ETV Bharat / business

ಕೊರೊನಾ ಸಂಜೀವಿನಿ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿನಲ್ಲೂ ಚಾಣಕ್ಷತನ ಮೆರೆದ ಮೋದಿ ಸರ್ಕಾರ - ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು

ಭಾರತ ಪ್ರಸ್ತುತ ಮಲೇರಿಯಾ ಖಾಯಿಲೆಗೆ ನೀಡುವ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿಯನ್ನು ಜಾಗತಿಕವಾಗಿ ಹೆಚ್ಚು ರಫ್ತು ಮಾಡುತ್ತಿದೆ. ಇದನ್ನು ಕೇವಲ ವಿದೇಶಿ ಸರ್ಕಾರಗಳಿಗೆ ಮಾತ್ರವೇ ನೀಡುತ್ತದೆ ವಿನಃ ಖಾಸಗಿ ಕಂಪನಿಗಳಿಗೆ ಅಲ್ಲ. ಈ ಔಷಧ ಉತ್ಪನ್ನವು ನಿಷೇಧಿತ ರಫ್ತು ಸರಕು ವಿಭಾಗದಲ್ಲಿದೆ ಎಂದು ಮೂಲಗಳು ತಿಳಿಸಿವೆ.

hydroxychloroquine
ಹೈಡ್ರಾಕ್ಸಿಕ್ಲೋರೋಕ್ವಿನ್
author img

By

Published : Apr 10, 2020, 3:38 PM IST

ನವದೆಹಲಿ: ಮಲೆರಿಯಾ ಖಾಯಿಲೆಗೆ ನೀಡುವ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್‌ (ಎಚ್‌ಸಿಕ್ಯೂ), ಕೋವಿಡ್‌ 19 ಸೋಂಕಿಗೆ ಪರಿಣಾಮಕಾರಿ ಆಗಬಲ್ಲದು ಎಂಬುದು ಜಗತಿಗೆ ಮನವರಿಕೆ ಆಗುತ್ತಿದ್ದಂತೆ ಬಹುತೇಕ ರಾಷ್ಟ್ರಗಳು ಭಾರತದ ದುಂಬಾಲು ಬಿದ್ದಿವೆ.

ಭಾರತ ಪ್ರಸ್ತುತ ಮಲೇರಿಯಾ ಖಾಯಿಲೆಗೆ ನೀಡುವ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿಯನ್ನು ಜಾಗತಿಕವಾಗಿ ಹೆಚ್ಚು ರಫ್ತು ಮಾಡುತ್ತಿದೆ. ಇದನ್ನು ಕೇವಲ ವಿದೇಶಿ ಸರ್ಕಾರಗಳಿಗೆ ಮಾತ್ರವೇ ನೀಡುತ್ತದೆ ವಿನಃ ಖಾಸಗಿ ಕಂಪನಿಗಳಿಗೆ ಅಲ್ಲ. ಈ ಔಷಧ ಉತ್ಪನ್ನವು ನಿಷೇಧಿತ ರಫ್ತು ಸರಕು ವಿಭಾಗದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಈ ಔಷಧಿಯ ರಫ್ತು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸುವ ಜಾಗತಿಕ ಬದ್ಧತೆಯ ರಾಷ್ಟ್ರವಾಗಿ ರಫ್ತು ಮಾಡಲು ನಿರ್ಧರಿಸಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ನಿಷೇಧಿತ ರಫ್ತು ಔಷಧಿಯ ಸಾಲಿನಲ್ಲಿ ಮುಂದುವರಿಯಲಿದೆ. ಖಾಸಗಿ ಕಂಪನಿಗಳಿಂದ ಖಾಸಗಿ ಕಂಪನಿಗೆ ಅಥವಾ ದೇಶಿಯ ರಫ್ತುದಾರರಿಂದ ವಿದೇಶಿ ಆಮದುದಾರರ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ನಿಷೇಧಿಸಲಾಗಿದೆ. ನೇಪಾಳ, ಶ್ರೀಲಂಕಾ ಮತ್ತು ಭೂತಾನ್‌ನಂತಹ ನೆರೆಯ ಸ್ನೇಹಪರ ದೇಶಗಳು ಭಾರತವನ್ನು ಅವಲಂಬಿಸಿವೆ. ಸರ್ಕಾರ ತನ್ನ ಒಪ್ಪಂದಕ್ಕೆ ಅನುಗುಣವಾಗಿ ಅಗತ್ಯವಾದಷ್ಟು ಔಷಧ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಹೈಡ್ರಾಕ್ಸಿಕ್ಲೋರೊಕ್ವಿನ್ ಆಮದು ಮಾಡಿಕೊಳ್ಳಲು ಇಚ್ಛಿಸುವ ರಾಷ್ಟ್ರಗಳು ತಮ್ಮ ಅರ್ಜಿಯನ್ನು ವಿದೇಶಾಂಗ ಸಚಿವಾಲಯದ ಮೂಲಕ ಸರ್ಕಾರದ ಗಮನಕ್ಕೆ ತರಬೇಕಾಗುತ್ತದೆ. ಔಷಧ ಇಲಾಖೆಯು ನೀಡಬೇಕಾದ್ ಅಗತ್ಯವನ್ನು ತೀರ್ಮಾನಿಸುತ್ತದೆ. ದೇಶದಲ್ಲಿರುವ ಲಭ್ಯತೆ ಮತ್ತು ಸ್ಥಳೀಯ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ. ಸರಕುಗಳನ್ನು ಬಿಡುಗಡೆ ಮಾಡಲು ಕಸ್ಟಮ್ಸ್ ಅಧಿಕಾರಿಗಳಿಗೆ ಪರವಾನಗಿ ಅಥವಾ ಗೋ-ಫಾರ್ವರ್ಡ್ ಸಿಗ್ನಲ್ ನೀಡಲು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್​ಟಿ) ಅನ್ನು ಶಿಫಾರಸು ಮಾಡುತ್ತದೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.