ETV Bharat / business

ಭಾರತೀಯ ಗ್ರಾಹಕ ತಂತ್ರಜ್ಞಾನ ಸಂಸ್ಥೆಗಳು ಬ್ಲ್ಯಾಕ್ ಫ್ರೈಡೇ ಸೇಲ್​ಗೆ ಸಜ್ಜು - ಗ್ರಾಹಕ ತಂತ್ರಜ್ಞಾನ ಸಂಸ್ಥೆಗಳು ಬ್ಲ್ಯಾಕ್ ಫ್ರೈಡೇ ಸೇಲ್​ಗೆ ಸಜ್ಜು

ಬ್ಲ್ಯಾಕ್ ಫ್ರೈಡೇ ಸೇಲ್ ಸಮೀಪಿಸುತ್ತಿರುವುದರಿಂದ, ರಿಯಲ್​ ಮೀ, ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ನವೆಂಬರ್ 27 ರಿಂದ 30 ವರೆಗೆ ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿಗಳನ್ನು ಘೋಷಿಸಿವೆ.

Indian consumer tech firms gear up for Black Friday Sale
ಬ್ಲ್ಯಾಕ್ ಫ್ರೈಡೇ ಸೇಲ್​ಗೆ ರಿಯಲ್​ ಮಿ ರೆಡ್​ ಮಿ ಸಜ್ಜು
author img

By

Published : Nov 26, 2020, 5:39 PM IST

ನವದೆಹಲಿ: ಬ್ಲ್ಯಾಕ್ ಫ್ರೈಡೇ ಮಾರಾಟಕ್ಕೆ ಜಗತ್ತು ಸಜ್ಜಾಗುತ್ತಿದೆ. ಅಮೆರಿಕಲ್ಲಿ ಆಚರಿಸುವ ಥ್ಯಾಂಕ್ಸ್ ಗಿವಿಂಗ್ ಡೇ ಬಳಿಕ, ಪ್ರತೀ ವರ್ಷ ಈ ಬ್ಲ್ಯಾಕ್ ಫ್ರೈಡೇ ಸೇಲ್ ಬರುತ್ತದೆ. ಹೀಗಾಗಿ, ಈ ಬಾರಿ ನವೆಂಬರ್ 27 ರಂದು ಪ್ರಾರಂಭಗೊಂಡು 30 ರಂದು ಕೊನೆಯಾಗುವ ಬ್ಲ್ಯಾಕ್ ಫ್ರೈಡೇ ಸೇಲ್​​ನಲ್ಲಿ ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ಘೋಷಿಸಿವೆ.

ರಿಯಲ್​ ಮೀ ತನ್ನ ಬ್ಲ್ಯಾಕ್ ಫ್ರೈಡೇ ಮಾರಾಟದ ಭಾಗವಾಗಿ ಅನೇಕ ಉತ್ಪನ್ನಗಳಲ್ಲಿ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿದೆ. ರಿಯಲ್‌ ಮೀ 6 ಐ, ರಿಯಲ್‌ ಮೀ 6, ರಿಯಲ್​ ಮೀ ಎಕ್ಸ್ 3 ಸೂಪರ್ ಝೂಮ್ ಮತ್ತು ಎಕ್ಸ್ 50 ಪ್ರೊ ಸೇರಿದಂತೆ ರಿಯಲ್‌ ಮೀ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಭಾರೀ ರಿಯಾಯಿತಿ ಘೋಸಿಲಾಗಿದೆ. ವಿವಿಧ ಆರ್ಟಿಫಿಶಿಯಲ್ ಇಂಟರ್​ ನೆಟ್​ ಆಫ್ ತಿಂಗ್ಸ್ (ಎಐಒಟಿ) ಉತ್ಪನ್ನಗಳಾದ ರಿಯಲ್​ ಮೀ ಬಡ್ಸ್ ಕ್ಲಾಸಿಕ್, ರಿಯಲ್​ ಸ್ಮಾರ್ಟ್ ವಾಚ್, ರಿಯಲ್​ ಮೀ ಬಡ್ಸ್ ಏರ್ ನಿಯೋ ಮತ್ತು ರಿಯಲ್​ ಮೀ ಸ್ಮಾರ್ಟ್ ಕ್ಯಾಮ್ 360 ಡಿಗ್ರಿಗೆ ರಿಯಾಯಿತಿ ನೀಡಲಾಗ್ತಿದೆ.

