ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಗಡಿ ಭಾಗದಲ್ಲಿ ಫೈಟರ್ ವಿಮಾನಗಳನ್ನು ಜಮಾವಣೆ ಮಾಡುತ್ತಿರುವ ಪಾಕ್, ಭಾರತದೊಂದಿಗೆ ಯುದ್ಧ ಸನ್ನದ್ಧವಾಗುತ್ತಿದ್ದೆಯಾ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಪ್ರವಾಸೋದ್ಯಮ ಸಚಿವರು, 'ಲಡಾಖ್ ಅನ್ನು ಪ್ರವಾಸಿಗರ ಸ್ವರ್ಗ ಮಾಡುತ್ತೇವೆ' ಎಂದು ಹೇಳಿದ್ದಾರೆ.
'ಈ ಟಿವಿ ಭಾರತ್'ನೊಂದಿಗೆ ವಿಶೇಷ ಸಂದರ್ಶ ನೀಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, 'ಶಾಂತಿಯ ಆಶ್ರಯ ತಾಣವಾಗಿರುವ ಲಡಾಖ್ ಅನ್ನು ಜಾಗತಿಕ ಪ್ರವಾಸಿ ತಾಣವಾಗಿಸುವ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದನ್ನು ಸಾಬೀತು ಪಡಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರವಾಸೋದ್ಯಮದ ಅವಕಾಶಗಳ ಕುರಿತು ಪ್ರಧಾನಿ ಹೇಳಿದ್ದು ಸತ್ಯವಾಗಿದೆ. ಈ ಪ್ರದೇಶ ಜಾಗತಿಕ ಪ್ರವಾಸೋದ್ಯಮದ ತಾಣವಾಗಲಿದೆ' ಎಂದರು.
ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ ಮೊದಲ ವಾರದಲ್ಲಿ ಲೆಯಾ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಲಡಾಖ್ ಕೇಂದ್ರಾಡಳಿ ಪ್ರದೇಶವಾಗಲು ಸಜ್ಜಾಗಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರನ್ನು ನಿಭಾಯಿಸುವುದು ಸಚಿವಾಲಯದ ಮುಂದಿರುವ ಏಕೈಕ ಸವಾಲು ಎಂದು ಪಟೇಲ್ ಹೇಳಿದರು.
ಲಡಾಖ್ ಶಾಂತಿಯುತ ತಾಣವಾಗಿದ್ದು, ಸ್ವಚ್ಛತೆಗೆ ಒಂದು ಮಾದರಿ ಪ್ರದೇಶವಾಗಿ ಸಾಂಸ್ಕೃತಿಕ ಪರಂಪರೆ ಹೊಂದಲಿದೆ. ಲಡಾಖ್ಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಲಿದ್ದಾರೆ ಎಂದು ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.