ಹೈದರಾಬಾದ್: ಜುಲೈ 1ರಂದು ಭಾರತೀಯ ರೈಲ್ವೆಯು ಖಾಸಗೀಕರಣದತ್ತ ಹೆಜ್ಜೆ ಇಟ್ಟಿದ್ದು, ದೇಶಾದ್ಯಂತ 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗಳ ಪ್ರಸ್ತಾಪಗಳನ್ನು ಆಹ್ವಾನಿಸಿದೆ. ಈ ವಲಯದಲ್ಲಿ 30,000 ಕೋಟಿ ರೂ. ಹೂಡಿಕೆ ಆಗಲಿದೆ.
ಆಧುನಿಕ ತಂತ್ರಜ್ಞಾನದ ರೋಲಿಂಗ್ ಸ್ಟಾಕ್ ಕಡಿಮೆ ನಿರ್ವಹಣೆಯೊಂದಿಗೆ ಪರಿಚಯಿಸುವುದು. ಸಾರಿಗೆ ಸಮಯ ತಗ್ಗಿಸುವುದು. ಉದ್ಯೋಗ ಸೃಷ್ಟಿ ಹೆಚ್ಚಿಸುವುದು. ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವುದು. ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುವುದು ಮತ್ತು ಪ್ರಯಾಣಿಕರಲ್ಲಿ ಬೇಡಿಕೆ ಪೂರೈಕೆ ಕೊರತೆ ಕಡಿಮೆ ಮಾಡುವುದು ಈ ಉಪಕ್ರಮದ ಉದ್ದೇಶ ಎಂದು ರೈಲ್ವೆ ಸಚಿವಾಲಯ ಸ್ಪಷ್ಟನೆ ನೀಡಿದೆ.
ಜಾಗತಿಕವಾಗಿ ರೈಲ್ವೆ ಖಾಸಗೀಕರಣದ ಉದಾಹರಣೆಗಳು ಇದೊಂದು ಸಂಕೀರ್ಣ ಪ್ರಕ್ರಿಯೆ ಎಂಬುದನ್ನು ಸಾಬೀತುಪಡಿಸಿವೆ. ಬ್ರಿಟನ್‌ನ ಎಲ್ಲಾ ರೈಲುಗಳ ಒಡೆತನ ಮತ್ತು ಕಾರ್ಯನಿರ್ವಹಣೆ 1993ರಲ್ಲಿ ಖಾಸಗೀಕರಣಕ್ಕೆ ಒಳಗಾಯಿತು. ಮೂಲ ಸೌಕರ್ಯವನ್ನು ‘ರೈಲ್ ಟ್ರಾಕ್’ ಎಂದು ಪರಿಚಯಿಸಲಾಯಿತು. ಹಲವು ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗಳಿಗೆ ಡಜನ್ಗಟ್ಟಲೇ ಫ್ರಾಂಚೈಸಿಗಳನ್ನು ನೀಡಲಾಯಿತು. ಮೂಲ ಸೌಕರ್ಯ ಮತ್ತು ಕಾರ್ಯಾಚರಣೆಗಳ ಪ್ರತ್ಯೇಕತೆ ಶೋಚನೀಯವಾಗಿ ವಿಫಲವಾದವು. ರೈಲ್ವೆ ಟ್ರ್ಯಾಕ್ ರಾಷ್ಟ್ರೀಕರಣಗೊಳಿಸಲಾಗಿದೆ. ಆದರೆ ಖಾಸಗಿ ಸಂಸ್ಥೆಗಳು ಇನ್ನೂ ಬಹುಪಾಲು ಮಾರ್ಗಗಳಲ್ಲಿ ತಮ್ಮ ಕಾರ್ಯಾಚರಣೆ ಮುಂದುವರೆಸಿವೆ.
ಭಾರತವು ಒಟ್ಟಾರೆಯಾಗಿ ವಿಭಿನ್ನ ಭೌಗೋಳಿಕ ಪ್ರದೇಶ ಹೊಂದಿದೆ. ಇದು ಬ್ರಿಟನ್‌ನಂತಹ ಒಟ್ಟು ಖಾಸಗೀಕರಣವನ್ನು ಆರಿಸಿಕೊಳ್ಳುತ್ತಿಲ್ಲ ಎಂಬುದನ್ನು ವಾದಿಸಬಹುದು. 'ಪ್ರಯಾಣಿಕರ ರೈಲು ಕಾರ್ಯಾಚರಣೆಯಲ್ಲಿ ಖಾಸಗಿಯವರ ಭಾಗವಹಿಸುವಿಕೆಯು ರೈಲ್ವೆಯ ಒಟ್ಟು ಕಾರ್ಯಾಚರಣೆ ಪೈಕಿ ಶೇ. 5ರಷ್ಟು ಮಾತ್ರ' ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಆನ್‌ಲೈನ್ ಮಾಧ್ಯಮ ಸಂವಾದದಲ್ಲಿ ಹೇಳಿದ್ದರು.
