ಬೆಂಗಳೂರು: ಪ್ರಾದೇಶಿಕ ವಿಮಾನಯಾನ ಸಂಪರ್ಕ ಒದಗಿಸಲು ಮುಂಬೈ ಕರ್ನಾಟಕದ ಭಾಗದ ಹಿಂದುಳಿದ ಪ್ರದೇಶ ವಿಜಯಪುರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಯುಯಾನ ಸಂಪರ್ಕ ಮತ್ತು ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಿಸಲು ವಾಯುವ್ಯ ಕರ್ನಾಟಕದ ವಿಜಯಪುರ ಹೊರವಲಯದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಕ್ಯಾಬಿನೆಟ್ ಅನುಮೋದನೆ ನೀಡಿದ ಒಂದು ದಿನದ ನಂತರ ಅಧಿಕಾರಿ ಹೇಳಿದರು.
ವಿಜಯಪುರವು ರಾಜ್ಯಧಾನಿ ಬೆಂಗಳೂರಿನಿಂದ 540 ಕಿ.ಮೀ ದೂರದಲ್ಲಿದೆ. ಇದು 1956ರಲ್ಲಿ ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ಮರು ಸಂಘಟಿಸುವ ಮೊದಲು ಬಾಂಬೆ ಪ್ರಾಂತ್ಯದ ಭಾಗವಾಗಿತ್ತು.
ರಾಜ್ಯದ ಲೋಕೋಪಯೋಗಿ ಇಲಾಖೆಯಿಂದ (ಪಿಡಬ್ಲ್ಯುಡಿ) ಬುರನ್‌ಪುರ ಮತ್ತು ಮಧುಭವಿ ಗ್ರಾಮಗಳ ನಡುವೆ 727 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ತಲೆ ಎತ್ತಲಿದೆ. ರಾಜ್ಯ ಸರ್ಕಾರವು 2010ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ವಿಳಂಬದಿಂದಾಗಿ ಯೋಜನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಚೆನ್ನೈ ಮೂಲದ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯಾದ ಮಾರ್ಗ ಲಿಮಿಟೆಡ್ ವಿಳಂಬದಿಂದ ಒಪ್ಪಂದ ರದ್ದುಗೊಳಿಸಲಾಯಿತು ಎಂದು ಅಧಿಕಾರಿ ಹೇಳಿದರು.
ಮುಂದಿನ 18-24 ತಿಂಗಳಲ್ಲಿ ವಿಮಾನ ನಿಲ್ದಾಣ ಆಗಲಿದೆ. ವಿಜಯಪುರ ವಿಮಾನ ನಿಲ್ದಾಣವು ಕೇಂದ್ರದ ಪ್ರಾದೇಶಿಕ ಉಡಾನ್ ಸಂಪರ್ಕ ಯೋಜನೆಯಡಿ ಕಾರ್ಯನಿರ್ವಹಿಸುವ ರಾಜ್ಯದ 9ನೇ ನಿಲ್ದಾಣವಾಗಲಿದೆ.
ವಿಜಯಪುರಕ್ಕೆ ರಸ್ತೆ ಮತ್ತು ರೈಲು ಸಂಪರ್ಕ ಹೊಂದಿದ್ದರೂ ಬೆಂಗಳೂರು ಮತ್ತು ಮಂಗಳೂರಿನಂತಹ ನಗರಗಳಿಗೆ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಅಲ್ಲಿಂದ ಪ್ರಯಾಣಿಕರು ಸಾಗರೋತ್ತರ ಪ್ರದೇಶಗಳಿಗೆ ವಿಮಾನಗಳ ಮೂಲಕ ತೆರಳಬಹುದಾಗಿದೆ.