ನವದೆಹಲಿ: ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಸದ್ಯ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ.
ಇಂಡೋ-ಜಪಾನೀಸ್ ಕಾರು ಉತ್ಪಾದನಾ ಸಂಸ್ಥೆ ಭಾರತದಲ್ಲಿ 37 ವರ್ಷದಲ್ಲಿ ಬರೋಬ್ಬರಿ 20 ಮಿಲಿಯನ್(2 ಕೋಟಿ) ಕಾರುಗಳ ಮಾರಾಟ ನಡೆಸಿದೆ. ಭಾರತದಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದ ಮೊದಲ ಕಾರು ಉತ್ಪಾದನಾ ಸಂಸ್ಥೆ ಎನ್ನುವುದು ಮಾರುತಿ ಸುಜುಕಿಯ ಹೆಗ್ಗಳಿಕೆ.
ಸ್ಥಾಪನೆಯಾದ 29 ವರ್ಷದಲ್ಲಿ 10 ಮಿಲಿಯನ್(1 ಕೋಟಿ) ಕಾರು ಮಾರಾಟವಾಗಿತ್ತು. ನಂತರದ 8 ವರ್ಷದಲ್ಲಿ ಇದು 20 ಮಿಲಿಯನ್ಗೆ(2 ಕೋಟಿ) ಏರಿಕೆ ಕಂಡಿದೆ.
1983ರ ಡಿ.14ರಂದು ಮಾರುತಿ 800 ಕಾರಿನ ಮೂಲಕ ಉತ್ಪಾದನೆ ಆರಂಭಿಸಿದ ಮಾರುತಿ ಸುಜುಕಿ, ಎರಡು ವರ್ಷದ ಅವಧಿಯಲ್ಲಿ ಹತ್ತು ಲಕ್ಷ ಕಾರು ಮಾರಾಟ ಕಂಡಿತ್ತು. 10 ವರ್ಷದಲ್ಲಿ 50 ಲಕ್ಷ ಮಾರುತಿ ಸುಜುಕಿ ಕಾರು ಸೇಲಾಗಿತ್ತು.