ರಿಯಲ್​ ಮೀ ಸಿ 3, ರಿಯಲ್​ 6, ರಿಯಲ್​ ಮೀ 6 ಐ ಮತ್ತು ನಾರ್ಝೋ 20 ಯ ಖರೀದಿಯ ಮೇಲೆ 1 ಸಾವಿರ ರೂವರೆಗಿನ ಬ್ಲ್ಯಾಕ್ ಫ್ರೈಡೇ ರಿಯಾಯಿತಿ ಅನ್ವಯವಾಗುತ್ತವೆ. ರಿಯಲ್​ ಮೀ ಎಕ್ಸ್ 3 ಮತ್ತು ರಿಯಲ್​ ಎಕ್ಸ್ 3 ಸೂಪರ್ ಝೂಮ್​ಗಳ ಖರೀದಿಯಲ್ಲಿ 3 ಸಾವಿರ ರೂ. ನಿಂದ 4 ಸಾವಿರದವರೆಗೆ ರಿಯಾಯಿತಿ ಇದೆ. ಅದೇ ರೀತಿ ರಿಯಲ್​ ಮೀ ಎಕ್ಸ್ 50 ಪ್ರೊ ಖರೀದಿಯಲ್ಲಿ 7 ಸಾವಿರ ರೂ.ವರೆಗಿನ ಬೃಹತ್ ರಿಯಾಯಿತಿ ಇದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಐಒಟಿ ವಿಭಾಗದಲ್ಲಿ, ರಿಯಲ್​ ಮೀ ಬಡ್ಸ್ ಏರ್ ನಿಯೋ ರಿಯಾಯಿತಿ ದರ 1,999 ರೂ., ರಿಯಲ್​ ಮೀ ಬಡ್ಸ್ ವೈರ್​ಲೆಸ್​ ಪ್ರೊ 3,199 ರೂ. ಮತ್ತು ರಿಯಲ್​ ಮೀ ಬಡ್ಸ್ ಏರ್ ಪ್ರೊ 4,299 ರೂ.ಗೆ ಲಭ್ಯವಿದೆ. ಖರೀದಿದಾರರು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಬ್ಯಾಂಕ್ ಆಫರ್​ಗಳನ್ನೂ ಪಡೆಯಬಹುದು. ಜೊತೆಗೆ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ ಮೀ.ಕಾಂನಲ್ಲಿ ಆಯ್ದ ಉತ್ಪನ್ನಗಳ ಮೇಲೆ 6 ತಿಂಗಳ ಯಾವುದೇ ವೆಚ್ಚವಿಲ್ಲದ ಇಎಂಐ ಪಡೆಯಬಹುದು.

ಇದನ್ನೂ ಓದಿ : ಕೋವಿಡ್ ಎಫೆಕ್ಟ್​​: ಇ-ಕಾಮರ್ಸ್​ನಲ್ಲಿ ಶೇಕಡಾ 30 - 40ರಷ್ಟು ಬೆಳವಣಿಗೆ

ಶಿಯೋಮಿ ಕೂಡ ಬ್ಲ್ಯಾಕ್ ಫ್ರೈಡೇ ಸಮಯದಲ್ಲಿ ಎಂಐ ಮತ್ತು ರೆಡ್ಮಿ ಉತ್ಪನ್ನಗಳಿಗೆ ರಿಯಾಯಿತಿ ನೀಡುತ್ತಿವೆ. ಉತ್ಪನ್ನದ ಲಭ್ಯತೆಗೆ ಅನುಗುಣವಾಗಿ ಎಂಐ.ಕಾಂ, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿಗಳು ಲಭ್ಯವಿರುತ್ತವೆ.

