
Puducherry
author img

By

Published : Mar 26, 2021, 8:06 PM IST

ಪುದುಚೇರಿ: ಪುದುಚೇರಿಯಲ್ಲಿ ಶತಾಯಗತಾಯ ಗೆಲುವು ಸಾಧಿಸಲೇ ಬೇಕು ಅಂತಾ ತೀರ್ಮಾನಿಸಿರುವ ಬಿಜೆಪಿ, ಸ್ಥಳೀಯ ವಿಷಯಗಳನ್ನು ರಾಜಕೀಯ ಮುನ್ನೆಲೆಯಲ್ಲಿ ಇರಿಸಿಕೊಂಡು ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕಳೆದ ಬಾರಿಯೂ ಹಲವು ಸ್ಥಳೀಯ ವಿಚಾರಗಳನ್ನು ಇರಿಸಿಕೊಂಡು ಚುನಾವಣೆ ಎದುರಿಸಿತ್ತು. ಆದರೆ, ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ.

2016ರ ಬಿಜೆಪಿಯ ಚುನಾವಣೆ ಭರವಸೆಗಳು:

2016ರಲ್ಲಿ ನಡೆದ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಕೇಂದ್ರ ಪ್ರದೇಶದಲ್ಲಿ ಒಟ್ಟು ನಿಷೇಧವನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಇದೇ ಭರವಸೆಯನ್ನು ಎಡಪಕ್ಷಗಳ ಒಕ್ಕೂಟ ಸಿಪಿಎಂ ಕೂಡ ನೀಡಿತ್ತು.

ಅಂದು ಸ್ವಂತ ಬಲದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ ಪ್ರಣಾಳಿಕೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಉದ್ಯಮಿಗಳಿಗೆ ತೆರಿಗೆ ಪ್ರಯೋಜನಗಳನ್ನು ನೀಡುವುದು. ಹಲವು ವರ್ಷಗಳಿಂದ ನಾಗರಿಕ ಚುನಾವಣೆಗಳನ್ನು ನಡೆಯುತ್ತಿದ್ದು, ನಾಗರಿಕ ಸಂಸ್ಥೆಗಳಲ್ಲಿ 50 ಪ್ರತಿಶತ ಸ್ಥಾನಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗುವುದು. ಕೃಷಿಯ ಅಭಿವೃದ್ಧಿ, ರೈತರಿಗೆ ಬೆಳೆ ವಿಮಾ ಯೋಜನೆ ಪರಿಚಯಿಸುತ್ತೇವೆ. ಮಾಹಿತಿ ಮತ್ತು ಹಕ್ಕು ಪತ್ರದಲ್ಲಿ ಮಾಹಿತಿ ಹಕ್ಕು ಕಾಯ್ದೆಜಾರಿಗೆ ತರುವ ಭರವಸೆ ನೀಡಿತ್ತು. ಆದರೆ, ಇದಾವುದು ಬಿಜೆಪಿ ಕೈಹಿಡಿಯಲಿಲ್ಲ.

