ETV Bharat / business

ಡಿ.11ರಿಂದ ಫಿಕ್ಕಿ ಸಮಾವೇಶ: 'ಇನ್​ಸ್ಪಾಯರ್ಡ್​ ಇಂಡಿಯಾ' ಬಗ್ಗೆ ಪ್ರಧಾನಿ ಮೋದಿ, ಸತ್ಯ ನಾಡೆಲ್​ ಭಾಷಣ - ಫಿಕ್ಕಿ ಎಜಿಎಂ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಡಿಸೆಂಬರ್ 11, 12 ಮತ್ತು 14 ರಂದು ವರ್ಚ್ಯುಲ್​ ಸಮಾವೇಶದ 93ನೇ ವಾರ್ಷಿಕ ಮಹಾ ಸಭೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. 'ಇನ್​ಸ್ಪಾಯರ್ಡ್​ ಇಂಡಿಯಾ' ವಿಷಯ ಆಧಾರಿತ ಪರಿಕಲ್ಪನೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫಿಕ್ಕಿ ತಿಳಿಸಿದೆ.

PM Modi
ಪ್ರಧಾನಿ ಮೋದಿ
author img

By

Published : Dec 2, 2020, 6:59 PM IST

ನವದೆಹಲಿ: ಡಿಸೆಂಬರ್ 12 ರಂದು ನಡೆಯಲಿರುವ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಸ್​ನ (ಫಿಕ್ಕಿ) 93ನೇ ವಾರ್ಷಿಕ ಮಹಾಸಭೆಯಲ್ಲಿ 'ಇನ್​ಸ್ಪಾಯರ್ಡ್​ಇಂಡಿಯಾ' ರಚಿಸುವಲ್ಲಿ ಉದ್ಯಮದ ಪಾತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲ್ಲಿದ್ದಾರೆ.

ಡಿಸೆಂಬರ್ 11, 12 ಮತ್ತು 14 ರಂದು ವರ್ಚ್ಯುಯಲ್​ ಸಮಾವೇಶದ ವಾರ್ಷಿಕ ಸಭೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. 'ಇನ್​ಸ್ಪಾಯರ್ಡ್​ ಇಂಡಿಯಾ' ವಿಷಯ ಆಧಾರಿತ ಪರಿಕಲ್ಪನೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫಿಕ್ಕಿ ತಿಳಿಸಿದೆ.

ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್ ಗಡ್ಕರಿ, ವಾಣಿಜ್ಯ ಮತ್ತು ಕೈಗಾರಿಕಾ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಸಂವಹನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಮೈಕ್ರೋಸಾಫ್ಟ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ, ಆಲ್ಫಾಬೆಟ್ ಮಾಜಿ ಅಧ್ಯಕ್ಷ ಎರಿಕ್ ಸ್ಮಿತ್, ಭಾರತೀಯ ಉದ್ಯಮದ ಮುಖಂಡರಾದ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್, ಕ್ಯಾಡಿಲಾ ಹೆಲ್ತ್‌ಕೇರ್ ಚೇರ್ಮನ್ ಪಂಕಜ್ ಪಟೇಲ್, ಒವೈಒ ಹೋಟೆಲ್​​ ಹೋಮ್ಸ್ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಿತೇಶ್ ಅಗರ್ವಾಲ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.