ನವದೆಹಲಿ: ಭಾರತೀಯರು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ 188 ಬಿಲಿಯನ್ ನಿಮಿಷಗಳನ್ನು ಕಳೆದಿದ್ದಾರೆ ಎಂದು ಬೆಂಗಳೂರು ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್‌ಸೀರ್ ತಿಳಿಸಿದೆ.
ಅತಿ ಹೆಚ್ಚು ವೀಕ್ಷಣೆಯು ದೈನಂದಿನ ಸೀರಿಯಲ್ 69 ಬಿಲಿಯನ್ ನಿಮಿಷ, ಆ ನಂತರ 31 ಬಿಲಿಯನ್ ನಿಮಿಷಗಳಷ್ಟು ಕಾಲ ಚಲನಚಿತ್ರಗಳನ್ನು ವೀಕ್ಷಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿನ ಉಚಿತ ಟೆಲಿಕಾಂ ಆಫರ್, ಸ್ಮಾರ್ಟ್ಫೋನ್ ಬಳಕೆದಾರರ ಮೂಲಕ ಒಟಿಟಿ ಚಂದಾದಾರಿಕೆಗಳ ಸಂಖ್ಯೆ ಹೆಚ್ಚಲು ನೆರವಾಗಿದೆ ಎಂಬುದನ್ನು ವರದಿ ಹೇಳಿದೆ.
-
2. Users spent 188 billion minutes on OTT platforms on February
— RedSeer (@RedSeer) March 30, 2021 " class="align-text-top noRightClick twitterSection" data="
3. Daily soaps, new releases across TV and movies drive up consumptions [end]#redseer #solvenew #redseerinmedia
">2. Users spent 188 billion minutes on OTT platforms on February
— RedSeer (@RedSeer) March 30, 2021
3. Daily soaps, new releases across TV and movies drive up consumptions [end]#redseer #solvenew #redseerinmedia2. Users spent 188 billion minutes on OTT platforms on February
— RedSeer (@RedSeer) March 30, 2021
3. Daily soaps, new releases across TV and movies drive up consumptions [end]#redseer #solvenew #redseerinmedia
ವೂಟ್ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ದೈನಂದಿನ ಸೀರಿಯಲ್ನಲ್ಲಿ ಪ್ರಾಬಲ್ಯ ಸಾಧಿಸಿದೆ. ಇತರರು ಒಟ್ಟಾಗಿ ಶೇ 31ರಷ್ಟು ಪಾಲು ಪಡೆದುಕೊಂಡಿದ್ದಾರೆ. ಹಾಟ್ಸ್ಸ್ಟಾರ್ ಚಲನಚಿತ್ರಗಳ ವಿಭಾಗದ ವೀಕ್ಷಣೆಯಲ್ಲಿ ಶೇ 33ರಷ್ಟು ಪಾಲು ಹೊಂದಿದೆ ಎಂದು ರೆಡ್‌ಸೀರ್ ತಿಳಿಸಿದೆ.
ಬಳಕೆದಾರರು ತಮ್ಮ ಮನೆಗಳಿಂದ ಹೊರಬರಲು ಇಚ್ಛಿಸುತ್ತಿಲ್ಲ. ಮುಖ್ಯವಾಹಿನಿಯ ಸಿನಿಮಾಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಪ್ರೊಡಕ್ಷನ್ ಹೌಸ್‌ಗಳು ಹೊಸ ಕಟೆಂಟ್ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲು ಪ್ರಾರಂಭಿಸಿದವು. ಹೆಚ್ಚು - ಹೆಚ್ಚು ನೈಜತೆಗೆ ಹತ್ತಿರವಿರುವ ಕಂಟೆಂಟ್ಗಳ ಬೇಡಿಕೆ ಹೆಚ್ಚಾದಂತೆ ಪ್ರೊಡಕ್ಷನ್ ಸಹ ಏರಿಕೆಯಾಯಿತು ಎಂದು ರೆಡ್‌ಸೀರ್‌ನ ನಿಖಿಲ್ ದಲಾಲ್ ಮತ್ತು ಉಜ್ವಾಲ್ ಚಧುರಿ ಹೇಳಿದರು.
ಇದನ್ನೂ ಓದಿ: ಕರ್ನಾಟಕ ಬ್ಯಾಂಕ್ ಜತೆ ಮಾರುತಿ ಸುಜುಕಿ ಒಪ್ಪಂದ: ಕಾರುಗಳಿಗೆ ಶೇ 85ರಷ್ಟು ಸುಲಭ ಸಾಲ
ಪೋಸ್ಟ್ - ಪೇಯ್ಡ್ ಬಳಕೆದಾರರಲ್ಲಿ ಅನೇಕರು ತಮ್ಮ ಟೆಲಿಕಾಂ ಆಪರೇಟರ್ ಒದಗಿಸಿದ ಬಹು ಆಯ್ಕೆಗಳನ್ನು ಆರಿಸಿಕೊಂಡರು. ಅದು ಅವರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಜಿಯೋಫೈಬರ್ನಂತಹ ಬ್ರಾಡ್ಬ್ಯಾಂಡ್ ಆಪರೇಟರ್ಗಳು ಸಹ ಉಚಿತ ಪ್ರೈಮ್ ಮತ್ತು ನೆಟ್ಫ್ಲಿಕ್ಸ್ ಚಂದಾದಾರಿಕೆಗೆ ಬಂಡಲ್ ಆಯ್ಕೆಗಳನ್ನು ಒದಗಿಸುತ್ತಿದೆ. ವಿವಿಧ ರಿಯಾಯಿತಿ ಮತ್ತು ಆಫರ್ಗಳೊಂದಿಗೆ ಬಳಕೆದಾರರು ವಾರ್ಷಿಕ ಚಂದಾದಾರಿಕೆ ಪ್ಯಾಕ್ಗಳನ್ನು ಆರಿಸಿಕೊಳ್ಳುತ್ತಾರೆ ಎಂದು ವಿಶ್ಲೇಷಕರು ವರದಿಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 2021ರಲ್ಲಿ (ಏಪ್ರಿಲ್ 2020ಕ್ಕೆ ಹೋಲಿಸಿದರೆ) ಪಾವತಿಸಿದ ಬಳಕೆದಾರರ ಬೆಳವಣಿಗೆಯ ದರ ಶೇ 35ರಷ್ಟು ದಾಖಲಿಸಿದೆ. ಅದೇ ಅವಧಿಯಲ್ಲಿ ಚಂದಾದಾರಿಕೆಗಳು ಶೇ 8ರಷ್ಟು ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಚಂದಾದಾರಿಕೆ ಆದಾಯವು ಶೇ 42ರಷ್ಟು ಹೆಚ್ಚಾಗಿದೆ.
ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಶೇ 6ರಷ್ಟು ವಾಚ್-ಟೈಮ್ ಕುಸಿತ ಕಂಡುಬಂದಿದೆ. ಬಳಕೆದಾರರು ಸಾಮಾನ್ಯ ಸ್ಥಿತಿಗೆ ಮರಳಲು ಪ್ರಾರಂಭಿಸಿದಾಗ ಕುಸಿಯಿತು. ನೆಚ್ಚಿನ ಟಿವಿ ಸೀರಿಯಲ್ ಮತ್ತೆ ಪ್ರಾರಂಭವಾದವು.