ರೈಲ್ವೆಯ ಸಾಮಾನ್ಯ ಮೂಲ ಸೌಕರ್ಯ (ಟ್ರ್ಯಾಕ್ ಮತ್ತು ಸಿಗ್ನಲಿಂಗ್ ವ್ಯವಸ್ಥೆ ಇತ್ಯಾದಿ) ಬಳಸಿಕೊಂಡು ಖಾಸಗಿ ರೈಲು ಮತ್ತು ಭಾರತೀಯ ರೈಲುಗಳಿಗೆ ಸಂಚಾರ ಸೇವೆ ನೀಡಲು ಅವಕಾಶವಿರುತ್ತದೆ. ಅಸ್ತಿತ್ವದಲ್ಲಿರುವ ರೈಲು ಜಾಲವು ಈಗಾಗಲೇ ಉಸಿರುಗಟ್ಟಿದೆ. 12 ಕ್ಲಸ್ಟರ್‌ಗಳಲ್ಲಿ ಖಾಸಗಿ ರೈಲುಗಳು 2023ರಿಂದ ಪ್ರಾರಂಭವಾಗುತ್ತವೆ. ಮೊದಲನೆಯದಾಗಿ; ಬೆಂಗಳೂರು, ಚಂಡೀಘಡ, ಜೈಪುರ, ದೆಹಲಿ, ಮುಂಬೈ, ಪಾಟ್ನಾ, ಪ್ರಯಾಗರಾಜ್, ಸಿಕಂದರಾಬಾದ್, ಹೌರಾ, ಚೆನ್ನೈ ಇವೆ.
ಯೋಜನೆಯನ್ನು ಯಶಸ್ವಿಗೊಳಿಸಲು ಖಾಸಗಿ ರೈಲುಗಳಿಗೆ ಸ್ವತಂತ್ರ ನಿಯಂತ್ರಕ ಸ್ಥಾಪಿಸಬೇಕು ಎಂಬ ಕೂಗು ಹೆಚ್ಚುತ್ತಿದೆ. ಭಾರತೀಯ ರೈಲ್ವೆ ಈ ರೈಲುಗಳನ್ನು ಓಡಿಸುವ ಖಾಸಗಿ ಸಂಸ್ಥೆಗಳಿಗೆ ನೇರ ಪ್ರತಿಸ್ಪರ್ಧಿಯಾಗಿರುತ್ತದೆ. ಈ ಸಂಘರ್ಷದಿಂದಾಗಿ ಏನಾದರೂ ಉದ್ಭವಿಸಿದರೆ ವಿವಾದಗಳನ್ನು ಬಗೆಹರಿಸುವುದು ನ್ಯಾಯವಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪ್ರಯಾಣಿಕರ ಸುರಕ್ಷತೆ ಎದುರಾಗುತ್ತದೆ.
ಮತ್ತೊಂದು ವಿವಾದಾತ್ಮಕ ವಿಷಯವೆಂದರೆ ಸುಂಕ. ಆಶ್ಚರ್ಯಕರ ಸಂಗತಿಯೆಂದರೆ ಭಾರತೀಯ ರೈಲ್ವೆ ಇದುವರೆಗೂ ಅತ್ಯಂತ ಮೂಲಭೂತ ಪ್ರಶ್ನೆಗೆ ಉತ್ತರ ನೀಡಿಲ್ಲ. ಈ ಖಾಸಗಿ ರೈಲುಗಳಿಗೆ ಪ್ರಯಾಣಿಕರ ದರವನ್ನು ನಿಗದಿಪಡಿಸುವ ಕಾರ್ಯವಿಧಾನ ಯಾವುದು? ತಮಗೆ ಬೇಕಾದ ದರ ವಿಧಿಸುವಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತದೆಯೇ ಅಥವಾ ಈ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವಾಗುತ್ತದೆಯೇ?
ಖಾಸಗಿ ರೈಲುಗಳಲ್ಲಿನ ದರಗಳು ಸ್ಪರ್ಧಾತ್ಮಕವಾಗಿರುತ್ತವೆ ಮತ್ತು ವಿಮಾನಯಾನಗಳಂತಹ ಇತರ ಸಾರಿಗೆ ವಿಧಾನಗಳ ದರಗಳನ್ನು ನಿಗದಿಪಡಿಸುವಾಗ ಬಸ್ಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ವಿನೋದ್ ಕುಮಾರ್ ಯಾದವ್ ಗುರುವಾರ ಹೇಳಿದ್ದರು.