ನವದೆಹಲಿ: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 400 ಎಂಆರ್ ಹುದ್ದೆಗಳ ನೇಮಕಾತಿಯ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ನಾಳೆ (ನ.28ರಂದು) ಕೊನೆಯ ದಿನವಾಗಿದೆ.
ನಾಳೆಯ ನಂತರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಸ್ಥಗಿತಗೊಳ್ಳಲಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindiannavy.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಮೆಟ್ರಿಕ್ಯುಲೇಟ್ ಮಟ್ಟದ ಶಿಕ್ಷಣ ಪೂರ್ಣಗೊಳಿಸಿದ ಮತ್ತು 2000ರ ಅಕ್ಟೋಬರ್ 1 ರಿಂದ 2003ರ ಸೆಪ್ಟೆಂಬರ್ 30ರ ನಡುವೆ ಜನಿಸಿದ ಅಭ್ಯರ್ಥಿಗಳು (ಎರಡೂ ದಿನಾಂಕಗಳು ಒಳಗೊಂಡಂತೆ) ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಫಿಟ್‌ನೆಸ್ ಪರೀಕ್ಷೆಯ ನಂತರ ಆನ್‌ಲೈನ್ ಪರೀಕ್ಷೆಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಎಂಆರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?
1. ಅಧಿಕೃತ ವೆಬ್‌ಸೈಟ್ joinindiannavy.gov.inಗೆ ಭೇಟಿ ನೀಡಿ
2. ಸೈಟ್ನ ಮುಖಪುಟದಲ್ಲಿ ಇ-ಮೇಲ್ ಐಡಿ ರಿಜಿಸ್ಟರ್ ಮಾಡಿ
3. ನೋಂದಾಯಿಸಲಾದ ಇ-ಮೇಲ್ ಐಡಿಯಿಂದ ಲಾಗ್ಇನ್ ಆಗಿ 'ಕರೆಂಟ್ ಅಪರ್ಚ್ಯುನಿಟಿಸ್' ಆಯ್ಕೆ ಕ್ಲಿಕ್ ಮಾಡಿ
4. ಖಾಲಿ ಇರುವು ಮೇಲಿನ ಹುದ್ದೆಯ ಹೆಸರಿಗೆ ಅಪ್ಲೈ ಮಾಡಿ ಮತ್ತು ಅಗತ್ಯ ದಾಖಲಾತಿಗಳನ್ನು ನೀಡಿ
5. ಅರ್ಜಿ ಶುಲ್ಕವನ್ನು ಪಾವತಿಸಿ ಒಂದು ಪ್ರಿಂಟ್ ಕಾಪಿ ತೆಗೆದುಕೊಳ್ಳಿ
ಪರೀಕ್ಷಾ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕ ದರ ₹ 215 ನಿಗದಿಪಡಿಸಲಾಗಿದೆ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಮಾಸಿಕ ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ 14,000 ರೂ. ಸ್ಟೈಪಂಡ್ ನೀಡಲಾಗುತ್ತದೆ. ತರಬೇತಿ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ತಿಂಗಳಿಗೆ 21,700 ರೂ. ಮತ್ತು 69,100 ರೂ.ವರೆಗೆ ಸಂಬಳ ನೀಡಲಾಗುತ್ತದೆ. ಜೊತೆಗೆ ಮಾಸಿಕ 5,200 ರೂ. ದಿನ ಭತ್ಯೆ ಪಾವತಿಸುತ್ತಾರೆ.