ETV Bharat / business

ಖುಷಿ - ಖುಷಿಯಾಗಿರುವ ವಿಚಾರದಲ್ಲಿ ಭಾರತೀಯರಿಗಿಂತ ಚೀನಾ, ಪಾಕಿಸ್ತಾನಿಯರೇ ವಾಸಿ! - ಯುಎನ್ ವಿಶ್ವ ಸಂತೋಷ ವರದಿ 2021 ಭಾರತ

ವಿಶ್ವ ಸಂಸ್ಥೆಯ ಜಾಗತಿಕ ಸಂತೋಷ ಸಮೀಕ್ಷೆಯ ಪ್ರಕಾರ ಫಿನ್​​​​ಲ್ಯಾಂಡ್​ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿದ್ದು ಐಸ್​ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ನೆದರ್​ಲ್ಯಾಂಡ್​, ಸ್ವೀಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ. ಜಾಗತಿಕವಾಗಿ ಅತ್ಯಂತ ದೃಢವಾದ ಬೊಕ್ಕಸ ಹೊಂದಿದ್ದರೂ ಅಮೆರಿಕ ಸಂತಸದ ವಿಷಯದಲ್ಲಿ 19ನೇ ಸ್ಥಾನ ಪಡೆದುಕೊಂಡಿದೆ.

World Happiness
World Happiness
author img

By

Published : Mar 20, 2021, 12:16 PM IST

Updated : Mar 20, 2021, 1:56 PM IST

ನ್ಯೂಯಾರ್ಕ್​: ವಿಶ್ವ ಸಂಸ್ಥೆಯ ಜಾಗತಿಕ ಸಂತೋಷ ವರದಿ 2021ರಲ್ಲಿ ಭಾರತವು 149 ರಾಷ್ಟ್ರಗಳಲ್ಲಿ 139ನೇ ಸ್ಥಾನ ಪಡೆದಿದ್ದು, 2019 ಮತ್ತು 2020ರಲ್ಲಿ ಕ್ರಮವಾಗಿ 140 ಹಾಗೂ 144ನೇ ಸ್ಥಾನದಲ್ಲಿತ್ತು.

ಈ ವರ್ಷದ ವಿಶ್ವ ಸಂತೋಷ ವರದಿಯ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ನಾವು ಎರಡು ಉದ್ದೇಶಗಳನ್ನು ಇರಿಸಿಕೊಂಡು ಸಂತಷ್ಟು ವರದಿ ಮಾಡಿದ್ದೇವೆ. ಮೊದಲನೆಯದ್ದು, ಜನರ ಜೀವನದ ರಚನೆ ಮತ್ತು ಗುಣಮಟ್ಟದ ಮೇಲೆ ಕೋವಿಡ್​-19ರ ಪರಿಣಾಮಗಳನ್ನು ಕೇಂದ್ರೀಕರಿಸುವುದು. ಎರಡನೆಯದು ಪ್ರಪಂಚದಾದ್ಯಂತದ ಸರ್ಕಾರಗಳು ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿದೆ ಎಂಬುದನ್ನು ವಿವರಣೆ ಮತ್ತು ಮೌಲ್ಯಮಾಪನ. ಕೆಲವು ದೇಶಗಳು ಇತರರಿಗಿಂತ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂಬುದನ್ನು ವಿಶೇಷವಾಗಿ ವಿವರಿಸಲು ಪ್ರಯತ್ನಿಸುತ್ತೇವೆ ಎಂದು ತನ್ ಅಧಿಕೃತ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಭಾರತದ ಲಸಿಕೆಗೆ ಹೆಚ್ಚಿದ ಬೇಡಿಕೆ: 'ಸ್ವಲ್ಪ ತಾಳ್ಮೆಯಿಂದ ಕಾಯುವಂತೆ' ರಾಷ್ಟ್ರಗಳಿಗೆ ಸೀರಮ್​ ಸಂಸ್ಥೆ ಮನವಿ

ಸಮೀಕ್ಷೆಯ ಪ್ರಕಾರ ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿದ್ದು, ಐಸ್​ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ನೆದರ್​ಲ್ಯಾಂಡ್​, ಸ್ವೀಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ. ಜಾಗತಿಕವಾಗಿ ಅತ್ಯಂತ ದೃಢವಾದ ಬೊಕ್ಕಸ ಹೊಂದಿದ್ದರೂ ಅಮೆರಿಕ ಸಂತಸದ ವಿಷಯದಲ್ಲಿ 19ನೇ ಸ್ಥಾನ ಪಡೆದುಕೊಂಡಿದೆ.

ಪಾಕಿಸ್ತಾನ ಮತ್ತು ಚೀನಾದಂತಹ ದೇಶಗಳು ಕ್ರಮವಾಗಿ 105 ಮತ್ತು 84ನೇ ಸ್ಥಾನದಲ್ಲಿವೆ. ಅಫ್ಘಾನಿಸ್ತಾನದಲ್ಲಿ ವಾಸಿಸುವ ಜನರು ತಮ್ಮ ಜೀವನದಲ್ಲಿ ಹೆಚ್ಚು ಅತೃಪ್ತರಾಗಿದ್ದಾರೆ. ಈ ನಂತರ ಜಿಂಬಾಬ್ವೆ (148), ರುವಾಂಡಾ (147), ಬೋಟ್ಸ್​ವಾನ (146) ಮತ್ತು ಲೆಸೊಥೊ (145) ಸ್ಥಾನ ಪಡೆದಿವೆ.

Last Updated : Mar 20, 2021, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.