ETV Bharat / business

ಪಿಎಂಎ ಯೋಜನೆಯಡಿ 3.61 ಲಕ್ಷ ಮನೆ ನಿರ್ಮಾಣ ಪ್ರಸ್ತಾವನೆಗೆ ಕೇಂದ್ರ ಅನುಮೋದನೆ

ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿʼಯ (ಸಿಎಸ್‌ಎಂಸಿ) 54ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲ್ಗೊಂಡಿದ್ದವು. ಈ ಮನೆಗಳನ್ನು ʻಫಲಾನುಭವಿ ನೇತೃತ್ವದ ನಿರ್ಮಾಣʼ ಮತ್ತು ʻಪಾಲುದಾರಿಕೆಯಲ್ಲಿ ಕೈಗೆಟುಕುವ ದರದ ವಸತಿʼ ವಿಧಾನದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.

houses
houses
author img

By

Published : Jun 9, 2021, 5:21 PM IST

ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆ- ನಗರ (ಪಿಎಂಎವೈ-ಯು) ಅಡಿಯಲ್ಲಿ 3.61 ಲಕ್ಷ ಮನೆಗಳ ನಿರ್ಮಾಣಕ್ಕಾಗಿ 708 ಪ್ರಸ್ತಾಪಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ದೆಹಲಿಯಲ್ಲಿ ನಡೆದ ʻಪಿಎಂಎವೈ-ಯು ಅಡಿಯಲ್ಲಿ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿʼಯ (ಸಿಎಸ್‌ಎಂಸಿ) 54ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲ್ಗೊಂಡಿದ್ದವು. ಈ ಮನೆಗಳನ್ನು ʻಫಲಾನುಭವಿ ನೇತೃತ್ವದ ನಿರ್ಮಾಣʼ ಮತ್ತು ʻಪಾಲುದಾರಿಕೆಯಲ್ಲಿ ಕೈಗೆಟುಕುವ ದರದ ವಸತಿʼ ವಿಧಾನದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಇದಲ್ಲದೆ, 'ಪಿಎಂಎವೈ-ಯು ಪ್ರಶಸ್ತಿಗಳು 2021 - 100 ದಿನಗಳ ಸವಾಲುʼ ಅಭಿಯಾನಕ್ಕೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂಒಎಚ್‌ಯುಎ) ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರು ಚಾಲನೆ ನೀಡಿದರು.

ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು(ಯುಟಿ), ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿಗಳು) ಹಾಗೂ ಫಲಾನುಭವಿಗಳಿಗೆ ಅವುಗಳ ಅತ್ಯುತ್ತಮ ಕಾರ್ಯದಕ್ಷತೆ ಹಾಗೂ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜೊತೆಗೆ ಅವುಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸುವುದೂ ಈ ಪ್ರಶಸ್ತಿಯ ಮತ್ತೊಂದು ಉದ್ದೇಶವಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ನಡೆದ ಮೊದಲ ʻಸಿಎಸ್‌ಎಂಸಿʼ ಸಭೆ ಇದಾಗಿದೆ.

ಓದಿ: ಕೊರೊನಾ ಕಾಲದಲ್ಲಿ ಅನ್ನದಾತರಿಗೆ ಸಿಹಿ ಸುದ್ದಿ: ಎಲ್ಲಾ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

2022ರ ವೇಳೆಗೆ ಭಾರತದ ನಗರ ಪ್ರದೇಶದ ಎಲ್ಲ ಅರ್ಹ ಫಲಾನುಭವಿಗಳಿಗೆ 'ಸರ್ವರಿಗೂ ಸೂರುʼ ಎಂಬ ದೃಷ್ಟಿಕೋನದಡಿ ಶಾಶ್ವತ ಮನೆಗಳನ್ನು ಒದಗಿಸುವ ಉದ್ದೇಶಕ್ಕೆ ಸರಕಾರ ನೀಡಿರುವ ಪ್ರಾಮುಖ್ಯತೆ ಎಷ್ಟೆಂಬುದನ್ನು ಈ ಸಭೆಯು ಸೂಚಿಸುತ್ತದೆ. ಪಿಎಂಎವೈ (ಯು) ಅಡಿಯಲ್ಲಿ ನಿಗದಿತ ಗಡುವಿನಲ್ಲಿ ದೇಶಾದ್ಯಂತ ವಸತಿಗಳ ನಿರ್ಮಾಣ ಮತ್ತು ಪೂರ್ಣಗೊಳಿಸುವಿಕೆಯ ವೇಗ ಹೆಚ್ಚಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (ಎಂಒಎಚ್‌ಯುಎ) ಹೊಸ ಒತ್ತು ನೀಡಿದೆ.

ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಂಜೂರಾತಿಗಾಗಿ ಬೇಡಿಕೆಯು ಬಹುತೇಕ ಸ್ಥಿರ ಸ್ಥಿತಿಗೆ ತಲುಪಿದೆ. ಬಳಕೆಯಾಗದ ಹಣವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ನಿಗದಿತ ಸಮಯದೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಖಾತರಿಪಡಿಸುವುದು ಈಗ ನಮ್ಮ ಪ್ರಮುಖ ಆದ್ಯತೆಯಾಗಿದೆ," ಎಂದು ಸಭೆಯಲ್ಲಿ ಮಿಶ್ರಾ ಹೇಳಿದರು.

ಇಲ್ಲಿಯವರೆಗೆ ಪಿಎಂಎಇ (ಯು) ಅಡಿಯಲ್ಲಿ ಮಂಜೂರಾದ ಒಟ್ಟು 112.4 ಲಕ್ಷ ಮನೆಗಳ ಪೈಕಿ 82.5 ಲಕ್ಷ ಮನೆಗಳ ನಿರ್ಮಾಣಕ್ಕೆ ಕೈ ಹಾಕಲಾಗಿದ್ದು, ಈ ಪೈಕಿ 48.31 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಹಸ್ತಾಂತರಿಸಾಗಿದೆ. ಯೋಜನೆ ಅಡಿಯಲ್ಲಿ ಒಟ್ಟು 7.35 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ಇದರಲ್ಲಿ 1.81 ಲಕ್ಷ ಕೋಟಿ ರೂ. ಕೇಂದ್ರ ನೆರವೂ ಸೇರಿದೆ. ಈ ಪೈಕಿ 96,067 ಕೋಟಿ ರೂ. ನಿಧಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.