2021ರ ಬಿಜೆಪಿ ಪ್ರಣಾಳಿಕೆ

  • ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
  • ಪುದುಚೇರಿಗೆ ವಿಶೇಷ ಕೇಂದ್ರ ಪ್ರದೇಶ ಸ್ಥಾನಮಾನ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನೀಡಿದಂತೆ ಶೇ 25ರಿಂದ 40ರವರೆಗೆ ಹಣ ಹಂಚಿಕೆ
  • ಪುದುಚೇರಿಯನ್ನು ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡುವುದರ ಜೊತೆಗೆ ಶಿಶುವಿಹಾರದಿಂದ ಸ್ನಾತಕೋತ್ತರ ಹಂತದವರೆಗೆ ಬಾಲಕಿಯರಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ
  • ಕಾಲೇಜು ಶಿಕ್ಷಣ ಪಡೆಯುವ ಬಾಲಕಿಯರಿಗೆ ಉಚಿತ ಸ್ಕೂಟರ್
  • ಮಹಿಳಾ ಸ್ವ-ಸಹಾಯ ಗುಂಪುಗಳಿಗೆ 5 ಲಕ್ಷ ರೂ. ಬಡ್ಡಿರಹಿತ ಸಾಲ ಹಾಗೂ ಕೋವಿಡ್ -19ನಿಂದ ಪ್ರಭಾವಿತರಾದ ಮಹಿಳಾ ಸ್ವಸಹಾಯ ಸಂಘಗಳು ತೆಗೆದುಕೊಂಡ ಸಾಲಗಳನ್ನು ಮನ್ನಾ
  • ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆ
  • ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ಸ್ಥಳಗಳು, ಪಿಡಿಎಸ್ ಮಳಿಗೆಗಳು ಮತ್ತು ಅಂಗನವಾಡಿಗಳಲ್ಲಿ ನೈರ್ಮಲ್ಯ ಕರವಸ್ತ್ರ ಮಾರಾಟ ಯಂತ್ರಗಳನ್ನು ಸ್ಥಾಪನೆ
  • ಕವಿ ಸುಬ್ರಮಣ್ಯ ಭಾರತಿ ಅವರ 150 ಅಡಿಗಳ ಪ್ರತಿಮೆ ನಿರ್ಮಾಣ
  • ಪ್ರವಾಸೋದ್ಯಮ ಉತ್ತೇಜಿಸಲು ಪುದುಚೇರಿಯಾದ್ಯಂತ ಹೊಸ ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆ.
  • ಹೊಸ ಐಟಿ ಪಾರ್ಕ್‌ಗಳು, ಜವಳಿ ಉದ್ಯಾನವನಗಳು, ಮಮ್ಮಲಾಪುರಂ ಮೂಲಕ ಚೆನ್ನೈಗೆ ಎತ್ತರಿಸಿದ ರೈಲ್ವೆ ಮಾರ್ಗ ನಿರ್ಮಾಣ
  • 10 ಮತ್ತು 12ನೇ ತರಗತಿಗಳಿಗೆ ಪ್ರತ್ಯೇಕ ಶಾಲಾ ಶಿಕ್ಷಣ ಮಂಡಳಿ ರಚಿಸುವುದು ಪುದುಚೇರಿಯ ಜನರ ಬಹುದಿನಗಳ ಬೇಡಿಕೆಯಾಗಿದೆ.
  • ಪುದುಚೇರಿಯನ್ನು ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತನೆ
  • ತಿರುನಲ್ಲಾರ್ ದೇವಾಲಯದ ವೈಭವ ಪುನಃಸ್ಥಾಪನೆ
  • ಹೊಸ ದೇವಾಲಯ ಸಂಕೀರ್ಣ ನಿರ್ಮಾಣ
  • ಪೂಜಾ ಸ್ಥಳಗಳಲ್ಲಿನ ಎಲ್ಲಾ ದೇಣಿಗೆಗಳನ್ನು ಸರ್ಕಾರದ ನಿಯಂತ್ರಣದಿಂದ ತೆರವು

ಎಲ್ಲಾ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲಲಿಲ್ಲ. ಆದರೆ, ಶೇ 1.08ರಷ್ಟು ಮತಗಳ ಗಳಿಕೆ ಮಾಡಿಕೊಂಡಿತ್ತು. ಈಗ ಸತಾಯಗತಾಯ ಅಧಿಕಾರಕ್ಕೆ ಬರುವ ಹಂಬಲದಲ್ಲಿ ಹಲವು ಘೋಷಣೆಗಳನ್ನು ನೀಡಿದೆ. ಎಷ್ಟರ ಮಟ್ಟಕ್ಕೆ ಕೈಹಿಡಿಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ ಹೈಡ್ರಾಮ

30 ಸದಸ್ಯ ಬಲ ಹೊಂದಿದ್ದ ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್- ಡಿಎಂಕೆ ಮೈತ್ರಿಕೂಟ ಸರ್ಕಾರ ರಚಿಸಿತ್ತು. ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದ ಐವರು ಶಾಸಕರು ಹಾಗೂ ಮೈತ್ರಿಪಕ್ಷವಾದ ಡಿಎಂಕೆ ಶಾಸಕರು ರಾಜೀನಾಮೆ ನೀಡಿದ ನಂತರ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತವಿಲ್ಲದೆ ಪತನಗೊಂಡಿತ್ತು. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.