ಬೆಂಗಳೂರು: ಭಾರತದ ಕೃಷಿಯಲ್ಲಿ ಬದಲಾವಣೆ ತರಲು ಅಗ್ರಿಟೆಕ್ ಸ್ಟಾರ್ಟ್ಅಪ್ಗಳಿಗಾಗಿ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಮೈಕ್ರೋಸಾಫ್ಟ್ ಪ್ರಕಟಿಸಿದೆ.
ನಿರ್ದಿಷ್ಟವಾದ ಪರಿಹಾರ ನಿರ್ಮಿಸಲು ಆಳವಾದ ತಂತ್ರಜ್ಞಾನ, ವ್ಯವಹಾರ ಮತ್ತು ಮಾರುಕಟ್ಟೆ, ಬೆಳೆಯಲ್ಲಿ ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಅಗ್ರಿಟೆಕ್ ಸ್ಟಾರ್ಟ್ಅಪ್ಗಳು ಉತ್ಪಾದನೆಯನ್ನು ಹೆಚ್ಚಿಸಲು, ಮಾರುಕಟ್ಟೆಗೆ ಸಂಪರ್ಕ ಸುಧಾರಿಸಲು, ಪೂರೈಕೆ ಹೆಚ್ಚಿಸಲು ಮತ್ತು ಕೃಷಿ ವ್ಯವಹಾರಗಳಿಗೆ ಡಿಜಿಟಲ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕೃಷಿ ಪರಿವರ್ತನೆಯಲ್ಲಿ ಸಹಾಯ ಮಾಡಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.