ಮುಂಬೈ: ಪೌರಾಣಿಕ ಕ್ಲಾಸಿಕಲ್ ಸೀರಿಯಲ್ 'ರಾಮಾಯಣ' ಮತ್ತು 'ಮಹಾಭಾರತ' ಮರು ಪ್ರಸಾರದಿಂದಾಗಿ ಕಳೆದ ವರ್ಷ ದೂರದರ್ಶನ ಬಳಕೆಗೆ ಅತಿದೊಡ್ಡ ಉತ್ತೇಜನ ಸಿಕ್ಕಿದೆ.
ಕಳೆದ ವರ್ಷ ಮಾರ್ಚ್ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ‘ಜನತಾ ಕರ್ಫ್ಯೂ’ ಮತ್ತು ವರ್ಷಪೂರ್ತಿ ಅವರ ಭಾಷಣಗಳು ವೀಕ್ಷಕರ ಸಂಖ್ಯೆ ಹೆಚ್ಚಾಗಲು ನೆರವಾಗಿದೆ ಎಂದು ಬಾರ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.
2020ರಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯರ ದೂರದರ್ಶನ ಬಳಕೆ ಶೇ 9ರಿಂದ 999 ಶತಕೋಟಿಯ ವೀಕ್ಷಣಾ ನಿಮಿಷಗಳಿಗೆ ಏರಿದೆ ಎಂದು ರೇಟಿಂಗ್ ಸಂಸ್ಥೆ ಬಾರ್ಕ್ ಹೇಳಿದೆ.
2019ರಲ್ಲಿ 3 ಗಂಟೆ 42 ನಿಮಿಷಗಳಿಂದ 2020ರಲ್ಲಿ ಪ್ರತಿ ವೀಕ್ಷಕರು ಕಳೆಯುವ ಸರಾಸರಿ ಸಮಯ 4 ಗಂಟೆ 2 ನಿಮಿಷಗಳಿಗೆ ಏರಿದೆ ಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ತಿಳಿಸಿದೆ. ಲಾಕ್ಡೌನ್ ವಿಧಿಸಿದ್ದರಿಂದ ಜನರು ಒತ್ತಾಯ ಪೂರ್ವಕವಾಗಿ ಮನೆಯಲ್ಲಿ ಉಳಿಯಬೇಕಾಯಿತು. ಇದರಿಂದ ವೀಕ್ಷಕರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣ ಜಿಗಿತ ಕಂಡು ಬಂದಿದೆ.
ಟಿವಿ ವೀಕ್ಷಣೆಯ ಅತಿದೊಡ್ಡ ವಿಭಾಗವಾದ ಮನರಂಜನಾ ಚಾನೆಲ್ (ಜಿಇಸಿ) ನಿಮಿಷಗಳ ವೀಕ್ಷಣೆಯ ಮೂಲಕ ಶೇ ಒಂಬತ್ತರಷ್ಟು ಗಳಿಕೆ ಕಂಡಿದೆ. ಚಲನಚಿತ್ರ ವೀಕ್ಷಣೆಯು ಶೇ 10ರಷ್ಟು ಹೆಚ್ಚಾಗಿದೆ. ಮಕ್ಕಳ ವೀಕ್ಷಣೆ ಶೇ 27ರಷ್ಟು ಹೆಚ್ಚಳವಾಗಿ ಸಂಗೀತ - ಶೇ 11ರಷ್ಟು ಹಾಗೂ ಕ್ರೀಡೆ - ಶೇ 35ರಷ್ಟು ಕುಸಿತ ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: 'ಭಾರತ-ಅಮೆರಿಕ ನಡುವಿನ ವ್ಯಾಪಾರ ಸವಾಲುಗಳನ್ನು ಮೇಕ್ ಇನ್ ಇಂಡಿಯಾ' ಹೊರಗೆಡವಿದೆ- US ಟ್ರೇಡ್ ಒಕ್ಕೂಟ
ಮಾಜಿ ಮುಖ್ಯ ಕಾರ್ಯನಿರ್ವಾಹಕ ಪಾರ್ಥೋ ದಾಸ್‌ಗುಪ್ತಾ ಅವರ ಬಂಧನದೊಂದಿಗೆ ಬಾರ್ಕ್‌ನ ಸ್ವಂತ ದಾಖಲೆಯು ಸಾಕಷ್ಟು ಪರಿಶೀಲನೆಗೆ ಒಳಪಟ್ಟಿದೆ, ಇದು ರೇಟಿಂಗ್ ಪ್ರಕಾಶನವನ್ನು ನಿಲ್ಲಿಸಲು ಕಾರಣವಾಯಿತು, ಇದು ಶೇಕಡಾ 27 ರಷ್ಟು ಹೆಚ್ಚಳವಾಗಿದೆ ಎಂದು ಅದು ಹೇಳಿದೆ.
