ಬೆಳಗಾವಿ: ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಮತ್ತೆ ಆರಂಭವಾಗಿದ್ದು, ನಿನ್ನೆ ಒಂದೇ ದಿನಕ್ಕೆ ಇಲಾಖೆಗೆ 1.67 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ತಿಳಿಸಿದರು.
ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಿನ್ನೆಯಿಂದ ಬಸ್ ಸೇವೆ ಆರಂಭಿಸಲಾಗಿದೆ. ನಗರ ಸಾರಿಗೆ ಸೇರಿದಂತೆ ಜಿಲ್ಲೆಯಾದ್ಯಂತ ನಿನ್ನೆ 120 ಬಸ್ ಓಡಾಡಿದ್ದವು. ಪ್ರಯಾಣಿಕರಿಲ್ಲದೆ ಬಹುತೇಕ ಬಸ್ಗಳು ಖಾಲಿಯಾಗಿ ಸಂಚಾರ ನಡೆಸಿದ್ದವು.
ಈ ಮೂಲಕ ಒಂದೇ ದಿನಕ್ಕೆ 1.67 ಲಕ್ಷಗಳಷ್ಟು ಆದಾಯ ಇಲಾಖೆಗೆ ಬಂದಿದೆ. 200 ಕ್ಕೂ ಅಧಿಕ ಸಿಬ್ಬಂದಿ ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಸಿಬ್ಬಂದಿಗೆ ಸಂಬಳ ನೀಡುವಷ್ಟೂ ಮೊದಲ ದಿನ ಆದಾಯ ಬಂದಿಲ್ಲ. ಈ ಮೊದಲು ಬೆಳಗಾವಿ ವಿಭಾಗದಲ್ಲಿ ನಿತ್ಯ 77 ಲಕ್ಷ ರೂ. ಆದಾಯ ಬರುತ್ತಿತ್ತು. ಕೊರೊನಾದಿಂದಿ ಹೆಚ್ಚಿನ ಆದಾಯ ಬಂದಿಲ್ಲ ಎಂದು ಅವರು ತಿಳಿಸಿದರು.