ಗ್ರಾಹಕ ತಂತ್ರಜ್ಞಾನ ಕಂಪನಿ ಐರೊಬೊಟ್ ತನ್ನ ರೂಂಬಾ ಮತ್ತು ಬ್ರಾವಾ ಸಾಧನಗಳಲ್ಲಿ ರಿಯಾಯಿತಿ ಘೋಷಿಸಿದೆ. ನವೆಂಬರ್ 27 ರಂದು ಐರಾಬೊಟ್, ರೂಂಬಾ ಐ 7 + ಮತ್ತು ಬ್ರಾವಾ ಜೆಟ್ ಎಂ 6 ಫ್ಲೋರ್ ಮೋಪ್ ಸಾಧನಗಳಲ್ಲಿ ಶೇ 30 ರಷ್ಟು ರಿಯಾಯಿತಿ ನೀಡುತ್ತಿದೆ.

ಐರೊಬೊಟ್‌ನ ರೂಂಬಾಸ್ ವಿವಿಧ ಅಗತ್ಯಗಳನ್ನು ಪೂರೈಸುವ ರೋಬೋಟ್ ವ್ಯಾಕ್ಯೂಮ್​ ಆಗಿ ಹೆಸರುವಾಸಿಯಾಗಿದೆ. ನಮ್ಮ ಪ್ರಯತ್ನವು ಗ್ರಾಹಕರನ್ನು ಆಫರ್​ ಮತ್ತು ನವೀನ ಉತ್ಪನ್ನಗಳೊಂದಿಗೆ ಸಂತೋಷಗೊಳಿಸುವುದು ಮತ್ತು ಉತ್ತಮ ಉತ್ಪನ್ನ ಅನುಭವವನ್ನು ಹೆಚ್ಚುಗೊಳಿಸುವುದಾಗಿದೆ ಎಂದು ಐರೋಬೋಟ್​ನ ಏಕೈಕ ವಿತರಕ ಪ್ಯೂರ್​ಸೈಟ್ ಸಿಸ್ಟಮ್​ನ​ ಪುಲಕ್ ಸತೀಶ್ ಕುಮಾರ್ ಹೇಳಿದ್ದಾರೆ.

ಅಮೆಜಾನ್‌ನ ಗ್ಲೋಬಲ್ ಸೆಲ್ಲಿಂಗ್ ಕಾರ್ಯಕ್ರಮದಲ್ಲಿ 70 ಸಾವಿರಕ್ಕೂ ಕ್ಕೂ ಹೆಚ್ಚು ಭಾರತೀಯ ರಫ್ತುದಾರರು, ಬ್ಲ್ಯಾಕ್ ಫ್ರೈಡೇ ಮತ್ತು ಸೈಬರ್​ ಮಂಡೇ ಮಾರಾಟದ ವೇಳೆ ವಿಶ್ವದಾದ್ಯಂತದ ಗ್ರಾಹಕರಿಗೆ ಲಕ್ಷಾಂತರ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಬ್ಲ್ಯಾಕ್ ಫ್ರೈಡೇ ಸೇಲ್ ಸಾಂಪ್ರದಾಯಿಕವಾಗಿ ಯುಎಸ್ ಮತ್ತು ಯುರೋಪ್​ನಲ್ಲಿ ಒಂದು ದೊಡ್ಡ ವಿದ್ಯಮಾನವಾಗಿದೆ, ಇದು ಭಾರತೀಯ ಗ್ರಾಹಕರನ್ನು ವೇಗವಾಗಿ ಸೆಳೆಯುತ್ತದೆ. ಇದರ ಮುಂದುವರೆದ ಭಾಗವಾಗಿದೆ ಸೈಬರ್​ ಮಂಡೇ ಸೇಲ್ ನಡೆಸಲಾಗುತ್ತದೆ.

ಕಳೆದ ವರ್ಷ, ಬ್ಲ್ಯಾಕ್ ಫ್ರೈಡೇ ಸೇಲ್ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಅಡೋಬ್‌ನ ವಿಶ್ಲೇಷಣೆಯ ಪ್ರಕಾರ, ಗ್ರಾಹಕರು ಕಂಪ್ಯೂಟರ್, ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸಲು 7.4 ಬಿಲಿಯನ್ ಡಾಲರ್​ ಖರ್ಚು ಮಾಡಿದ್ದಾರೆ. ಇದು 2018 ರ ಬ್ಲ್ಯಾಕ್ ಫ್ರೈಡೇ ಮಾರಾಟದ ಅಂಕಿ ಅಂಶಕ್ಕಿಂತ 1.2 ಬಿಲಿಯನ್ ಡಾಲರ್​ ಹೆಚ್ಚಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.