ETV Bharat / business

ಭಾರತದ ವಿರುದ್ಧ ಚೀನಾದ ಕಚ್ಚಾ ಔಷಧಿ ಡಂಪಿಂಗ್ ವಾರ್​: ವಾಣಿಜ್ಯ ಸಚಿವಾಲಯ ಮಾಡಿದ್ದೇನು ಗೊತ್ತೇ?

ಮಕರಂದ ಲೈಫ್​ಸೈನ್ಸ್​ ಆ್ಯಂಡ್ ಸ್ಟೇರ್ಲಿ ಇಂಡಿಯಾ, ಷಧೀಯ ಕಚ್ಚಾ ವಸ್ತುವಾದ ಸೆಫ್ಟ್ರಿಯಾಕ್ಸೋನ್ ಸೋಡಿಯಂ ಸ್ಟೆರಿಲ್ ಅನ್ನು ಚೀನಾ ಭಾರತದಲ್ಲಿ ತಂದು ಎಸೆಯುತ್ತಿದೆ ಎಂದು ವಾಣಿಜ್ಯ ಸಚಿವಾಲಯದ ತನಿಖಾ ವಿಭಾಗದ ನಿರ್ದೇಶನಾಲಯದ ವಾಣಿಜ್ಯ ಪರಿಹಾರ ವಿಭಾಗಕ್ಕೆ ದೂರು ಸಲ್ಲಿಸಿದೆ.

raw material
ಕಚ್ಚಾ ಔಷಧಿ
author img

By

Published : Sep 28, 2020, 4:27 PM IST

ನವದೆಹಲಿ: ದೇಶೀಯ ಔಷಧ ತಯಾರಕರ ದೂರುಗಳ ಹಿನ್ನೆಲೆಯಲ್ಲಿ ಔಷಧೀಯ ಕಚ್ಚಾ ವಸ್ತುವಾದ ಸೆಫ್ಟ್ರಿಯಾಕ್ಸೋನ್ ಸೋಡಿಯಂ ಸ್ಟೆರಿಲ್ ಅನ್ನು ಚೀನಾದಿಂದ ಭಾರತದಲ್ಲಿ ಎಸೆದ ಬಗ್ಗೆ ತನಿಖೆ ಆರಂಭಿಸಿದೆ.

ಮಕರಂದ ಲೈಫ್​ಸೈನ್ಸ್​ ಆ್ಯಂಡ್ ಸ್ಟೇರ್ಲಿ ಇಂಡಿಯಾ, ವಾಣಿಜ್ಯ ಸಚಿವಾಲಯದ ತನಿಖಾ ವಿಭಾಗದ ಡೈರೆಕ್ಟರೇಟ್ ಜನರಲ್ ಆಫ್ ಟ್ರೇಡ್ ರೆಮಿಡೀಸ್ (ಡಿಜಿಟಿಆರ್) ಮುಂದೆ ಅರ್ಜಿ ಸಲ್ಲಿಸಿತ್ತು.

ಡಿಜಿಟಿಆರ್ ಅಧಿಸೂಚನೆಯ ಪ್ರಕಾರ, ಚೀನಾದಿಂದ ಆಮದು ಮಾಡಿಕೊಳ್ಳುವುದರಿಂದ ದೇಶೀಯ ಉದ್ಯಮಕ್ಕೆ ನಷ್ಟವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆಮದಿನ ಮೇಲೆ ಡಂಪಿಂಗ್ ವಿರೋಧಿ ಸುಂಕವನ್ನು ವಿಧಿಸುವಂತೆ ಅವರು ವಿನಂತಿಸಿದರು.

ಸೆಫ್ಟ್ರಿಯಾಕ್ಸೋನ್ ಸೋಡಿಯಂ ಕ್ರಿಮಿನಾಶಕವು ಸಕ್ರಿಯ ಔಷಧೀಯ ಘಟಕಾಂಶವಾಗಿದೆ (ಎಪಿಐ). ಉಸಿರಾಟ ತೊಂದರೆ, ಚರ್ಮದ ಸೋಂಕು ಮತ್ತು ಹೊಟ್ಟೆ ಹುಣ್ಣಿನಂತಹ ಸೋಂಕಿನ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ದೇಶೀಯ ಉದ್ಯಮವು ಸರಿಯಾಗಿ ದೃಢೀಕರಿಸಿದ ಲಿಖಿತ ಅರ್ಜಿಯ ಮತ್ತು ದೇಶೀಯ ಉದ್ಯಮವು ಸಲ್ಲಿಸಿದ ಪ್ರೈಮ್ ಫೇಸ್​ ಸಾಕ್ಷ್ಯಗಳ ಆಧಾರದ ಮೇಲೆ ಹೊರ ದೇಶದಿಂದ (ಚೀನಾ) ಉತ್ಪಾದಿಸಿದ ಅಥವಾ ರಫ್ತು ಮಾಡುವ ವಸ್ತುಗಳನ್ನು ಎಸೆಯುವ ಬಗ್ಗೆ ಪ್ರಾಧಿಕಾರವು ತನಿಖೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದೆ.

ಚೀನಾದಿಂದ ಉತ್ಪನ್ನಕ್ಕೆ ಸಂಬಂಧಿಸಿದಂತೆ ಡಂಪಿಂಗ್​ನ ಪರಿಣಾಮ ಹಾಗೂ ಸಾಗಾಟದ ಬಗ್ಗೆ ನಿರ್ಧರಿಸಲಾಗುತ್ತದೆ. ದೇಶೀಯ ತಯಾರಕರ ಮೇಲೆ ಪರಿಣಾಮ ಬೀರುವ ಉತ್ಪನ್ನವನ್ನು ಡಂಪಿಂಗ್ ಮಾಡಿದ್ದು ಸಾಬೀತಾದರೆ, ಡಂಪಿಂಗ್ ಮೇಲೆ ಸುಂಕ ಶಿಫಾರಸು ಮಾಡುತ್ತದೆ. ಹಣಕಾಸು ಸಚಿವಾಲಯ ಅದನ್ನು ಜಾರಿಗೆ ತರುತ್ತದೆ.

ತನಿಖೆಯ ಅವಧಿಯಲ್ಲಿ 2019ರ ಏಪ್ರಿಲ್- 2020ರ ಮಾರ್ಚ್ ಹಾಗೂ 2016r ಏಪ್ರಿಲ್-19ರ ಅವಧಿಯ ಡೇಟಾ ಸಹ ಪರಿಶೀಲಿಸುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರ ಪರಿಭಾಷೆಯಲ್ಲಿ ಹೇಳುವುದಾರೇ ಒಂದು ದೇಶ ಅಥವಾ ಸಂಸ್ಥೆಯು ತನ್ನ ದೇಶೀಯ ಮಾರುಕಟ್ಟೆಯಲ್ಲಿ ಆ ಉತ್ಪನ್ನದ ಬೆಲೆಗಿಂತ ಕಡಿಮೆ ಬೆಲೆಗೆ ವಸ್ತುವನ್ನು ರಫ್ತು ಮಾಡಿದಾಗ ಡಂಪಿಂಗ್ ಸಂಭವಿಸುತ್ತದೆ.

ಡಂಪಿಂಗ್ ಆಮದು ಮಾಡುವ ದೇಶದಲ್ಲಿ ಉತ್ಪನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.