ರಾಮಾಯಣ ಸೀರಿಯಲ್ ವಿಶ್ವದಲ್ಲೇ ಅತಿಹೆಚ್ಚು ವೀಕ್ಷಣೆ ಕಂಡ ಕಾರ್ಯಕ್ರಮ
ಮಾರ್ಚ್‌ನಲ್ಲಿ ಟಿವಿ ವೀಕ್ಷಣೆಯ ಉತ್ತುಂಗಕ್ಕೇರಿದೆ. ಹಳೆಯ ಪೌರಾಣಿಕ ಕ್ಲಾಸಿಕ್‌ಗಳಾದ ರಾಮಾಯಣ ಮತ್ತು ಮಹಾಭಾರತದ ಮರು ಪ್ರಸಾರವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ರಾಮಾಯಣವು ಈಗ ವಿಶ್ವದಲ್ಲೇ ಹೆಚ್ಚು ವೀಕ್ಷಿಸಿದ ಟಿವಿ ಕಾರ್ಯಕ್ರಮದ ದಾಖಲೆ ಹೊಂದಿದೆ ಎಂದು ಬಾರ್ಕ್ ಸಿಇಒ ಸುನಿಲ್ ಲುಲ್ಲಾ ಹೇಳಿದ್ದಾರೆ.
ಕ್ಲಾಸಿಕ್ ಧಾರಾವಾಹಿಗಳ ಪ್ರಸಾರವು ದೂರದರ್ಶನಕ್ಕೆ ಸಾಕಷ್ಟು ಜಾಹೀರಾತುದಾರರನ್ನು ಸೆಳೆಯಿತು. 2019ರ ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಪ್ರಸಾರಕರ ಜಾಹೀರಾತು ಎಪಿಸೋಡ್ ಶೇ 62ರಷ್ಟು ಏರಿಕೆಯಾಗಿದೆ ಎಂದು ಡೇಟಾ ತಿಳಿಸಿದೆ.
ಜನತಾ ಕರ್ಫ್ಯೂ' ಸಹ ಟಿವಿ ವೀಕ್ಷಕರ ಉತ್ತೇಜನಕ್ಕೆ ಕಾರಣವಾಯಿತು. ಜನವರಿಯಿಂದ ಮಾರ್ಚ್ ಆರಂಭಕ್ಕೆ ಹೋಲಿಸಿದರೆ, ಮಾರ್ಚ್ ಮಧ್ಯದಿಂದ ಜೂನ್ ನಡುವೆ ಶೇ 23ರಷ್ಟು ಏರಿಕೆ ಕಂಡು ಬಂದಿದೆ.
ಪಿಎಂ ಮೋದಿ ಮತ್ತು ಅವರ ಸಂದೇಶ
ಲಾಕ್ಡೌನ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು ಮತ್ತು ಆ ವೇಳೆಯ ಸ್ವಾತಂತ್ರ್ಯ ದಿನದ ಭಾಷಣವು ದೊಡ್ಡ ಮಟ್ಟದ ಸೆಳೆತ ಕಂಡಿತ್ತು. 9 ನಿಮಿಷ ದೀಪ ಹಾರಿಸುವಂತೆ ಪ್ರಧಾನಿ ಮನವಿಗೆ ಪ್ರತಿಕ್ರಿಯೆಯಾಗಿ ಟಿವಿ ವೀಕ್ಷಕರಲ್ಲಿ 60 ಪ್ರತಿ ಶತದಷ್ಟು ಕುಸಿತ ಕಂಡು ಬಂದಿತ್ತು.